ಜಾಕ್ವೆಲಿನ್​ಗೆ ನೀಡಿದ ಉಡುಗೊರೆ ಲಿಸ್ಟ್​ ತೆಗೆದಿಟ್ಟ ಸುಕೇಶ್​ ಚಂದ್ರಶೇಖರ್; ಅಬ್ಬಬ್ಬಾ ಇಷ್ಟೊಂದಾ?

ಜಾಕ್ವೆಲಿನ್​ ಫರ್ನಾಂಡಿಸ್​ ಜತೆ ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ.

ಜಾಕ್ವೆಲಿನ್​ಗೆ ನೀಡಿದ ಉಡುಗೊರೆ ಲಿಸ್ಟ್​ ತೆಗೆದಿಟ್ಟ ಸುಕೇಶ್​ ಚಂದ್ರಶೇಖರ್; ಅಬ್ಬಬ್ಬಾ ಇಷ್ಟೊಂದಾ?
ಜಾಕ್ವೆಲಿನ್​​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
Follow us
| Updated By: ರಾಜೇಶ್ ದುಗ್ಗುಮನೆ

Updated on: Dec 18, 2021 | 8:02 PM

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಸುಕೇಶ್​ ಚಂದ್ರಶೇಖರ್​ ಅವರು ಬಾಲಿವುಡ್​ ನಟಿಯರಿಗೆ ಸಂಕಷ್ಟ ತಂದಿಡುತ್ತಿದ್ದಾರೆ. ಅವರ ಸಂಪರ್ಕದಲ್ಲಿದ್ದ ಹೀರೋಯಿನ್​ಗಳ ಅಸಲಿ ಮುಖವನ್ನು ಬಿಚ್ಚಿಡುತ್ತಿದ್ದಾರೆ. ಪ್ರಮುಖವಾಗಿ ಜಾಕ್ವೆಲಿನ್​ ಫರ್ನಾಂಡಿಸ್​ ಬಗ್ಗೆ ಸುಕೇಶ್​ ಸಾಕಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಜಾಕ್ವೆಲಿನ್​ ಅವರಿಗೆ ತಾವು ಸಾಕಷ್ಟು ಗಿಫ್ಟ್​ ಕೊಟ್ಟಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗ ಜಾರಿ ನಿರ್ದೇಶನಾಲಯದ (ಇಡಿ) ಎದುರು ಅವರು ಶಾಕಿಂಗ್​ ಹೇಳಿಕೆ ಒಂದನ್ನು ನೀಡಿದ್ದಾರೆ.

ಜಾಕ್ವೆಲಿನ್​ ಫರ್ನಾಂಡಿಸ್​ ಜತೆ ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​ ​ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಹೀಗಿರುವಾಗಲೇ ಜಾಕ್ವೆಲಿನ್ ​ಅವರು ಸುಕೇಶ್​ ಜತೆ ಡೇಟಿಂಗ್​ ನಡೆಸುತ್ತಿದ್ದರು ಎಂದಿದ್ದರು. ಈ ಹೇಳಿಕೆ ಸೆನ್ಸೇಶನ್​ ಸೃಷ್ಟಿ ಮಾಡಿತ್ತು. ಹೀಗಿರುವಾಗಲೇ ಫೋಟೋ ಲೀಕ್​ ಆಗಿತ್ತು.

‘ನನಗೆ ಫೆಬ್ರವರಿ ತಿಂಗಳಲ್ಲಿ ಶೇಖರ್​ (ಸುಕೇಶ್​) ಪರಿಚಯ ಆಗಿತ್ತು. ಸಿನಿಮಾದಲ್ಲಿ ನಟಿಸೋ ಆಫರ್​ಅನ್ನು ಆತ ಕೊಟ್ಟಿದ್ದ. ಆತನನ್ನು ನಾನು ನಂಬಿದ್ದೆ. ಇದರ ಜತೆಗೆ ನನ್ನ ಸೋದರ ಸಂಬಂಧಿಗೆ ಆತ ಸಾಲದ ರೂಪದಲ್ಲಿ ಹಣ ನೀಡಿದ್ದ’ ಎಂದು ಜಾಕ್ವೆಲಿನ್​ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿತ್ತು. ಈಗ ಈ ಬಗ್ಗೆ ಸುಕೇಶ್​ ಮಾತನಾಡಿದ್ದಾರೆ.

‘ನಾನು 15 ಕಿವಿಯೋಲೆ ನೀಡಿದ್ದೇನೆ. ನೆಕ್ಲೆಸ್ ಉಡುಗೊರೆ ಮಾಡಿದ್ದೇನೆ. ದುಬಾರಿ ಬ್ಯಾಗ್ ನೀಡಿದ್ದೇನೆ. ಕಿವಿಯೋಲೆ ಹಾಗೂ ನೆಕ್ಲೆಸ್​ ಬೆಲೆ 7 ಕೋಟಿಗೂ ಅಧಿಕವಾಗಿರಬಹುದು. ಜಾಕ್ವೆಲಿನ್​ ಸಹೋದರಿಗೆ 1.50 ಲಕ್ಷ ಸಾಲ ನೀಡಿದ್ದಾಗಿ ಜಾಕ್ವೆಲಿನ್​ ಹೇಳಿದ್ದಾರೆ. ಅದು ಸುಳ್ಳು. ನಾನು 1.80 ಲಕ್ಷ ಹಣ ಮತ್ತು ಬಿಎಂಡಬ್ಲ್ಯೂ ಎಕ್ಸ್​5 ಉಡುಗೊರೆ ಕೊಟ್ಟಿದ್ದೇನೆ. ಇದರ ಜತೆ ಹಲವು ದುಬಾರಿ ಉಡುಗೊರೆ ಕೊಟ್ಟಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಚಾರಣೆ ವೇಳೆ ಹಲವು ರೋಚಕ ವಿಚಾರ ಬಾಯ್ಬಿಟ್ಟ ಜಾಕ್ವೆಲಿನ್​ ಫರ್ನಾಂಡಿಸ್

ಜಾಕ್ವೆಲಿನ್​ ಫರ್ನಾಂಡಿಸ್​ಗೂ ವಂಚನೆ? 36 ಲಕ್ಷ ರೂ ಬೆಕ್ಕು, 52 ಲಕ್ಷ ರೂ. ಬೆಲೆಯ ಕುದುರೆ ಬಗ್ಗೆ ಬಾಯ್ಬಿಟ್ಟ ನಟಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ