ಕೈಯಲ್ಲಿ ಬೆಂಕಿ ಹಿಡಿದು ಬಂದ ಮೈಕ್​ ಟೈಸನ್​; ‘ಲೈಗರ್​’ನಲ್ಲಿ ಬಾಕ್ಸಿಂಗ್​ ಲೆಜೆಂಡ್ ಫಸ್ಟ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ  

ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ.

ಕೈಯಲ್ಲಿ ಬೆಂಕಿ ಹಿಡಿದು ಬಂದ ಮೈಕ್​ ಟೈಸನ್​; ‘ಲೈಗರ್​’ನಲ್ಲಿ ಬಾಕ್ಸಿಂಗ್​ ಲೆಜೆಂಡ್ ಫಸ್ಟ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ  
ಮೈಕ್​ ಟೈಸನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 04, 2021 | 3:53 PM

‘ಅರ್ಜುನ್​ ರೆಡ್ಡಿ’ ಖ್ಯಾತಿಯ ನಟ ವಿಜಯ್​ ದೇವರಕೊಂಡ ಟಾಲಿವುಡ್​ನ ಬೇಡಿಕೆಯ ನಟ. ಅವರು ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ವಿಶ್ವ ಬಾಕ್ಸಿಂಗ್​ ಲೆಜೆಂಡ್​ ಮೈಕ್​ ಟೈಸನ್​ ಅವರು ಎಂಟ್ರಿ ನೀಡುತ್ತಿದ್ದಾರೆ ಎನ್ನುವುದನ್ನು ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು. ಈಗ ದೀಪಾವಳಿ ಪ್ರಯುಕ್ತ ಮೈಕ್​ ಟೈಸನ್​ ಲುಕ್​ ಅನಾವರಣಗೊಂಡಿದೆ. ಇದನ್ನು ನೋಡಿ ಫ್ಯಾನ್ಸ್​ ಸಖತ್​ ಖುಷಿಯಾಗಿದ್ದಾರೆ.

ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್​’ ಸಿನಿಮಾ ತಂಡ ಭಾರತಕ್ಕೆ ಬರುವಂತೆ ಆಹ್ವಾನ ನೀಡಿತ್ತು. ಆದರೆ, ಈ ವಿಚಾರದಲ್ಲಿ ಅವರು ಷರತ್ತೊಂದನ್ನು ಹಾಕಿದ್ದರು. ತಮ್ಮ ಭಾಗದ ಶೂಟ್​ಅನ್ನು ಅಮೆರಿಕದಲ್ಲೇ ಮಾಡಬೇಕು ಎಂದು ಹೇಳಿದ್ದರು. ಇದಕ್ಕಾಗಿ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿ, ಶೂಟಿಂಗ್​ ಪೂರ್ಣಗೊಳಿಸಿತ್ತು. ಈಗ ಮೈಕ್ ಟೈಸನ್​ ಲುಕ್​ ಅನಾವರಣ ಮಾಡಲಾಗಿದೆ.

ಚಿತ್ರತಂಡ ರಿಲೀಸ್​ ಮಾಡಿರುವ ಫಸ್ಟ್​ ಲುಕ್​ ಸಾಕಷ್ಟು ಗಮನ ಸೆಳೆದಿದೆ. ಮೈಕ್​ ಮುಖದಲ್ಲಿ ಕ್ರೋಧ ಕುದಿಯುತ್ತಿದೆ. ಕೈಯಲ್ಲಿ ಬೆಂಕಿಯ ಚೆಂಡಿದೆ. ಈ ಪೋಸ್ಟರ್​ ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಸಿನಿಮಾದಲ್ಲಿ ಅವರ ಪೋರ್ಷನ್ ಹೇಗಿರಲಿದೆ ಎನ್ನುವ ಕುತೂಹಲವೂ ಮೂಡಿದೆ.

ಈ ಚಿತ್ರದಲ್ಲಿ ಮೈಕ್​ ಟೈಸನ್​ ಮಾಡುತ್ತಿರುವುದು ಒಂದು ಅತಿಥಿ ಪಾತ್ರ ಅಷ್ಟೇ. ಕ್ಲೈಮ್ಯಾಕ್ಸ್​ಗಿಂತಲೂ ಮುನ್ನ ಬರುವ ದೃಶ್ಯದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕಾಗಿ ಅವರು ದುಬಾರಿ ಸಂಭಾವನೆಯನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ. ಅದು ವಿಜಯ್​ ದೇವರಕೊಂಡ ಅವರ ಸಂಬಳಕ್ಕಿಂತಲೂ ದೊಡ್ಡ ಮೊತ್ತ ಎಂಬ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು.

‘ಕಿಂಗ್​ ಆಫ್​ ದಿ ರಿಂಗ್​ ಎನಿಸಿಕೊಂಡ ಮೈಕ್​ ಟೈಸನ್​ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಮ್ಮ ಲೈಗರ್​ ತಂಡದಿಂದ ಸ್ವಾಗತ’ ಎಂದು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್​ ಜೋಹರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ವಿಜಯ್​ ದೇವರಕೊಂಡ ಸಿನಿಮಾ ತಂಡಕ್ಕೆ ಸಂಕಷ್ಟ; ಮೈಕ್​ ಟೈಸನ್​ ಜತೆ ಸಾಧ್ಯವಾಗುತ್ತಿಲ್ಲ ಶೂಟ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ