ಗಾತ್ರದಲ್ಲಿ ತನಗಿಂತ ದೊಡ್ಡದಾದ ಹಾವನ್ನು ನುಂಗಿತೊಂದು ನಾಗರಹಾವು, ನಿಮ್ಮಲ್ಲಿ ದಿಗ್ಭ್ರಮೆ ಮೂಡಿಸುವ ವಿಡಿಯೋ ಇದು!

ಒಂದು ಬಡಪಾಯಿ ಹಾವನ್ನು ನಾಗರಹಾವೊಂದು ಅನಾಮತ್ತಾಗಿ ನುಂಗುತ್ತಿದೆ. ಸೋಜಿಗದ ಸಂಗತಿಯೇನೆಂದರೆ ನಾಗರಹಾವಿನ ಗಾತ್ರ ತಾನು ನುಂಗುತ್ತಿರುವ ಹಾವಿಗಿಂತ ಚಿಕ್ಕದು! ಆ ಹಾವನ್ನು ಕೊಂದು ನುಂಗುತ್ತಿದೆಯೋ ಅಥವಾ ಬದುಕಿರುವಾಗಲೇ ನುಂಗುತ್ತಿದೆಯೋ ಅಂತ ನಮಗೆ ಗೊತ್ತಾಗಿಲ್ಲ.

TV9kannada Web Team

| Edited By: Arun Belly

Jan 10, 2022 | 8:08 PM

ಕಾಡಿನಲ್ಲಿ ಒಂದು ಬಲಾಢ್ಯ ಹಾವು ದುರ್ಬಲ ಹಾವುಗಳನ್ನು ನುಂಗುತ್ತಿರಬಹುದು ಮತ್ತು ಸಾಮಾನ್ಯವೂ ಆಗಿರಬಹುದು. ನಮ್ಮಂಥ ಸಾಮಾನ್ಯ ಜನ ಅದನ್ನು ನೋಡಿರುವುದಿಲ್ಲ. ಆದರೆ, ಆರಣ್ಯ ಇಲಾಖೆಯ ಸಿಬ್ಬಂದಿ ನೋಡಿರುವ ಸಾಧ್ಯತೆ ಇದೆ. ಆದರೆ, ಇಲ್ಲೊಂದು ಅಪರೂಪದ ವಿಡಿಯೊ ಇದೆ ಮಾರಾಯ್ರೇ. ಒಂದು ಬಡಪಾಯಿ ಹಾವನ್ನು ನಾಗರಹಾವೊಂದು ಅನಾಮತ್ತಾಗಿ ನುಂಗುತ್ತಿದೆ. ಸೋಜಿಗದ ಸಂಗತಿಯೇನೆಂದರೆ ನಾಗರಹಾವಿನ ಗಾತ್ರ ತಾನು ನುಂಗುತ್ತಿರುವ ಹಾವಿಗಿಂತ ಚಿಕ್ಕದು! ಆ ಹಾವನ್ನು ಕೊಂದು ನುಂಗುತ್ತಿದೆಯೋ ಅಥವಾ ಬದುಕಿರುವಾಗಲೇ ನುಂಗುತ್ತಿದೆಯೋ ಅಂತ ನಮಗೆ ಗೊತ್ತಾಗಿಲ್ಲ. ಸಾಮಾನ್ಯವಾಗಿ ಹೆಬ್ಬಾವುಗಳು ಬೇರೆ ಹಾವುಗಳನ್ನು, ಮೊಲ, ಜಿಂಕೆಗಳಂಥ ಪ್ರಾಣಿಗಳನ್ನು ನುಂಗುವ ಬಗ್ಗೆ ನಾವು ಕೇಳಿಸಿಕೊಂಡಿದ್ದೇವೆ ಮತ್ತು ಎನಿಮಲ್ ಪ್ಲಾನೆಟ್, ನ್ಯಾಶನಲ್ ಜಿಯಾಗ್ರಾಫಿಕ್​ ಚ್ಯಾನೆಲ್​​ನಲ್ಲಿ ನೋಡಿದ್ದೇವೆ.

ಈ ವಿಡಿಯೋ ನಮಗೆ ತುಮಕೂರು ಜಿಲ್ಲೆಯ ಲಿಂಗಾಪುರ ಹೆಸರಿನ ಗ್ರಾಮದಿಂದ ಲಭ್ಯವಾಗಿದೆ. ಯಾರೋ ಈ ಅಪರೂಪದ ಸನ್ನಿವೇಶವನ್ನು ತಮ್ಮ ಫೋನಲ್ಲಿ ವಿಡಿಯೋ​ ಮಾಡಿ ನಮಗೆ ಕಳಿಸಿದ್ದಾರೆ.

ತುಮಕೂರು ಭಾಗದಲ್ಲಿ ದಿಲಿಪ್ ಹೆಸರಿನ ಉರಗ ತಜ್ಞರು ಜನಪ್ರಿಯರೆಂದೇ ಹೇಳಬೇಕು. ಇದಕ್ಕೂ ಮೊದಲು ಸಹ ನಾವು ಅವರ ಬಗ್ಗೆ ಬರೆದಿದ್ದೇವೆ. ದಿಲಿಪ್ ಅವರಂಥ ಸ್ನೇಕ್ ಎಕ್ಸ್​​​​ಪರ್ಟ್​​​ಗಳಿಂದ ಸಮಾಜಕ್ಕೆ ಬಹಳ ಸಹಾಯವಾಗುತ್ತಿದೆ. ಅವರು ಕರೆದಲ್ಲಿಗೆ ಬಂದು ಹಾವುಗಳನ್ನು ಹಿಡಿದು ಅವುಗಳ ಸುರಕ್ಷಿತ ಸ್ಥಳ ಅಂದರೆ ಕಾಡುಗಳಿಗೆ ತೆಗೆದುಕೊಂಡು ಒಯ್ದು ಬಿಡುತ್ತಾರೆ.

ಇಲ್ಲೂ ದಿಲಿಪ್ ಅದನ್ನೇ ಮಾಡಿದ್ದು. ಅವರು ಆಹುತಿಯಾಗಿರುವ ಹಾವನ್ನು ನಾಗರಹಾವಿನ ಬಾಯಿಂದ ಬಿಡಿಸುವ ಪ್ರಯತ್ನ ಮಾಡುತ್ತಾರಾದರೂ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಎರಡೂ ಹಾವಗಳನ್ನು ತಾನು ತಂದಿದ್ದ ಚೀಲದಲ್ಲಿ ಹಾಕಿಕೊಂಡು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಇದನ್ನೂ ಓದಿ:   ದೇವಸ್ಥಾನದ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು! ಇಲ್ಲಿದೆ ವೈರಲ್​ ವಿಡಿಯೋ

Follow us on

Click on your DTH Provider to Add TV9 Kannada