AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಕ್ರಿಕೆಟ್.. ಸುತ್ತಾಟ.. ಆಥಿಯಾ..; 2021ಕ್ಕೆ ಪ್ರೀತಿಯ ಧನ್ಯವಾದ ಹೇಳಿದ ಕೆಎಲ್ ರಾಹುಲ್!

Athiya Shetty: ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜತೆಯಾಗಿ ಸುತ್ತಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಕ್ರಿಕೆಟ್ ತಾರೆ ರಾಹುಲ್ ಇದೀಗ 2021ರ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಥಿಯಾ ಜತೆಗಿನ ಅಪರೂಪದ ಚಿತ್ರಗಳೂ ಇವೆ.

KL Rahul: ಕ್ರಿಕೆಟ್.. ಸುತ್ತಾಟ.. ಆಥಿಯಾ..; 2021ಕ್ಕೆ ಪ್ರೀತಿಯ ಧನ್ಯವಾದ ಹೇಳಿದ ಕೆಎಲ್ ರಾಹುಲ್!
ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ
TV9 Web
| Edited By: |

Updated on:Jan 01, 2022 | 2:57 PM

Share

2022 ಆರಂಭವಾಗುತ್ತಿದಂತೆಯೇ ತಾರೆಯರೆಲ್ಲರೂ 2021 ಹೇಗಿತ್ತು ಎಂಬುದನ್ನು ವಿಡಿಯೋ, ಫೋಟೋಗಳ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಹಲವು ಅಪರೂಪದ ಚಿತ್ರಗಳೂ ಸೇರಿವೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ತಂಡವನ್ನು ಮುನ್ನಡೆಸಲಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಕೂಡ ಈ ಟ್ರೆಂಡ್​ನಿಂದ ಹೊರತಾಗಿಲ್ಲ. 2021 ಕೆ.ಎಲ್​ ರಾಹುಲ್​ಗೆ ವೃತ್ತಿ ಜೀವನ ಎಷ್ಟು ದೊಡ್ಡ ಯಶಸ್ಸು ನೀಡಿತೋ ವೈಯಕ್ತಿಕ ಜೀವನ ಅಷ್ಟೇ ಸುದ್ದಿಯಾಗಿತ್ತು. ಹೌದು. ಬಾಲಿವುಡ್ ನಟಿ ಆಥಿಯಾ ಶೆಟ್ಟಿ (Athiya Shetty) ಹಾಗೂ ರಾಹುಲ್ ಜತೆಗೆ ಸುತ್ತಾಡುತ್ತಿದ್ದರೂ ಕೂಡ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆದರೆ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಆಥಿಯಾ ಕೂಡ ರಾಹುಲ್ ಜತೆಯಲ್ಲಿ ತೆರಳಿದ್ದರು. ಅಲ್ಲಿಂದ ಈರ್ವರ ಸಂಬಂಧ ಅಧಿಕೃತವಾಗಿತ್ತು.

ಇತ್ತೀಚೆಗೆ ಆಥಿಯಾ ಸೋದರ ಅಹಾನ್ ಶೆಟ್ಟಿ ಅಭಿನಯದ ‘ತಡಪ್’ ಚಿತ್ರದ ಪ್ರೀಮಿಯರ್​ನಲ್ಲಿ ಈ ಜೋಡಿ ರೆಡ್​ ಕಾರ್ಪೆಟ್​ನಲ್ಲಿ ಮೊದಲ ಬಾರಿಗೆ ಜತೆಯಾಗಿ ಹೆಜ್ಜೆಹಾಕಿತ್ತು. ಈರ್ವರೂ ಅದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡು, ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದರು. ಆ ಮೂಲಕ ವದಂತಿಗಳಿಗೆ ಪೂರ್ಣವಿರಾಮ ಹಾಕಿದ್ದರು.

ಇದೀಗ ರಾಹುಲ್ 2021ರ ಎಲ್ಲಾ ಸುಂದರ ಕ್ಷಣಗಳಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಥಿಯಾ ಹಾಗೂ ರಾಹುಲ್ ಜತೆಯಿರುವ ಹಲವು ಚಿತ್ರಗಳಿವೆ. ವಿಶೇಷವೆಂದರೆ ಅವುಗಳಲ್ಲಿ ಬಹಳಷ್ಟು ಚಿತ್ರಗಳನ್ನು ಈ ಹಿಂದೆ ಎಲ್ಲೂ ಹಂಚಿಕೊಳ್ಳಲಾಗಿಲ್ಲ. ಈ ಮೂಲಕ ಫ್ಯಾನ್ಸ್​​​ಗೆ ರಾಹುಲ್ ಸರ್ಪ್ರೈಸ್ ನೀಡಿದ್ದಾರೆ. ಪೋಸ್ಟ್​ನಲ್ಲಿ ಅವರು ‘ಥ್ಯಾಂಕ್ಯೂ 2021’ ಎಂದು ಬರೆದುಕೊಂಡಿರುವ ರಾಹುಲ್ ಸುಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಕ್ರಿಕೆಟ್​​- ಸುತ್ತಾಟದ ನೆನಪುಗಳು ಹಾಗೂ ಆಥಿಯಾ ಜತೆಗಿರುವ ಅಪರೂಪದ ಚಿತ್ರಗಳಿವೆ. ಇದು ರಾಹುಲ್ ಹಾಗೂ ಆಥಿಯಾ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದ್ದು, ವೈರಲ್ ಆಗಿದೆ.

ಕೆ.ಎಲ್​ ರಾಹುಲ್ ಹಂಚಿಕೊಂಡ ವಿಡಿಯೋ ಇಲ್ಲಿದೆ:

View this post on Instagram

A post shared by KL Rahul? (@rahulkl)

ಆಥಿಯಾ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಆ ಚಿತ್ರದಲ್ಲಿ ಸೂರಜ್ ಪಾಂಚೋಲಿ ಕಾಣಿಸಿಕೊಂಡಿದ್ದರು. ನಂತರ ಅವರು ‘ಮುಬಾರಕನ್’ ಹಾಗೂ ‘ಮೋತಿಚೋರ್ ಚಕ್ನಾಚೋರ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಕೆಲವು ಸಮಯದ ಹಿಂದೆ ಜಾಹಿರಾತೊಂದರಲ್ಲಿ ರಾಹುಲ್ ಹಾಗೂ ಆಥಿಯಾ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಆಥಿಯಾ ತಂದೆ ಸುನೀಲ್ ಶೆಟ್ಟಿ ಮಗಳಿಗೆ ಸದಾ ಕಾಲ ಬೆಂಬಲವಾಗಿ ನಿಂತಿದ್ದಾರೆ. ಸಂದರ್ಶನಗಳಲ್ಲಿ ರಾಹುಲ್ ಅವರನ್ನು ಸುನೀಲ್ ಹೊಗಳಿದ್ದಾರೆ. ಅಲ್ಲದೇ ರಾಹುಲ್ ಆಥಿಯಾ ಸಂಬಂಧದ ಕುರಿತು ಒಮ್ಮೆ ಹಾಸ್ಯ ಚಟಾಕಿಯನ್ನೂ ಹಾರಿಸಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘ಈರ್ವರೂ ಒಳ್ಳೆಯ ಜೋಡಿ’ ಎಂದಿದ್ದ ಸುನೀಲ್ ಶೆಟ್ಟಿ ನಂತರ ‘ತೆರೆಯ ಮೇಲೆ’ ಎಂದು ನಕ್ಕಿದ್ದರು. ಜನ್ಮದಿನದ ಸಂದರ್ಭಗಳಲ್ಲಿ ರಾಹುಲ್- ಸುನೀಲ್ ಪರಸ್ಪರ ಶುಭಕೋರಿದ್ದು ದೊಡ್ಡ ಸುದ್ದಿಯಾಗಿತ್ತು. 2022ರಲ್ಲಿ ರಾಹುಲ್ ಹಾಗೂ ಆಥಿಯಾ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದೇ ಎಂಬುದು ಅಭಿಮಾನಿಗಳ ಸದ್ಯದ ಕುತೂಹಲ!

ಇದನ್ನೂ ಓದಿ:

‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

RRR Movie: ಮತ್ತೆ ಮುಂದೂಡಲ್ಪಟ್ಟ ‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ; ಹೊಸ ರಿಲೀಸ್​ ದಿನಾಂಕ ಯಾವಾಗ?

Published On - 2:57 pm, Sat, 1 January 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ