ಬೆಳಗಾವಿಯ ಕೆಲ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಗೊತ್ತಿದ್ದಂತಿಲ್ಲ!

ನೆರೆದಿರುವ ಮಕ್ಕಳಲ್ಲಿ ಕೆಲವರು ಮಾಸ್ಕ್​​ಗಳನ್ನು ಧರಿಸಿಲ್ಲ. ಹಲವಾರು ವಿದ್ಯಾರ್ಥಿಗಳ ಮುಖದ ಮೇಲೆ ಮಾಸ್ಕ್ ಇಲ್ಲ. ಟಿವಿ9 ಕೆಮೆರಾ ಕಂಡು ಮಾಸ್ಕ್ ಧರಿಸದವರು ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ದೂರ ಸರಿಯುತ್ತಿದ್ದಾರೆ. ಬಸ್ ಒಳಗಡೆ ಸಹ ಕೆಲ ಪ್ರಯಾಣಿಕರು ಮಾಸ್ಕ್ ಧರಿಸಿಲ್ಲ.

TV9kannada Web Team

| Edited By: Arun Belly

Jan 10, 2022 | 6:52 PM

ಲಾಕ್​​​ಡೌನ್ ಹೇರಿದರೆ ಒಂದು, ಸಡಿಲಗೊಳಿಸಿದರೆ ಮತ್ತೊಂದು. ಕಳೆದ ಶುಕ್ರವಾರದಿಂದ ಇಂದು (ಸೋಮವಾರ) ಬೆಳಗ್ಗೆವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ಡೌನ್ ತೆರವುಗೊಂಡಿದೆ. ಲಾಕ್​​​ಡೌನ್ ಸಮಯಲದಲ್ಲಿ ಜನಜೀವನ ನಿಜಕ್ಕೂ ಅಸ್ತವ್ಯಸ್ತಗೊಂಡು ಬಿಡುತ್ತದೆ. ದಿನಗೂಲಿ ನೌಕರರು, ಸಣ್ಣ ಪುಟ್ಟ ಮತ್ತು ರಸ್ತೆ ಬದಿಯ ವ್ಯಾಪಾರಿಗಳು ಬಹಳ ತೊಂದರೆ ಅನುಭವಿಸಬೇಕಾಗಿ ಬರುತ್ತದೆ. ಹಗಲು ಹೊತ್ತಲ್ಲಿ ಜನ ಮನೆಗಳಲ್ಲೇ ಉಳಿದು ಬಿಡುವುದರಿಂದ ಕೋವಿಡ್-19 ಸೋಂಕು ಒಂದಷ್ಟು ನಿಯಂತ್ರಣಗೊಳ್ಳಬಹುದು. ಆದರೆ ಲಾಕ್​​​ಡೌನ್ ನಿಯಮ ತೆರವುಗೊಂಡ ಕೂಡಲೇ ಏನಾಗುತ್ತದೆ ಅಂತ ಈ ವಿಡಿಯೋನಲ್ಲಿ ನೀವು ನೋಡಬಹುದು. ಇದನ್ನು ಟಿವಿ9 ಬೆಳಗಾವಿ ವರದಿಗಾರ ಸಹದೇವ ಮಾನೆ ಕಳಿಸಿದ್ದಾರೆ.

ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಗಳಿಗೆ ಕಾಯುತ್ತಿರುವ ವಿದ್ಯಾರ್ಥಿಗಳನ್ನು ನೀವಿಲ್ಲಿ ನೋಡಬಹುದು. ಇಲ್ಲಿ ನೆರೆದಿರುವ ಮಕ್ಕಳಲ್ಲಿ ಕೆಲವರು ಮಾಸ್ಕ್​​ಗಳನ್ನು ಧರಿಸಿಲ್ಲ. ಹಲವಾರು ವಿದ್ಯಾರ್ಥಿಗಳ ಮುಖದ ಮೇಲೆ ಮಾಸ್ಕ್ ಇಲ್ಲ. ಟಿವಿ9 ಕೆಮೆರಾ ಕಂಡು ಮಾಸ್ಕ್ ಧರಿಸದವರು ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ದೂರ ಸರಿಯುತ್ತಿದ್ದಾರೆ. ಬಸ್ ಒಳಗಡೆ ಸಹ ಕೆಲ ಪ್ರಯಾಣಿಕರು ಮಾಸ್ಕ್ ಧರಿಸಿಲ್ಲ.

ಗಮನಿಸಬೇಕಾದ ಮತ್ತೊಂದು ಸಂಗತಿಯೇನೆಂದರೆ, ಈ ವಿದ್ಯಾರ್ಥಿಗಳಿಗೆ ದೈಹಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಗೊತ್ತಿಲ್ಲದಿರುವುದು ಅಥವಾ ಗೊತ್ತಿದ್ದರೂ ಅದನ್ನು ಕಾರ್ಯರೂಪಕ್ಕೆ ತರದಿರುವುದು. ಕೊರೋನಾ ವೈರಸ್ ಹೊಸ ರೂಪಾಂತರಿ ಒಮೈಕ್ರಾನ್ ಮಾರಣಾಂತಿಕ ಅಲ್ಲದಿರಬಹುದು, ಅದರೆ ಈಗಾಗಲೇ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅದು ಅಪಾಯಕಾರಿಯೇ ಹೌದು.

ಇಲ್ಲಿರುವವರೆಲ್ಲ ವಿದ್ಯಾರ್ಥಿಗಳು. ಹಾಗಾಗಿ ಬುಧ್ಧಿವಂತರು ಹಾಗೂ ವಿವೇಕಶೀಲರು. ಬೇರೆಯವರಿಗೆ ಮಾದರಿಯಾಗಬೇಕು. ಆದರೆ, ಯಾಕೋ ಸಮೀಕರಣ ತಪ್ಪುತ್ತಿದೆ ಮಾರಾಯ್ರೇ.

ಇದನ್ನೂ ಓದಿ:   ಎದುರಾಳಿ ಬ್ಯಾಟರ್​ಗಳನ್ನು ಮೋಡಿಗೆ ಸಿಲುಕಿಸುವ ಯುಜ್ವೇಂದ್ರ ಚಹಲ್, ಧನಶ್ರೀ ಮೋಡಿಗೆ ಸಿಲುಕಿದ್ದು ಆಶ್ಚರ್ಯವಿಲ್ಲ! ವಿಡಿಯೋ ನೋಡಿ

Follow us on

Click on your DTH Provider to Add TV9 Kannada