AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಚಿತ್ರದಿಂದ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಬಿಗ್​ ಗಿಫ್ಟ್​

ಆಗಸ್ಟ್​ 25ಕ್ಕೆ ‘ಲೈಗರ್​’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಅದಕ್ಕೂ ಮೊದಲೇ ಸಿನಿಮಾ ಎಲ್ಲ ಕಡೆಗಳಲ್ಲೂ ಮನೆ ಮಾತಾಗಬೇಕು ಎನ್ನುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಚಿತ್ರದಿಂದ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಬಿಗ್​ ಗಿಫ್ಟ್​
ಲೈಗರ್​ ತಂಡ
TV9 Web
| Edited By: |

Updated on: Dec 29, 2021 | 4:28 PM

Share

ವಿಜಯ್ ದೇವರಕೊಂಡ ನಟನೆಯ ‘ಲೈಗರ್​’ ಸಿನಿಮಾ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ದೇಶಕ ಪುರಿ ಜಗನ್ನಾಥ್​ ಹಲವು ಬಗೆಯಲ್ಲಿ ಸರ್ಕಸ್​ ಮಾಡುತ್ತಿದ್ದಾರೆ. ‘ಲೈಗರ್​​’ನಲ್ಲಿ ವಿಜಯ್​ ದೇವರಕೊಂಡ ಜೊತೆ ಬಾಕ್ಸಿಂಗ್​ ಲೆಜೆಂಡ್​ ಮೈಕ್​ ಟೈಸನ್​ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಅವರು ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇನ್ನು, ಈ ಸಿನಿಮಾ ವಿಜಯ್​ ಅವರ ಮೊದಲ ಹಿಂದಿ ಚಿತ್ರ ಅನ್ನೋದು ವಿಶೇಷ. ಅಭಿಮಾನಿಗಳಿಗೆ ‘ಲೈಗರ್​’ ತಂಡ ಹೊಸ ವರ್ಷಕ್ಕೆ ಬ್ಯಾಕ್​ ಟು ಬ್ಯಾಕ್​ ಗಿಫ್ಟ್ ಕೊಡೋಕೆ ಮುಂದಾಗಿದೆ.

ಆಗಸ್ಟ್​ 25ಕ್ಕೆ ‘ಲೈಗರ್​’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಅದಕ್ಕೂ ಮೊದಲೇ ಸಿನಿಮಾ ಎಲ್ಲ ಕಡೆಗಳಲ್ಲೂ ಮನೆ ಮಾತಾಗಬೇಕು ಎನ್ನುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಒಂದು ಕಡೆ ಶೂಟಿಂಗ್​​​ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಪ್ರಚಾರ ಕಾರ್ಯ ನಡೆಸಲು ಚಿತ್ರತಂಡ ತಂತ್ರ ರೂಪಿಸಿದೆ. ಹೀಗಾಗಿ, ವರ್ಷಾಂತ್ಯಕ್ಕೆ ಮೂರು ಬಿಗ್​ ಅಪ್​ಡೇಟ್​ ನೀಡೋಕೆ ಚಿತ್ರತಂಡ ನಿರ್ಧರಿಸಿದೆ.

ಗುರುವಾರ (ಡಿಸೆಂಬರ್​ 30) ಬೆಳಗ್ಗೆ 10:30ಕ್ಕೆ ಚಿತ್ರತಂಡದಿಂದ ಸಿನಿಮಾ ಸ್ಟಿಲ್​ಗಳು​ ಲಾಂಚ್​ ಆಗುತ್ತದೆ. ಮಧ್ಯಾಹ್ನ ನಾಲ್ಕು ಗಂಟೆಗೆ ವಿಶೇಷ ಇನ್​ಸ್ಟಾ ಫಿಲ್ಟರ್​ ರಿಲೀಸ್​ ಮಾಡಲಾಗುತ್ತಿದೆ. ಡಿಸೆಂಬರ್ 31ರ ಸಂಜೆ ಚಿತ್ರತಂಡದಿಂದ ‘ಲೈಗರ್​’ ಮೊದಲ​ ಗ್ಲಿಂಪ್ಸ್​ ಬಿಡುಗಡೆ ಆಗುತ್ತಿದೆ.

ಈ ಸಿನಿಮಾದಲ್ಲಿ ಮೈಕಟ್​ ಟೈಸನ್​ ನಟಿಸುತ್ತಿರುವ ವಿಚಾರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಇದೇ ಮೊದಲ ಬಾರಿಗೆ ಅವರು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಮತ್ತು ಮೈಕ್​ ಟೈಸನ್​ ಮುಖಾಮುಖಿ ಆಗುವ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ.  ಈ ಸಿನಿಮಾವನ್ನು ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​, ಅಪೂರ್ವ ಮೆಹ್ತಾ, ಹೀರೂ ಯಶ್​ ಜೋಹರ್​ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಈ ಸಿನಿಮಾದ ಬಜೆಟ್​ 125 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ‘ಲೈಗರ್’ ಚಿತ್ರದಲ್ಲಿ​ ಅತಿಥಿ ಪಾತ್ರ ಮಾಡುವ ಮೈಕ್​ ಟೈಸನ್​ಗೆ ಹೀರೋಗಿಂತಲೂ ಹೆಚ್ಚು ಸಂಬಳ 

ಕೈಯಲ್ಲಿ ಬೆಂಕಿ ಹಿಡಿದು ಬಂದ ಮೈಕ್​ ಟೈಸನ್​; ‘ಲೈಗರ್​’ನಲ್ಲಿ ಬಾಕ್ಸಿಂಗ್​ ಲೆಜೆಂಡ್ ಫಸ್ಟ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ  

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!