ನಂಜನಗೂಡಿನಲ್ಲಿ ನೀವು ಮಾಸ್ಕ್ ಧರಿಸದಿದ್ದರೂ ಪೊಲಿಸರು ಸುಮ್ಮನಿರುತ್ತಾರೆ, ನಿಮ್ಮ ಜೇಬಲ್ಲಿ ದುಡ್ಡಿರಬೇಕು, ಅಷ್ಟೇ!!

ನಂಜನಗೂಡಿನಲ್ಲಿ ನೀವು ಮಾಸ್ಕ್ ಧರಿಸದಿದ್ದರೂ ಪೊಲಿಸರು ಸುಮ್ಮನಿರುತ್ತಾರೆ, ನಿಮ್ಮ ಜೇಬಲ್ಲಿ ದುಡ್ಡಿರಬೇಕು, ಅಷ್ಟೇ!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 10, 2022 | 10:30 PM

ಅವನಿಗೆ ದಂಡ ವಿಧಿಸಲು ಇನ್ಸ್​​​ಪೆಕ್ಟರ್​​ ರಸೀದಿ ಪುಸ್ತಕ ತೆಗೆಯುತ್ತಾರೆ. ಕಾರ್ಬನ್ ಅನ್ನು ಸರಿಯಾಗಿ ಜೋಡಿಸುತ್ತಾರೆ. ಪುಸ್ತಕದಲ್ಲಿ ವಿವರಗಳನ್ನು ಭರ್ತಿ ಮಾಡಿ ದಂಡದ ಮೊಬಲಗನ್ನು ಅದರಲ್ಲಿ ನಮೂದಿಸಿ ಡ್ರೈವರ್ ಕೈಗಿಡುತ್ತಾರೆ ಅಂತ ನಮಗನಿಸುವುದು ಸಹಜವೇ. ಅದಕ್ಕೇ ನಾವು ಹೇಳಿದ್ದು ಈ ಪೊಲೀಸಪ್ಪ ಒಳ್ಳೇ ನಟ ಅಂತ.

ವಾರಾಂತ್ಯದ ಲಾಕ್​ಡೌನ್​ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೆಂಗಳೂರಲ್ಲಿ ಪೊಲೀಸ್ ಇಲಾಖೆಯವರ ಪಟ್ಟ ಶ್ರಮವನ್ನು ನಾವು ಶನಿವಾರದಂದು ನಿಮಗೆ ತೋರಿಸಿದೆವು. ಅನಾವಶ್ಯಕವಾಗಿ ವಾಹನಗಳನ್ನು ರಸ್ತೆಗೆ ಬಂದ ಹಲವಾರು ಜನ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವಂತೆ ಪೊಲೀಸರು ಮಾಡಿದರು. ಜನರ ವಾಜನಗಳನ್ನು ಸೀಜ್ ಮಾಡಿ ಕೆಲವು ಕಡೆ ಮಾಸ್ಕ್ ಧರಿಸದವರಿಂದ ದಂಡವನ್ನೂ ವಸೂಲಿ ಮಾಡಲಾಯಿತು. ಇಲಾಖೆಯಲ್ಲಿ ಕೆಲಸ ಮಾಡುವವರೆಲ್ಲ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಅಂತೇನೂ ಇಲ್ಲ. ನಮ್ಮ ಮಾತನ್ನು ಮೈಸೂರು ನಂಜನಗೂಡಿನಿಂದ ಲಭ್ಯವಾಗಿರುವ ಈ ವಿಡಿಯೋ ದೃಢೀಕರಿಸುತ್ತದೆ.

ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವವರು ನಂಜನಗೂಡಿನ ಟ್ರಾಫಿಕ್ ಎ ಎಸ್ ಐ ನಾಗರಾಜ್. ಇವರು ನಿಸ್ಸಂದೇಹವಾಗಿ ನಟನೆಯಲ್ಲೂ ಪಳಗಿದ ವ್ಯಕ್ತಿ. ಅದನ್ನೂ ವಿಡಿಯೋ ಖಚಿತಪಡಿಸುತ್ತದೆ. ಇನ್ಸ್ಪೆಕ್ಟರ್ ಮಾಸ್ಕ್ ಧರಿಸದ ಒಬ್ಬ ಗೂಡ್ಸ್ ಆಟೋ ಡ್ರೈವರನ್ನು ಹಿಡಿದಿದ್ದಾರೆ. ಅವರು ಹಿಡಿದು ಪ್ರಶ್ನಿಸಿದ ನಂತರ ಡ್ರೈವರ್ ಮಾಸ್ಕ್ ಧರಿಸಿ ಇನ್ಸ್​​​ಪೆಕ್ಟರ್​​ ಎದುರು ಕೈಕಟ್ಟಿ ನಿಂತುಕೊಳ್ಳುತ್ತಾನೆ.

ಅವನಿಗೆ ದಂಡ ವಿಧಿಸಲು ಇನ್ಸ್​​​ಪೆಕ್ಟರ್​​ ರಸೀದಿ ಪುಸ್ತಕ ತೆಗೆಯುತ್ತಾರೆ. ಕಾರ್ಬನ್ ಅನ್ನು ಸರಿಯಾಗಿ ಜೋಡಿಸುತ್ತಾರೆ. ಪುಸ್ತಕದಲ್ಲಿ ವಿವರಗಳನ್ನು ಭರ್ತಿ ಮಾಡಿ ದಂಡದ ಮೊಬಲಗನ್ನು ಅದರಲ್ಲಿ ನಮೂದಿಸಿ ಡ್ರೈವರ್ ಕೈಗಿಡುತ್ತಾರೆ ಅಂತ ನಮಗನಿಸುವುದು ಸಹಜವೇ. ಅದಕ್ಕೇ ನಾವು ಹೇಳಿದ್ದು ಈ ಪೊಲೀಸಪ್ಪ ಒಳ್ಳೇ ನಟ ಅಂತ.

ಅವರು ರಸೀದಿ ಬುಕ್ ನಲ್ಲಿ ಬರೆಯುವ ಬದಲು ಅದರ ಹಾಳೆಗಳನ್ನು ತಿರುವುತ್ತಾ ನಿಲ್ಲಿತ್ತಾರೆ. ನೋಡುವವರಿಗೆ ಬೇರೆ ಇಂಪ್ರೆಶನ್ ಹೋಗಲಿ ಅಂತ ಅವರು ಹಾಗೆ ಮಾಡೋದು. ಅಷ್ಟರಲ್ಲಿ ಡ್ರೈವರ್ ಒಂದಷ್ಟು ಕಾಸು ತೆಗೆದು ಇವರ ಕೈಗಿಡುತ್ತಾನೆ. ಅದೆಷ್ಟು ಅಂತ ವಿಡಿಯೋನಲ್ಲಿ ಗೊತ್ತಾಗುತ್ತಿಲ್ಲ ಮಾರಾಯ್ರೇ. ಹಣವನ್ನು ತೆಗೆದುಕೊಳ್ಳುವ ಇನ್ಸ್​​​ಪೆಕ್ಟರ್​​ ತಡಮಾಡದೆ ಅದನ್ನು ತಮ್ಮ ಖಾಕಿ ಪ್ಯಾಂಟ್ ಹಿಂದಿನ ಜೇಬಿಗಿಳಿಸುತ್ತಾರೆ!

ಎಂಗೆ ನಮ್ಮ ಹಂಬಲ್ ಪೊಲೀಸ್ ಇನ್ಸ್​​​ಪೆಕ್ಟರ್ ನೊಗ್​ರಾಜ್!!

ಇದನ್ನೂ ಓದಿ:    Viral Video: ‘ನೀರಿದ್ದರೆ ಮಾತ್ರ ಜೀವನ!’; ಜಲಶಕ್ತಿ ಸಚಿವಾಲಯ ಹಂಚಿಕೊಂಡ ವಿಶೇಷ ವಿಡಿಯೋ ನೋಡಿ

Published on: Jan 10, 2022 10:30 PM