ಈಗಲೂ ಮಾಸ್ಕ್ ಧರಿಸದ ಡಿ ಕೆ ಶಿವಕುಮಾರ ರಾಮನಗರದಲ್ಲಿ ಹಿರಿಯ ಶಾನುಭೋಗರ ಪಾದ ಮುಟ್ಟಿ ನಮಸ್ಕರಿಸಿದರು!

ನಾವು ಈ ಮಾತನ್ನು ಪದೇಪದೆ ಹೇಳುತ್ತಿದ್ದೇವೆ. ಕೊರೋನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ದಿನೇದಿನೆ ಹೆಚ್ಚುತ್ತಿವೆ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಅನೇಕ ಜನ ಮಾಸ್ಕ್ ಧರಿಸಿರುವುದಿಲ್ಲ. ಖುದ್ದು ಶಿವಕುಮಾರ ಅವರೇ ಮಾಸ್ಕ್ ಧರಿಸಿದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.

ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಅಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಎರಡನೇ ದಿನವೂ ಕೊನೆಗೊಂಡಿದೆ. ನಮಗೆ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಎರಡನೇ ದಿನ ಸುಮಾರು 20,000 ಜನ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಸೋಮವಾರ ಒಂದು ಗಮನಾರ್ಹ ಸಂಗತಿ ಪಾದಯಾತ್ರೆ ಸಂದರ್ಭದಲ್ಲಿ ನಡೆಯಿತು. ಪಾದಯಾತ್ರೆ ರಾಮನಗರ ತಲುಪಿದ ನಂತರ ಅದರ ಮುಖಂಡತ್ವ ವಹಿಸಿಕೊಂಡಿರುವ ಡಿಕೆ ಶಿವಕುಮಾರ ಅವರು ಒಬ್ಬ ಹಿರಿಯ ನಾಗರಿಕರನ್ನು ಕಂಡಕೂಡಲೇ ಅವರ ಪಾದಮುಟ್ಟಿ ನಮಸ್ಕರಿಸಿದರು. ಅವರು ಯಾರಿರಬಹುದೆಂದು ಜೊತೆಗಿದ್ದ ಜನ ಗೊಂದಲದಲ್ಲಿರುವಾಗಲೇ ಡಿಕೆಶಿ, ಅವರನ್ನು ತಮ್ಮೂರಲ್ಲಿ ಮನೆಯ ಪಕ್ಕದಲ್ಲಿದ್ದ ಶಾನುಭೋಗರು ಎಂದು ಪರಿಚಯಿಸುತ್ತಾರಲ್ಲದೆ ಹಿರಿಯರು 1989 ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ದಿವಂಗತ ಈ ಎಸ್ ವೆಂಕಟರಾಮಯ್ಯನವರ ಭಾವ ಮತ್ತು ಈಗ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ಅಂಕಲ್ ಎಂದು ಪರಿಚಯಿಸುತ್ತಾರೆ.

ಶಿವಕುಮಾರ್ ಅವರೇ ಹೇಳಿದ ಹಾಗೆ ಅವರ ಊರಿನಲ್ಲಿ ಶಾನುಭೋಗರಿಗೆ ಸೇರಿದ ಅನೇಕ ಮನೆಗಳಿದ್ದವಂತೆ. ಶಾನುಭೋಗರಿಗೂ ಶಿವಕುಮಾರ ಅವರ ಮೇಲೆ ಅಷ್ಟೇ ಪ್ರೀತಿ ಮತ್ತು ಅಭಿಮಾನವಿದೆ. ಅವರ ಕುಟುಂದ ಎಲ್ಲ ಹಿರಿಯರ ಪರಿಚಯ ಅವರಿಗಿದೆ. ಡಿಕೆಶಿ ಅವರ ತಾತ ಮತ್ತು ಮುತ್ತಾತ ಬಗ್ಗೆಯೂ ಶಾನುಭೋಗರು ಅಭಿಮಾನದಿಂದ ಮಾತಾಡುತ್ತಾರೆ.

ಓಕೆ, ನಾವು ಈ ಮಾತನ್ನು ಪದೇಪದೆ ಹೇಳುತ್ತಿದ್ದೇವೆ. ಕೊರೋನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ದಿನೇದಿನೆ ಹೆಚ್ಚುತ್ತಿವೆ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಅನೇಕ ಜನ ಮಾಸ್ಕ್ ಧರಿಸಿರುವುದಿಲ್ಲ. ಖುದ್ದು ಶಿವಕುಮಾರ ಅವರೇ ಮಾಸ್ಕ್ ಧರಿಸಿದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದಾ ಮಾಸ್ಕ್ ಧರಿಸಿದ್ದರೂ ಸೋಂಕಿಗೊಳಗಾಗಿದ್ದಾರೆ. ಇನ್ನು ಸೋಂಕು ಶಿವಕುಮಾರ ಅವರಿಗೆ ತಾಕದಂತಿರಲು ಕೊರೊನಾ ವೈರಸ್ ಅವರ ನೆಂಟನೇನೂ ಅಲ್ಲ ತಾನೆ?

ಇದನ್ನೂ ಓದಿ:  ಗಾತ್ರದಲ್ಲಿ ತನಗಿಂತ ದೊಡ್ಡದಾದ ಹಾವನ್ನು ನುಂಗಿತೊಂದು ನಾಗರಹಾವು, ನಿಮ್ಮಲ್ಲಿ ದಿಗ್ಭ್ರಮೆ ಮೂಡಿಸುವ ವಿಡಿಯೋ ಇದು!

Published On - 9:25 pm, Mon, 10 January 22

Click on your DTH Provider to Add TV9 Kannada