Liger First Glimpse : ‘ಲೈಗರ್​’ ಗ್ಲಿಂಪ್ಸ್​​ ನೋಡಿ ಅಭಿಮಾನಿಗಳ ರಿಯಾಕ್ಷನ್​ ಹೇಗಿತ್ತು? ಇಲ್ಲಿದೆ ವಿಡಿಯೋ

ಆಗಸ್ಟ್ ತಿಂಗಳಲ್ಲಿ ‘ಲೈಗರ್​’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಈಗ ಸಿನಿಮಾ ಬಗ್ಗೆ ಒಂದೊಂದೇ ಅಪ್​ಡೇಟ್​ ನೀಡಲಾಗುತ್ತಿದೆ.

Liger First Glimpse : ‘ಲೈಗರ್​’ ಗ್ಲಿಂಪ್ಸ್​​ ನೋಡಿ ಅಭಿಮಾನಿಗಳ ರಿಯಾಕ್ಷನ್​ ಹೇಗಿತ್ತು? ಇಲ್ಲಿದೆ ವಿಡಿಯೋ
ವಿಜಯ್​ ದೇವರಕೊಂಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 01, 2022 | 11:32 AM

2021 ಪೂರ್ಣಗೊಳ್ಳುವುದಕ್ಕೂ ಮೊದಲು ವಿಜಯ್​ ದೇವರಕೊಂಡ ಅಭಿನಯದ ‘ಲೈಗರ್​’ ಚಿತ್ರ ಗ್ಲಿಂಪ್ಸ್​ ವಿಡಿಯೋ ಬಿಡುಗಡೆ ಮಾಡಿತ್ತು. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ​ ಅವರು ಬಾಕ್ಸಿಂಗ್​ ಪಟು ಆಗಿ ಕಾಣಿಸಿಕೊಂಡಿದ್ದಾರೆ. ತೀರಾ ಬಡತನದಿಂದ ಬಂದ ಹುಡುಗನೊಬ್ಬ ಬಾಕ್ಸಿಂಗ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾನೆ. ಆತ ತುಂಬಾನೇ ಅಗ್ರೆಸ್ಸಿವ್​ ಆಗಿ ವರ್ತಿಸುತ್ತಾನೆ. ಇದು ಸಿನಿಮಾದ ಕಥೆ ಎಂಬುದು ಡಿಸೆಂಬರ್​ 31ರಂದು ರಿಲೀಸ್​ ಆದ ವಿಡಿಯೋ ಮೂಲಕ ಗೊತ್ತಾಗಿದೆ. ಈ ವಿಡಿಯೋ ರಿಲೀಸ್​ ಆದ 12 ಗಂಟೆ ಒಳಗೆ ಒಂದು ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಹಾಗಾದರೆ, ಸಿನಿಮಾದ ಗ್ಲಿಂಪ್ಸ್ ನೋಡಿದ ಪ್ರೇಕ್ಷಕರ ರಿಯಾಕ್ಷನ್​ ಹೇಗಿತ್ತು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಆಗಸ್ಟ್ ತಿಂಗಳಲ್ಲಿ ‘ಲೈಗರ್​’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಈಗ ಸಿನಿಮಾ ಬಗ್ಗೆ ಒಂದೊಂದೇ ಅಪ್​ಡೇಟ್​ ನೀಡಲಾಗುತ್ತಿದೆ. ಹೊಸ ವರ್ಷಕ್ಕೂ ಮುನ್ನ, ‘ಲೈಗರ್​’ ಚಿತ್ರದಿಂದ ಚಿಕ್ಕ ವಿಡಿಯೋ ರಿಲೀಸ್​ ಆಗಿತ್ತು. ಈ ವಿಡಿಯೋದಲ್ಲಿ ವಿಜಯ್​ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅಚ್ಚರಿ ಹೊರಹಾಕಿದ್ದಾರೆ.

ಈ ಗ್ಲಿಂಪ್ಸ್​ ಬಗ್ಗೆ ಅಭಿಮಾನಿಗಳಿಂದ ಪ್ರತಿಕ್ರಿಯೆ ಪಡೆಯಲಾಯಿತು. ಈ ವೇಳೆ ಎಲ್ಲಾ ಅಭಿಮಾನಿಗಳು ಈ ವಿಡಿಯೋ ಬಗ್ಗೆ ಅದ್ಭುತವಾಗಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಅದ್ಭುತವಾಗಿದೆ ಎಂಬಿತ್ಯಾದಿ ಮಾತುಗಳನ್ನು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಮೈಕಟ್​ ಟೈಸನ್​ ನಟಿಸುತ್ತಿರುವ ವಿಚಾರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಇದೇ ಮೊದಲ ಬಾರಿಗೆ ಅವರು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಮತ್ತು ಮೈಕ್​ ಟೈಸನ್​ ಮುಖಾಮುಖಿ ಆಗುವ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ.

ಈ ಸಿನಿಮಾವನ್ನು ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​, ಅಪೂರ್ವ ಮೆಹ್ತಾ, ಹೀರೂ ಯಶ್​ ಜೋಹರ್​ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಈ ಸಿನಿಮಾದ ಬಜೆಟ್​ 125 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಚಿತ್ರದಿಂದ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಬಿಗ್​ ಗಿಫ್ಟ್​

Vijay Devarakonda: ಮಾಸ್​ ಅವತಾರದಲ್ಲಿ ವಿಜಯ್​ ದೇವರಕೊಂಡ; ‘ಲೈಗರ್​’ ಗ್ಲಿಂಪ್ಸ್​​ ಇಷ್ಟಪಟ್ಟ ಫ್ಯಾನ್ಸ್​

Published On - 11:29 am, Sat, 1 January 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್