‘ನಟ ಶಿವಣ್ಣ ನಮಗೆ ಬೆಂಬಲ ಕೊಡ್ತಾರೆ’; ಮೇಕೆದಾಟು ಪಾದಯಾತ್ರೆ ಬಗ್ಗೆ ಉಮಾಶ್ರೀ ಮಾತು

ಶಿವರಾಜ್​ಕುಮಾರ್​ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈ ಕಾಲ್ನಡಿಗೆ ಪೂರ್ಣಗೊಳ್ಳುವ ಮೊದಲು ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂಬುದು ಅನೇಕರ ನಂಬಿಕೆ.

ಮೇಕೆದಾಟು ಪಾದಯಾತ್ರೆಯಲ್ಲಿ ಸ್ಯಾಂಡಲ್​​ವುಡ್​​ನ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಭಾಗಿಯಾಗಬೇಕಿತ್ತು. ಭಾನುವಾರ ಆರಂಭವಾದ ಮೇಕೆದಾಟು ಪಾದಯಾತ್ರೆಯನ್ನು ಶಿವರಾಜ್​ಕುಮಾರ್​ ಅವರೇ ಉದ್ಘಾಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಬೇರೆ ಕೆಲಸಗಳು ಇದ್ದ ಕಾರಣ ಅವರು ಇದರಲ್ಲಿ ಪಾಲ್ಗೊಂಡಿಲ್ಲ. ಅವರು ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈ ಕಾಲ್ನಡಿಗೆ ಪೂರ್ಣಗೊಳ್ಳುವ ಮೊದಲು ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂಬುದು ಅನೇಕರ ನಂಬಿಕೆ. ಈ ಬಗ್ಗೆ ನಟಿ, ಕಾಂಗ್ರೆಸ್​ ನಾಯಕಿ ಉಮಾಶ್ರೀ ಮಾತನಾಡಿದ್ದಾರೆ. ‘ಶಿವಣ್ಣ ನಮ್ಮ ಹೋರಾಟಕ್ಕೆ ಸಾಥ್​ ನೀಡುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ನನಗೆ ಲೀಡರ್​ ಪಟ್ಟ ಬೇಡ; ನಿಮ್ಮ ಜತೆ ನಾನೂ ಒಬ್ಬನಾಗಿ ಇರುತ್ತೇನೆ’: ಶಿವರಾಜ್​ಕುಮಾರ್​ 

‘ಭಜರಂಗಿ 2’ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿದ ಶಿವರಾಜ್​ಕುಮಾರ್​

Published On - 9:35 am, Tue, 11 January 22

Click on your DTH Provider to Add TV9 Kannada