ಕೊರೆಯುವ ಚಳಿಯಲ್ಲಿ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್​ನಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಯೋಧರು; ವಿಡಿಯೋ ಇಲ್ಲಿದೆ

ಕೊರೆಯುವ ಚಳಿಯಲ್ಲಿ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್​ನಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಯೋಧರು; ವಿಡಿಯೋ ಇಲ್ಲಿದೆ
ಗರ್ಭಿಣಿ ಮಹಿಳೆಯನ್ನು ಸಾಗಿಸುತ್ತಿರುವ ಭಾರತೀಯ ಸೇನೆ

Army helps to Pregnant woman: ಭಾರತೀಯ ಸೇನೆಯ ಯೋಧರು ಅನಾರೋಗ್ಯ ಹೊಂದಿದ್ದ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್​ನಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ,

TV9kannada Web Team

| Edited By: shivaprasad.hs

Jan 09, 2022 | 3:07 PM

ಉತ್ತರ ಭಾರತದಲ್ಲಿ ತಾಪಮಾನ ತೀವ್ರವಾಗಿ ಕುಸಿಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದ ನಡುವೆಯೂ ಸೈನಿಕರು ದೇಶಕ್ಕಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಈ ನಡುವೆ ಅಗತ್ಯವಿರುವವರಿಗೆ ಭಾರತೀಯ ಸೇನೆ ಹೆಗಲಾಗಿ ನಿಂತು ಸಹಾಯವನ್ನೂ ಮಾಡುತ್ತಿದೆ. ಸುರಿಯುತ್ತಿರುವ ಹಿಮದ ನಡುವೆ ಗರ್ಭಿಣಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊರೆಯುವ ಚಳಿಯಲ್ಲಿ ನಡೆದಾಡಲು ಕಷ್ಟಕರವಾದ ಪ್ರದೇಶದಲ್ಲಿ ಸೈನಿಕರು ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ವಿಡಿಯೋವನ್ನು ಸೇನೆಯ ಚಿನಾರ್ ಕಾರ್ಪ್ಸ್ ಪಡೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಬಾರಾಮುಲ್ಲಾ ಜಿಲ್ಲೆಯ ರಾಮನಗರಿ ಗಜ್ಜರ್ ಕಣಿವೆಯಲ್ಲಿ ಗರ್ಭಿಣಿಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬಸ್ಥರು ನೆರವು ನೀಡುವಂತೆ ಸೇನೆಗೆ ಮನವಿ ಮಾಡಿದರು. ಚಿನಾರ್ ಆರ್ಮಿ ವೈದ್ಯಕೀಯ ತಂಡವು ಹಿಮದಲ್ಲಿ ಹೊರಟು ಪ್ರದೇಶವನ್ನು ತಲುಪಿ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಸುರಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿತು. ಶೋಪಿಯಾನ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯನ್ನು ಗಜ್ಜರ್ ಹಿಲ್ಸ್ ನಿಂದ ಸಲಾಸನ್​ವರೆಗೆ ಒಟ್ಟು 6.5 ಕಿ.ಮೀ ದೂರವನ್ನು ಹೊತ್ತುಕೊಂಡೇ ಸಾಗಿಸಿ ಸೇನೆ ಚಿಕಿತ್ಸೆ ನೀಡಿದೆ ಎನ್ನಲಾಗಿದೆ.

ತೀವ್ರ ಹಿಮಪಾತ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆಯೂ ಯೋಧರ ಸೇವೆಗೆ ಸ್ಥಳೀಯರು ಕೃತಜ್ಞತೆ ಸೂಚಿಸಿದ್ದಾರೆ. ಇಂದು ಮಾಹಿತಿ ಹಂಚಿಕೊಂಡಿರುವ ಚಿನಾರ್ ಕಾರ್ಪ್ಸ್ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿಸಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಇಲ್ಲಿದೆ.

ಇದನ್ನೂ ಓದಿ:

Viral Video: ಪೊಲೀಸ್ ವ್ಯಾನ್​ನಲ್ಲಿ ಕರೆದೊಯ್ಯುತ್ತಿರುವಾಗಲೇ ಕೈಕೋಳ ತೊಡಿಸಿದ್ದ ಖೈದಿ ಎಸ್ಕೇಪ್; ಇಲ್ಲಿದೆ ವೈರಲ್ ವಿಡಿಯೋ

ಬಿಜೆಪಿ ಸಂಸದ ವರುಣ್​ ಗಾಂಧಿಗೆ ಕೊವಿಡ್ 19 ಸೋಂಕು; ಗಂಭೀರ ಸ್ವರೂಪದ ಲಕ್ಷಣಗಳಿವೆ ಎಂದು ಟ್ವೀಟ್​

Follow us on

Related Stories

Most Read Stories

Click on your DTH Provider to Add TV9 Kannada