Viral Video: ‘ನೀರಿದ್ದರೆ ಮಾತ್ರ ಜೀವನ!’; ಜಲಶಕ್ತಿ ಸಚಿವಾಲಯ ಹಂಚಿಕೊಂಡ ವಿಶೇಷ ವಿಡಿಯೋ ನೋಡಿ
ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಸರ್ಕಾರ ಈ ಕುರಿತು ಜನರಿಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ತಿಳುವಳಿಕೆ ಮೂಡಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ.
ನೀರು ಅತ್ಯಂತ ಅಮೂಲ್ಯವಾದದ್ದು. ಪ್ರಾಣಿಗಳಿಗೆ, ಮನುಷ್ಯರಿಗೆ ಜೀವನಾಧಾರವೆಂದರೆ ತಪ್ಪಿಲ್ಲ. ಆದರೆ ಈಗ ನೀರಿನ ಮೂಲಗಳ ನಾಶದಿಂದ ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಮೂಕ ಪ್ರಾಣಿಗಳು ಬಹಳ ಕಷ್ಟ ಅನುಭವಿಸುತ್ತಿವೆ. ಟಾದ್ದರಿಂದಲೇ ಬೇಸಿಗೆ ಕಾಲದ ಸಮಯದಲ್ಲಿ ಪಕ್ಷಿಗಳಿಗೆ ಸಹಾಯವಾಗಲೆಂದು ಮನೆಯ ಹೊರಗೆ ಅಥವಾ ಟೆರೇಸ್ನಲ್ಲಿ ನೀರಿಡಿ ಎಂದು ಹೇಳುವುದುನ್ನು ನಾವು ಕೇಳಿದ್ದೇವೆ. ಪ್ರಾಣಿಗಳು ಸೇರಿದಂತೆ ಹಲವು ಬಿಸಿಲಿನಲ್ಲಿ ನೀರಿಗಾಗಿ ಪರಿತಪಿಸುವುದನ್ನು ನಾವು ನೋಡಿದ್ದೇವೆ. ಸದ್ಯ ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೋರ್ವರು ಒಂದು ಮಂಗಕ್ಕೆ ನೀರು ಕುಡಿಸುತ್ತಿದ್ದಾರೆ.
ಜಲಶಕ್ತಿ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಾಯಾರಿದ ಕೋತಿಗೆ ವ್ಯಕ್ತಿಯೊಬ್ಬ ನೀರುಣಿಸುತ್ತಿದ್ದಾನೆ. ಸಾಮಾನ್ಯವಾಗಿ ಪ್ರಾಣಿಗಳ ಹತ್ತಿರ ಹೋಗಿ ಅಥವಾ ಅವುಗಳಿಗೆ ನೇರವಾಗಿ ನೀರುಣಿಸುವುದು ಬಹಳ ಅಪರೂಪ. ಆದರೆ ಯುವಕ ಯಾವುದೇ ಭಯವಿಲ್ಲದೇ ನೀರು ನೀಡಿದ್ದಾನೆ. ಕೋತಿ ಕೂಡ ಯಾವುದೇ ಅಂಜಿಕೆಯಿಲ್ಲದೇ ನಿರ್ಭಯದಿಂದ ಸಾಕಷ್ಟು ನೀರು ಕುಡಿದಿದೆ. ಈ ಅಪರೂಪದ ಘಟನೆಯನ್ನು ಸೆರೆ ಹಿಡಿಯಲಾಗಿದೆ. ಇದನ್ನು ಜಲಶಕ್ತಿ ಸಚಿವಾಲಯ ಹಂಚಿಕೊಂಡಿದೆ.
ಸಚಿವಾಲಯವು ವಿಡಿಯೋ ಹಂಚಿಕೊಂಡು ಸಂದೇಶವನ್ನೂ ನೀಡಿದೆ. ‘ಎಲ್ಲರಿಗೂ ಬಾಯಾರಿಕೆಯಾಗುತ್ತದೆ. ಮನುಷ್ಯರು, ಪಕ್ಷಿಗಳು, ಪ್ರಾಣಿಗಳೆನ್ನದೆ ಎಲ್ಲರ ಗಂಟಲೂ ಒಣಗುತ್ತದೆ. ಯಾರೇ ಆಗಲಿ ಬಾಯಾರಿದವರಿಗೆ ನೀರು ನೀಡಿ. ನೀರಿದ್ದರೆ ಮಾತ್ರ ಜೀವನ’ ಎಂದು ಬರೆದಿದೆ. ಈ ವಿಡಿಯೋಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ವಿಡಿಯೋ ವೈರಲ್ ಆಗಿದೆ.
ಜಲಶಕ್ತಿ ಸಚಿವಾಲಯ ಹಂಚಿಕೊಂಡ ವಿಡಿಯೋ ಇಲ್ಲಿದೆ:
जल है तो जीवन है ! प्यास सबको लगती है, गला सबका सूखता है। इंसान, पशु, पक्षी- कोई भी हो, हर प्यासे को पानी पिलाएं। pic.twitter.com/Di69HnnucV
— Ministry of Jal Shakti ?? #AmritMahotsav (@MoJSDoWRRDGR) January 8, 2022
ಸಚಿವಾಲಯ ಹಂಚಿಕೊಂಡ ವಿಡಿಯೋವನ್ನು ಐಎಎಸ್ ಅಧಿಕಾರಿ ಸೋನಲ್ ಗೋಯಲ್ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ. ಅಲ್ಲದೇ ನೆಟ್ಟಿಗರು ವಿವಿಧ ಕಾಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ವಿಶ್ವದ ಎಲ್ಲಾ ಜೀವಿಗಳನ್ನು ಪ್ರೀತಿಸುವುದು ನಮ್ಮ ಕರ್ತವ್ಯ’ ಎಂದು ಒಬ್ಬರು ಬರೆದಿದ್ದರೆ, ಮತ್ತೋರ್ವರು ವಿಡಿಯೋ ಭಾವುಕವಾಗಿದೆ ಎಂದಿದ್ಧಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?
ಇದನ್ನೂ ಓದಿ: