Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು
ಈಕೆ ಬಾಕ್ಸಿಂಗ್ ತರಬೇತುದಾರ ರುಸ್ಟ್ರುಮ್ ಸಾದ್ವಾಕಾಸ್ ಅವರ ಪುತ್ರಿ. ಎವ್ನಿಕಾ 4 ವರ್ಷದವಳಿದ್ದಾಗಲೇ ತನ್ನ ತಂದೆಯಿಂದ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಳು. ಆಕೆಯ ಶಕ್ತಿ ಮತ್ತು ಪರಿಶ್ರಮವನ್ನು ನೋಡಿ ಸ್ವತಃ ತಂದೆಯೇ ಬೆರಗಾಗಿದ್ದರು.
ಸಾಧನೆಗೆ ವಯಸ್ಸಿನ ಹಂಗಿಲ್ಲ. ಶ್ರದ್ಧೆ, ಇಚ್ಛಾ ಶಕ್ತಿ ಇದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಯಾವ ವಯಸ್ಸಿನಲ್ಲಿ ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ 12 ವರ್ಷದ ಬಾಲಕಿಯೇ ಸಾಕ್ಷಿ. ರಷ್ಯಾದ 12 ವರ್ಷದ ಬಾಲಕಿಯೊಬ್ಬಳು ಮರದೊಂದಿಗೆ ಬಾಕ್ಸಿಂಗ್ ಮಾಡುತ್ತಾಳೆ. ತನ್ನ ಕೈಯಲ್ಲಿ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಮರಕ್ಕೆ ಪಂಚ್ ಮಾಡುವ ಮೂಲಕ ಮರವನ್ನೇ ಒಡೆಯುವಷ್ಟು ಶಕ್ತಿ ಹೊಂದಿದ್ದಾಳೆ. ಈಕೆಯ ಸಾಧನೆಗೆ ಈಗ ಇಡೀ ಜಗತ್ತು ತಿರುಗಿ ನೋಡುತ್ತಿದೆ.
ಈ 12 ವರ್ಷದ ಬಾಲಕಿಯ ಹೆಸರು ಎವ್ನಿಕಾ ಸಾದ್ವಾಕಾಸ್. ತನ್ನ ಬಾಕ್ಸಿಂಗ್ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದಾಳೆ. ಈಕೆ ಬಾಕ್ಸಿಂಗ್ ತರಬೇತುದಾರ ರುಸ್ಟ್ರುಮ್ ಸಾದ್ವಾಕಾಸ್ ಅವರ ಪುತ್ರಿ. ಎವ್ನಿಕಾ 4 ವರ್ಷದವಳಿದ್ದಾಗಲೇ ತನ್ನ ತಂದೆಯಿಂದ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಳು. ಆಕೆಯ ಶಕ್ತಿ ಮತ್ತು ಪರಿಶ್ರಮವನ್ನು ನೋಡಿ ಸ್ವತಃ ತಂದೆಯೇ ಬೆರಗಾಗಿದ್ದರು. ಎವ್ನಿಕಾ ತನ್ನ 7 ಜನ ಸಹೋರರೊಂದಿಗೆ ರಷ್ಯಾದ ವೊರೊನೆಜ್ ಪ್ರದೇಶದಲ್ಲಿ ವಾರದ ಐದು ದಿನ ಬಾಕ್ಸಿಂಗ್ ತರಬೇತಿ ಪಡೆಯುತ್ತಾಳೆ. ಈಕೆಯ ತಾಯಿ ಅನಿಯಾ ಸಾದ್ವಿಕಾಸ್ ಮಾಜಿ ಜಿಮ್ನಾಸ್ಟಿಕ್ ಆಗಿದ್ದರು. ಎವ್ನಿಕಾ ತಾಯಿ ಹೊರತುಪಡಿಸಿ ಇವರ ಇಡೀ ಕುಟುಂಬ ಬಾಕ್ಸಿಂಗ್ ತರಬೇತುದಾರರಾಗಿದ್ದಾರೆ. ಈಕೆಯನ್ನು ಜಗತ್ತಿನ ಶಕ್ತಿಶಾಲಿ ಬಾಲಕಿ ಎಂದೂ ಕರೆಯುತ್ತಾರೆ.
Watch Little Evnika Saadvakass also known as the ‘World’s Strongest Girl’ punching down a tree using her Amazing boxing skills.
Shes has been training hard since she was three and dreams of becoming a professional boxer one day. pic.twitter.com/A4ERWjB57b
— Quarantine Traders (@QuarantineTrad1) January 8, 2022
ಎವ್ನಿಕಾ 2020ರಲ್ಲಿ 80 ಕೆಜಿ ಭಾರ ಎತ್ತುವ ಮೂಲಕ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ್ದಳು. ಈ ಮೂಲಕ ಯುಎಸ್ಎಯ ವೇಟ್ಲಿಪ್ಟಿಂಗ್ ಯೂತ್ ನ್ಯಾಷನಲ್ ಚಾಂಪಿಯನ್ಶಿಪ್ ಗೆದ್ದ ಅತಿ ಕಿರಿಯ ಬಾಲಕಿ ಎಂಬ ಪಟ್ಟ ಗಳಿಸಿದ್ದಳು. ಸದ್ಯ ಎವ್ನಿಕಾ ಬಾಕ್ಸಿಂಗ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Published On - 9:48 am, Mon, 10 January 22