AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಕೇಶ್​ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್​; ಕತ್ತಿನ ಮೇಲಿರುವ ಅಚ್ಚೇನು?

ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ಹೊಸ ರೋಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿದೆ. ಜಾಕ್ವೆಲಿನ್​ಗೆ ಸುಕೇಶ್​ ಕಿಸ್​ ಮಾಡುತ್ತಿದ್ದಾರೆ. ಜಾಕ್ವೆಲಿನ್​ ಕತ್ತಿನಲ್ಲಿ ಒಂದು ಕಲೆ ಕಂಡಿದೆ.

ಸುಕೇಶ್​ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್​; ಕತ್ತಿನ ಮೇಲಿರುವ ಅಚ್ಚೇನು?
ಸುಕೇಶ್​ ಚಂದ್ರಶೇಖರ್​. ​ಜಾಕ್ವೆಲಿನ್​ ಫರ್ನಾಂಡಿಸ್
TV9 Web
| Edited By: |

Updated on: Jan 08, 2022 | 6:13 PM

Share

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್ ಜತೆ ಅವರು ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್​ ಫರ್ನಾಂಡಿಸ್​ ​ಮೇಲೂ ಅನುಮಾನ ಮೂಡಿದೆ. ಇತ್ತೀಚೆಗೆ ಇಬ್ಬರೂ ಆಪ್ತವಾಗಿದ್ದ ಫೋಟೋ ವೈರಲ್​ ಆಗಿತ್ತು. ಈಗ ಮತ್ತೊಂದು ಹೊಸ ಫೋಟೋ ಹೊರಬಿದ್ದಿದೆ.

ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಜತೆ ​ಜಾಕ್ವೆಲಿನ್​ ಫರ್ನಾಂಡಿಸ್ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​ ​ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಅವರು ಹಲವು ಬಾರಿ ವಿಚಾರಣೆ ಎದುರಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ಹೊಸ ರೊಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿದೆ. ಜಾಕ್ವೆಲಿನ್​ಗೆ ಸುಕೇಶ್​ ಕಿಸ್​ ಮಾಡುತ್ತಿದ್ದಾರೆ. ಜಾಕ್ವೆಲಿನ್​ ಕತ್ತಿನಲ್ಲಿ ಒಂದು ಕಲೆ ಕಂಡಿದೆ. ಸುಕೇಶ್​ ಅವರೇ ಈ ಕಲೆ ಮಾಡಿದ್ದಾರೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ.

ದೆಹಲಿ ಜೈಲಿನಲ್ಲಿ ಸುಕೇಶ್ ಚಂದ್ರಶೇಖರ್ ಇದ್ದಾರೆ. ಈತ ದೆಹಲಿ ಜೈಲಿನಲ್ಲಿ ಇದ್ದುಕೊಂಡೇ ಉದ್ಯಮಿಗಳ ಪತ್ನಿಯರಿಗೆ ಕಾಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ವರದಿ ಆಗಿದೆ. ಈ ಮೊದಲು ತಮಿಳುನಾಡಿನ ಟಿಟಿವಿ ದಿನಕರನ್​​ಗೆ ಎಐಎಡಿಎಂಕೆ ಪಕ್ಷದ ಚಿಹ್ನೆ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದ ಬಗ್ಗೆ ದೂರು ದಾಖಲಾಗಿದೆ. ಇವರ ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಜಾಕ್ವೆಲಿನ್​ಗೆ ನೀಡಿದ ಉಡುಗೊರೆ ಲಿಸ್ಟ್​ ತೆಗೆದಿಟ್ಟ ಸುಕೇಶ್​ ಚಂದ್ರಶೇಖರ್; ಅಬ್ಬಬ್ಬಾ ಇಷ್ಟೊಂದಾ?

‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು