AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪೊಲೀಸ್ ವ್ಯಾನ್​ನಲ್ಲಿ ಕರೆದೊಯ್ಯುತ್ತಿರುವಾಗಲೇ ಕೈಕೋಳ ತೊಡಿಸಿದ್ದ ಖೈದಿ ಎಸ್ಕೇಪ್; ಇಲ್ಲಿದೆ ವೈರಲ್ ವಿಡಿಯೋ

ಪೊಲೀಸರ ವ್ಯಾನ್​ನಿಂದ ಖೈದಿ ತಪ್ಪಿಸಿಕೊಂಡು ಹೋಗುತ್ತಿರುವ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಘಟನೆಯ ಹಿನ್ನೆಲೆಯೇನು? ಆಮೇಲೇನಾಯ್ತು? ಇಲ್ಲಿದೆ ಕುತೂಹಲಕರ ಮಾಹಿತಿ.

Viral Video: ಪೊಲೀಸ್ ವ್ಯಾನ್​ನಲ್ಲಿ ಕರೆದೊಯ್ಯುತ್ತಿರುವಾಗಲೇ ಕೈಕೋಳ ತೊಡಿಸಿದ್ದ ಖೈದಿ ಎಸ್ಕೇಪ್; ಇಲ್ಲಿದೆ ವೈರಲ್ ವಿಡಿಯೋ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Edited By: |

Updated on:Jan 09, 2022 | 4:31 PM

Share

ಬ್ರೆಜಿಲ್: ಖೈದಿಗಳು ಜೈಲಿನಿಂದ ತಪ್ಪಿಸಿಕೊಂಡು ಹೋಗುವುದನ್ನು ಎಲ್ಲರೂ ಸಿನಿಮಾದಲ್ಲಿ ನೋಡಿರುತ್ತಾರೆ. ನಿಜ ಜೀವನದಲ್ಲೂ ಇಂತಹ ಘಟನೆಗಳು ವರದಿಯಾಗುತ್ತಿರುತ್ತವೆ. ಇದೀಗ ಅಂಥದ್ದೇ ಪ್ರಕರಣವೊಂದು ವರದಿಯಾಗಿದ್ದು, ಪೊಲೀಸರು ಇದ್ದ ವ್ಯಾನ್​ನಿಂದಲೇ ಕೈಕೋಳ ತೊಡಿಸಿದ್ದ ಖೈದಿಯೊಬ್ಬ ತಪ್ಪಿಸಿಕೊಂಡಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಬ್ರೆಜಿಲ್​ನ ಪರೈಬಾದ ಅಲಗೊವಾ ನೋವಾದಲ್ಲಿ. ಪೊಲೀಸರು ಖೈದಿಯನ್ನು ವ್ಯಾನ್​ನ ಹಿಂದೆ ಕೈಕೋಳ ತೊಡಿಸಿ ಕರೆದೊಯ್ಯುತ್ತಿದ್ದರು. ರಸ್ತೆಯಲ್ಲಿ ಚಲಿಸುತ್ತಿರುವಂತೆಯೇ ಖೈದಿ ತಪ್ಪಿಸಿಕೊಂಡಿದ್ದಾನೆ. ಖೈದಿ ತಮ್ಮ ಕಣ್ಣೆದುರೇ ತಪ್ಪಿಸಿಕೊಂಡಿದ್ದರೂ ಪೊಲೀಸರಿಗೆ ಇದು ಗೊತ್ತಾಗಿಯೇ ಇಲ್ಲ. ಅಲ್ಲದೇ ವ್ಯಾನ್​ನ ಮಿರರ್​ನಲ್ಲೂ ಅವರು ಗಮನಿಸಿಲ್ಲ. ಪೊಲೀಸ್ ವ್ಯಾನ್ ಮುಂದೆ ಹೋಗಿದೆ. ಖೈದಿ ತಪ್ಪಿಸಿಕೊಂಡಿರುವುದು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದನ್ನು ಯುಟ್ಯೂಬ್​ನಲ್ಲಿ ಡಿಸೆಂಬರ್ 28ರಂದು ಅಪ್​ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.

ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ಹೊರಹಾಕಿದ್ದಾರೆ. ‘‘ನಿಜವಾಗಿಯೂ ಖೈದಿಯನ್ನು ಪೊಲೀಸ್ ವ್ಯಾನ್ ಹಿಂದೆ ಕಟ್ಟಿದ್ದರೇ?’’ ಎಂದು ಒಬ್ಬರು ಪ್ರಶ್ನಿಸಿದ್ದರೆ, ಮತ್ತೋರ್ವರು ಖೈದಿಯ ಬುದ್ಧಿವಂತಿಕೆಯ ಕುರಿತು ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ಘಟನೆಯ ಹಿನ್ನೆಲೆಯೇನು? ಬ್ರೆಜಿಲ್​ನ ಸ್ಥಳೀಯ ಸುದ್ದಿ ಮಾಧ್ಯಮಗಳ ಪ್ರಕಾರ ಖೈದಿ ವ್ಯಾನ್​ನ ಹಿಂಬಾಗಿಲು ತೆರೆದು ಎಸ್ಕೇಪ್ ಆಗಿದ್ದಾನೆ. ಅಲ್ಲದೇ ವ್ಯಾನ್​ನಿಂದ ಹೊರಬಿದ್ದ ತಕ್ಷಣ ತುಸು ಹೊತ್ತು ರಸ್ತೆಯ ಮಧ್ಯದಲ್ಲೇ ನಿಂತಿದ್ದಾನೆ. ಇದರಿಂದಾಗಿ ಪೊಲೀಸರಿಗೆ ಮಿರರ್​ನಲ್ಲಿ ಕಾಣಿಸಿಲ್ಲ ಎನ್ನಲಾಗಿದೆ. ಮತ್ತೊಂದು ಮಾಧ್ಯಮದ ಪ್ರಕಾರ ಪೊಲೀಸರಿಗೆ ಖೈದಿ ತಪ್ಪಿಸಿಕೊಂಡಿದ್ದಾನೆ ಎಂಬುದು ಅರಿವಿಗೆ ಬಂದಿದ್ದೇ ಪೊಲೀಸ್ ಠಾಣೆಗೆ ಬಂದ ಮೇಲಂತೆ!

ಈ ವರೆಗೂ ಆ ಖೈದಿಯನ್ನು ಮತ್ತೆ ಬಂಧಿಸಲಾಗಿಲ್ಲ. ಪ್ರಕರಣದ ಕುರಿತು ಮೇಲಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಖೈದಿಯನ್ನು ಇರಿಸುವ ಜಾಗದಲ್ಲಿ ಏನಾದರೂ ಸಮಸ್ಯೆಯಿದೆಯೇ ಎಂದು ಪರಿಶೀಲಿಸಲು ತಜ್ಞರನ್ನು ಸಂಪರ್ಕಿಸಿದ್ದಾರೆ ಎಂದೂ ವರದಿಗಳು ಹೇಳಿವೆ.

ಇದನ್ನೂ ಓದಿ:

Viral Video: ವೇದಿಕೆಯಲ್ಲೇ ಬಿಜೆಪಿ ಶಾಸಕನ ಕೆನ್ನೆಗೆ ಹೊಡೆದ ರೈತ; ವಿಡಿಯೋ ವೈರಲ್ ಆಗುತ್ತಿದ್ದಂತೆ ತೇಪೆ ಹಚ್ಚಿದ ಎಂಎಲ್​ಎ

ಸುಕೇಶ್​ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್​; ಕತ್ತಿನ ಮೇಲಿರುವ ಅಚ್ಚೇನು?

Published On - 12:34 pm, Sun, 9 January 22

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ