‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ
ಜಾಕ್ವೆಲಿನ್​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​

ಆರೋಪ ಸಾಬೀತು ಆಗುವುದಕ್ಕೂ ಮುನ್ನವೇ ಸುಕೇಶ್​ ಚಂದ್ರಶೇಖರ್​ ಅವರನ್ನು ವಂಚಕ ಎಂದು ಜನರು ಕರೆಯುತ್ತಿರುವುದು ಸರಿಯಲ್ಲ ಎಂದು ಅವರ ಪರ ವಕೀಲರು ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ.

TV9kannada Web Team

| Edited By: Madan Kumar

Jan 01, 2022 | 2:37 PM

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರು ಅನವಶ್ಯಕವಾಗಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಜೊತೆಗೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಡೇಟಿಂಗ್​ ಮಾಡುತ್ತಿದ್ದರು ಎಂಬುದಕ್ಕೆ ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಜಾಕ್ವೆಲಿನ್​ಗೆ ಸುಕೇಶ್​ ಚಂದ್ರಶೇಖರ್​ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಕೊಟ್ಟಿದ್ದು ಕೂಡ ಬಯಲಾಗಿದೆ. ಈ ಎಲ್ಲ ವಿಚಾರಗಳ ಕುರಿತಂತೆ ತನಿಖೆ ವೇಳೆ ಸುಕೇಶ್​​ ಬಾಯಿ ಬಿಟ್ಟಿದ್ದಾರೆ. ಆದರೆ ಅವರನ್ನು ವಂಚಕ ಎಂದು ಕರೆಯುತ್ತಿರುವುದನ್ನು ಸುಕೇಶ್ ಪರ ಪಕೀಲರು ಖಂಡಿಸಿದ್ದಾರೆ. ಈ ಕುರಿತು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಜಾಕ್ವೆಲಿನ್​ ಫರ್ನಾಂಡಿಸ್​ ಜೊತೆಗೆ ಸುಕೇಶ್​ ಚಂದ್ರಶೇಖರ್​ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಿದ್ದು ನಿಜ. ಆದರೆ ಅದು ಅವರ ವೈಯಕ್ತಿಕ ವಿಚಾರ. ಅವರ ಮೇಲಿರುವ ಆರೋಪಗಳಿಗೂ, ಈ ವೈಯಕ್ತಿಕ ರಿಲೇಷನ್​ಶಿಪ್​ಗೂ ಯಾವುದೇ ಸಂಬಂಧ ಇಲ್ಲ. ನ್ಯಾಯಾಲಯದಲ್ಲಿ ಇನ್ನೂ ಯಾವುದೇ ಆರೋಪ ಸಾಬೀತು ಆಗಿಲ್ಲ. ಅದಕ್ಕೂ ಮುನ್ನವೇ ಅವರನ್ನು ವಂಚಕ ಅಥವಾ ದರೋಡೆಕೋರ ಎಂದೆಲ್ಲ ಜನರು ಕರೆಯುತ್ತಿರುವುದು ಸರಿಯಲ್ಲ’ ಎಂದು ಸುಕೇಶ್​ ಚಂದ್ರಶೇಖರ್​ ಪರ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ಈ ಪ್ರಕರಣದಿಂದಾಗಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟು ದಿನ ಆರಾಮಾಗಿ ದೇಶ-ವಿದೇಶ ಸುತ್ತಿಕೊಂಡಿದ್ದ ಅವರು ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಣ್ಗಾವಲಿನಲ್ಲಿ ಇದ್ದಾರೆ. ಇಡಿ ಅಧಿಕಾರಿಗಳ ಅನುಮತಿ ಇಲ್ಲದೇ ಅವರು ಭಾರತ ಬಿಟ್ಟು ತೆರಳುವಂತಿಲ್ಲ. ಇದರಿಂದ ಜಾಕ್ವೆಲಿನ್​ ಫರ್ನಾಂಡಿಸ್​ಗೆ ತೊಂದರೆ ಆಗಿದೆ.

ತಮ್ಮ ಮೇಲೆ ಹೇರಿರುವ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಜಾಕ್ವೆಲಿನ್​ ಅವರು ಮನವಿ ಸಲ್ಲಿಸಿದ್ದರು. ಆದರೆ ಅದನ್ನು ಜಾರಿ ನಿರ್ದೇಶನಾಲಯ ತಳ್ಳಿ ಹಾಕಿದೆ. ಇದರಿಂದ ಜಾಕ್ವೆಲಿನ್​ಗೆ ಪೇಚಾಟ ಶುರುವಾಗಿದೆ. ನಟನೆ ಮಾತ್ರವಲ್ಲದೇ ಮಾಡೆಲಿಂಗ್​ನಲ್ಲೂ ಅವರು ಸಕ್ರಿಯರಾಗಿದ್ದಾರೆ. ಅನೇಕ ಬ್ರ್ಯಾಂಡ್​ಗಳ ಜತೆ ಈ ಮೊದಲೇ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಕೆಲಸಗಳ ಸಲುವಾಗಿ ಅವರು ವಿದೇಶಕ್ಕೆ ತೆರಳುವುದು ಅನಿವಾರ್ಯ ಆಗಿದೆ. ಹಾಗಿದ್ದರೂ ಕೂಡ ಜಾರಿ ನಿರ್ದೇಶನಾಲಯದಿಂದ ಅವರಿಗೆ ಅನುಮತಿ ಸಿಗುತ್ತಿಲ್ಲ. ಇದರಿಂದಾಗಿ ಅವರ ಆದಾಯಕ್ಕೆ ಪೆಟ್ಟು ಬಿದ್ದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

ಜಾಕ್ವೆಲಿನ್​ಗೆ 36 ಲಕ್ಷ ರೂಪಾಯಿ ಬೆಲೆಯ ಬೆಕ್ಕನ್ನು ಗಿಫ್ಟ್​ ನೀಡಿದ್ದ ಬಹುಕೋಟಿ ವಂಚನೆ ಆರೋಪಿ ಸುಕೇಶ್​

ಜಾಕ್ವೆಲಿನ್​​ಗಾಗಿ ಬರೋಬ್ಬರಿ ₹ 500 ಕೋಟಿ ಬಜೆಟ್​ನ ಸೂಪರ್​ಹೀರೋ​ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ವಂಚಕ ಸುಕೇಶ್

Follow us on

Related Stories

Most Read Stories

Click on your DTH Provider to Add TV9 Kannada