ಸಖತ್ ಸ್ಟೆಪ್ ಮೂಲಕ ಮದುವೆ ಮನೆಗೆ ಆಗಮಿಸಿದ ವಧು: ವಿಡಿಯೋ ವೈರಲ್
ಸಭಾ ಕಪೂರ್ ಮದುವೆಯಲ್ಲಿ, 2016ರಲ್ಲಿ ಬಿಡುಗಡೆಯಾದ ಬಾಲಿವುಡ್ನ ಬಾರ್ ಬಾರ್ ದೇಖೋ ಚಿತ್ರದ ಸೌ ಆಸ್ಮಾನ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ವಧು ಮತ್ತು ವರನ ಎಂಟ್ರಿ ನೋಡುವುದೇ ಒಂದು ಕುತೂಹಲಕರ ಸಂಗತಿ. ಹೊಸ ಹೊಸ ಅವತಾರದಲ್ಲಿ ವಿಭಿನ್ನ ಕಲ್ಪನೆಗಳೊಂದಿಗೆ ಮಂಟಪಕ್ಕೆ ವಧುವರರು ಆಗಮಿಸುತ್ತಾರೆ. ಈ ಹಿಂದೆ ವಧುವರರನ್ನುಉಯ್ಯಾಲೆಯಲ್ಲಿ ಕರೆದುಕೊಂಡು ಬರುವುದು, ಎತ್ತಿನ ಗಾಡಿಲ್ಲಿ ಕರೆತರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿದೆ. ಇದೀಗ ಫರ್ನಿಚರ್ ಡಿಸೈನರ್ ಸಭಾ ಕಪೂರ್ ಅವರು ಅದ್ಭುತವಾಗಿ ನೃತ್ಯ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಡುವ ವಿಡಿಯೋ ವೈರಲ್ ಆಗಿದೆ. ಕಳೆದ ತಿಂಗಳು ನಡೆದ ಮದುವೆಯ ವಿಡಿಯೋ ಈಗ ವೈರಲ್ ಅಗಿದ್ದು 2 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ.
ನಿವಾಸ್ ಎನ್ನುವ ಹೋಮ್ ಡೆಕೋರೇಟಿವ್ ಫರ್ನಿಚರ್ ಉದ್ಯಮ ನಡೆಸುತ್ತಿರುವ ಸಬಾ ಕಪೂರ್ ಮದುವೆಯಲ್ಲಿ, 2016ರಲ್ಲಿ ಬಿಡುಗಡೆಯಾದ ಬಾಲಿವುಡ್ನ ಬಾರ್ ಬಾರ್ ದೇಖೋ ಚಿತ್ರದ ಸೌ ಆಸ್ಮಾನ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಸಬಾ ಕಪೂರ್ ಮದುವೆ ಮನೆಯ ಒಳಗೆ ಕಾಲಿಡುತ್ತಿದ್ದಂತೆ ನೃತ್ಯ ಆರಂಭಿಸಿದ್ದು ಅಕ್ಕಪಕ್ಕದಲ್ಲಿ ನಿಂತಿದ್ದ ಸ್ನೇಹಿತರು ಹಾಗೂ ಸಂಬಂಧಿಕರು ಸಾಥ್ ನೀಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಒಂದು ಅಚ್ಚರಿ ಕೂಡ ಕಾದಿದೆ.
View this post on Instagram
ವಿಡಿಯೋವನ್ನು YSD ವೆಡ್ಡಿಂಗ್ ಕೊರಿಯೋಗ್ರಫೀ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿ ಮಸ್ತ್ ಸ್ಟೆಪ್ ಹಾಕಿದ ವಧುವನ್ನು ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ವಿಡಿಯೋದ ಕೊನೆಯಲ್ಲಿ ವಧು ಡ್ಯಾನ್ಸ್ ಮಾಡುತ್ತಾ ವರನ ಬಳಿ ಬಂದು ರಿಂಗ್ ಒಂದನ್ನು ನೀಡುತ್ತಾಳೆ. ಮಂಡಿಯೂರಿ ವಧು ವರನಿಗೆ ಉಂಗುರ ನೀಡಿ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 6.7 ಲಕ್ಷ ವೀಕ್ಷಣೆ ಪಡೆದಿದೆ.
ಇದನ್ನೂ ಓದಿ:
Viral Photo: ಹಸಿರು ತುಂಬಿದ ತಮಿಳುನಾಡಿನ ರಸ್ತೆಯ ಫೋಟೋವನ್ನು ರೀ ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ
Published On - 11:50 am, Mon, 10 January 22