Katrina Kaif: 2021ರ ಕೊನೆಯ ದಿನವೂ ಜಿಮ್​ನಲ್ಲಿ ಬೆವರು ಹರಿಸಿದ ಕತ್ರಿನಾ; ಕೆಲಸದ ಕುರಿತ ನಟಿಯ ಬದ್ಧತೆಗೆ ಫ್ಯಾನ್ಸ್ ಫಿದಾ

New Year 2022: ಬಾಲಿವುಡ್ ನಟಿ ಕತ್ರಿನಾ ಕೈಫ್​ಗೆ 2021 ಬಹಳ ಸಂತಸದ ವರ್ಷ. ಅವರು ನಟಿಸಿದ ‘ಸೂರ್ಯವಂಶಿ’ ಚಿತ್ರ ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದರೆ, ನಿಜ ಜೀವನದಲ್ಲಿ ಗೆಳೆಯ ವಿಕ್ಕಿ ಕೌಶಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Katrina Kaif: 2021ರ ಕೊನೆಯ ದಿನವೂ ಜಿಮ್​ನಲ್ಲಿ ಬೆವರು ಹರಿಸಿದ ಕತ್ರಿನಾ; ಕೆಲಸದ ಕುರಿತ ನಟಿಯ ಬದ್ಧತೆಗೆ ಫ್ಯಾನ್ಸ್ ಫಿದಾ
ಕತ್ರಿನಾ ಕೈಫ್
Follow us
TV9 Web
| Updated By: shivaprasad.hs

Updated on:Jan 01, 2022 | 10:11 AM

ಬಾಲಿವುಡ್ ನಟಿ ಕತ್ರಿನಾ ಕೈಫ್​ಗೆ 2021 ಅತ್ಯಂತ ಸಂತಸ ನೀಡಿದ ವರ್ಷಗಳಲ್ಲಿ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದು. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಅವರಿಗೆ ಬಹಳ ಖುಷಿ ತಂದ ಈ ವರ್ಷಕ್ಕೆ ಅವರು ವಿಶೇಷವಾಗಿ ಗುಡ್​ಬೈ ಹೇಳಿದ್ದಾರೆ. ಹೌದು. ನಟಿಗೆ ವೃತ್ತಿ ಜೀವನದ ಬಗ್ಗೆ ಬಹಳ ಬದ್ಧತೆ ಇದೆ. ಇದು ಇತ್ತೀಚೆಗೆ ಪ್ರೂವ್ ಆಗಿತ್ತು. ನಟ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಡಿಸೆಂಬರ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವೇ ದಿನಗಳ ಹನಿಮೂನ್ ಟ್ರಿಪ್ ಮುಗಿಸಿದ ಈ ಜೋಡಿ ನಂತರ ಮತ್ತೆ ಚಿತ್ರೀಕರಣಕ್ಕೆ ಮರಳಿತ್ತು. ಅಲ್ಲದೇ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನವೇ ಮುಖ್ಯ ಎಂದು ಈ ಜೋಡಿ ಪರೋಕ್ಷವಾಗಿ ತಿಳಿಸಿತ್ತು. ಇದೀಗ ಕತ್ರಿನಾ ಅವರ ವೃತ್ತಿಪರ ಬದ್ಧತೆಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ.

ಹೌದು. ಬಾಲಿವುಡ್​ನ ಇತರ ತಾರಾ ಜೋಡಿಗಳು ಹಾಲಿಡೇ ,ಮೂಡ್​ನಲ್ಲಿದ್ದು ವಿವಿಧ ಸ್ಥಳಗಳಿಗೆ ತೆರಳಿದ್ದಾರೆ. ಅಲ್ಲದೇ ಅಲ್ಲಿಂದ ರಜೆಯನ್ನು ಎಂಜಾಯ್ ಮಾಡುತ್ತಿರುವ, ಹೊಸ ವರ್ಷದ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಕತ್ರಿನಾ ಮಾತ್ರ ಡಿಸೆಂಬರ್ 31ರಂದೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕತ್ರಿನಾ ಈ ವಿಡಿಯೋ ಹಂಚಿಕೊಂಡಿದ್ದು, ಅದನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಹಂಚಿಕೊಂಡಿದ್ದಾರೆ. ಅಲ್ಲದೇ ಕತ್ರಿನಾ ಅವರ ವೃತ್ತಿಪರ ಬದ್ಧತೆ ಹಾಗೂ 2021ರ ಕೊನೆಯ ದಿನವನ್ನೂ ವರ್ಕೌಟ್​ ತಪ್ಪಿಸದೇ ಜಿಮ್​ನಲ್ಲಿ ಬೆವರು ಹರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕತ್ರಿನಾ 2021ರ ಕೊನೆಯ ವರ್ಕೌಟ್ ಮಾಡಿದ್ದು ಹೀಗೆ:

ಕ್ರಿಸ್​ಮಸ್ ಸಂದರ್ಭದಲ್ಲಿ ಕತ್ರಿನಾ ತಮ್ಮ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ‘ಮೆರ್ರಿ ಕ್ರಿಸ್​ಮಸ್’ ಎಂದು ಹೆಸರಿಡಲಾಗಿದೆ. ಇದಲ್ಲದೇ ಕತ್ರಿನಾ ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಣ್ಣಹಚ್ಚುತ್ತಿದ್ದಾರೆ. ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಜತೆ ತೆರೆ ಹಂಚಿಕೊಳ್ಳುತ್ತಿರುವ ‘ಜೀ ಲೇ ಜರಾ’ ಚಿತ್ರವೂ ಕತ್ರಿನಾ ಬತ್ತಳಿಕೆಯಲ್ಲಿದೆ.

ಇದನ್ನೂ ಓದಿ:

ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ರಣವೀರ್​ ಸಿಂಗ್​? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ

Alia Bhatt: ಗೆಳೆಯ ರಣಬೀರ್ ಕಪೂರ್ ‘ಸೂಪರ್ ಪವರ್’ ಏನು? ಗುಟ್ಟು ಬಿಟ್ಟುಕೊಟ್ಟ ಆಲಿಯಾ

Published On - 9:59 am, Sat, 1 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ