ಪೊಲೀಸ್ ಅವತಾರದ ಮೂಲಕ ಭಕ್ತರಿಗೆ ದರ್ಶನ ನೀಡಿದ ಕಾಶಿಯ ಕೊತ್ವಾಲ ‘ಬಾಬಾ ಕಾಲಭೈರವ’
ರಿಜಿಸ್ಟಾರ್ ಹಿಡಿದು ಬಂದ ಕಾಲ ಭೈರವ ಯಾರ ಅಹವಾಲನ್ನೂ ಕೇಳುವುದಿಲ್ಲ. ಕೊರೋನಾ ಸಂಕ್ರಾಮಿಕದಂತಹ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಬಂದಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ.

ಕಾಶಿಯ ಕೊತ್ವಾಲ್ ಎಂದು ಕರೆಸಿಕೊಳ್ಳುವ ವಾರಣಾಸಿಯ ಬಾಬಾ ಕಾಲಭೈರವ ದೇವರಿಗೆ ಇದೇ ಮೊದಲ ಬಾರಿಗೆ ಪೊಲೀಸ್ ಯುನಿಫಾರ್ಮ್ ಉಡುಪಿನ ಮೂಲಕ ಅಲಂಕರಿಸಲಾಗಿದೆ. ದೇವರ ತಲೆಯ ಮೇಲೆ ಪೊಲೀಸ್ ಟೋಪಿ ಇಡಲಾಗಿದ್ದು, ಪೊಲೀಸ್ ಬ್ಯಾಡ್ಜ್, ಎಡಗೈಯಲ್ಲಿ ಬೆಳ್ಳಿಯ ಲಾಠಿ ಹಾಗೂ ಬಲಗೈಯಲ್ಲಿ ರಿಜಿಸ್ಟರ್ ಪುಸ್ತಕವನ್ನು ಹಿಡಿದ ರೀತಿ ಅಲಂಕರಿಸಲಾಗಿದೆ. ಕಾಶಿಯಲ್ಲಿರುವ ನೂರಾರು ಜನ ಭಕ್ತಿಯಿಂದ ಪೂಜಿಸುವ ಕಾಲ ಭೈರವ ದೇವರು ಪೊಲೀಸ್ ಉಡುಪನ್ನು ಧರಿಸಿದ ವಿಷಯ ತಿಳಿದು ಭಕ್ತರ ದಂಡೇ ಹರಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಲ ಭೈರವ ದೇವರ ಪೊಲೀಸ್ ಅವತಾರದ ಫೋಟೋಗಳು ವೈರಲ್ ಆಗಿದೆ.
ಬಾಬಾ ಅವತಾರವನ್ನು ನೋಡಿ ಭಕ್ತರು ರಿಜಿಸ್ಟಾರ್ ಹಿಡಿದು ಬಂದ ಕಾಲ ಭೈರವ ಯಾರ ಅಹವಾಲನ್ನೂ ಕೇಳುವುದಿಲ್ಲ. ಕೊರೋನಾ ಸಂಕ್ರಾಮಿಕದಂತಹ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಬಂದಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ. ಇನ್ನು ದೇವಸ್ಥಾನದ ಮಹಂತ್ ಅನಿಲ್ ದುಬೆ ಎನ್ನುವವರು ಮಾತನಾಡಿ, ಇದೇ ಮೊದಲ ಬಾರಿಗೆ ದೇವರಿಗೆ ಪೊಲೀಸ್ ಸಮವಸ್ತ್ರದಿಂದ ಅಲಂಕರಿಸಲಾಗಿದೆ. ದೇಶದ ಸರ್ವಜನರ ಪರವಾಗಿ, ಎಲ್ಲರ ಒಳಿತಿಗಾಗಿ ವಿಶೇಷ ಪೂಜೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ದೇಶದ ಜನರ ರಕ್ಷಣೆಗಾಗಿ ಕೋರಿ, ಎಲ್ಲರಿಗೂ ಆರೋಗ್ಯ ಮತ್ತು ಸಂತೋಷವನ್ನು ನೀಡುವಂತೆ ಕೋರಿ ಪೂಜೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾಲ ಭೈರವ ದೇವರ ಬಗ್ಗೆ ಮಾತನಾಡಿದ ಭಕ್ತರೊಬ್ಬರು, ಬಾಬಾ ಹಲವು ಅವತಾರಗಳಲ್ಲಿ ಭಕ್ತಿರಿಗೆ ದರ್ಶನ ನೀಡುತ್ತಾರೆ. ಪೊಲೀಸ್ ಅವತಾರದಲ್ಲಿ ಬಂದ ಅವರು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾರೆ. ಪೊಲೀಸರಂತೆ ಹದ್ದಿನ ಕಣ್ಣು ಇರಿಸಿ ಭೂಮಿಯ ಮೇಲೆ ನಡೆಯುತ್ತಿರುವ ಒಳಿತು ಕೆಡುಕನ್ನು ಗ್ರಹಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು
Published On - 10:30 am, Mon, 10 January 22




