ದೇವಸ್ಥಾನದ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು! ಇಲ್ಲಿದೆ ವೈರಲ್​ ವಿಡಿಯೋ

ದೇವಸ್ಥಾನದ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು! ಇಲ್ಲಿದೆ ವೈರಲ್​ ವಿಡಿಯೋ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ

ಕೇರಳದ ಒಂದು ದೇವಸ್ಥಾನದಲ್ಲಿ ವಾರ್ಷಿಕ ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು ‘ಸಾಮಿ ಸಾಮಿ..’ ಹಾಡಿನ ಟ್ಯೂನ್​ ನುಡಿಸಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ.

TV9kannada Web Team

| Edited By: Madan Kumar

Jan 10, 2022 | 11:46 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಚಾರ್ಮ್​ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ‘ಪುಷ್ಪ’  (Pushpa Movie) ಸಿನಿಮಾದಿಂದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಚಿತ್ರದಲ್ಲಿ ಅವರ ಶ್ರೀವಲ್ಲಿ ಎಂಬ ಪಾತ್ರ ಮಾಡಿದ್ದಾರೆ. ಹಾಡುಗಳಲ್ಲಿ (Pushpa Movie Songs) ಅವರು ಹೈಲೈಟ್​ ಆಗಿದ್ದಾರೆ. ಅಲ್ಲು ಅರ್ಜುನ್​ (Allu Arjun) ಜೊತೆ ಅವರು ಹೆಜ್ಜೆ ಹಾಕಿರುವ ‘ಸಾಮಿ ಸಾಮಿ..’ ಹಾಡು ಸಖತ್​ ಫೇಮಸ್​ ಆಗಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿಬಂದ ಈಗ ಹಾಡು ಸೂಪರ್​ ಹಿಟ್​ ಆಗಿದೆ. ಎಷ್ಟರಮಟ್ಟಿಗೆಂದರೆ, ದೇವಸ್ಥಾನದ ಪೂಜೆ ಸಮಯದಲ್ಲೂ ‘ಸಾಮಿ ಸಾಮಿ..’ ಗೀತೆ (Sami Sami Song) ಕೇಳಿಸುತ್ತಿದೆ! ಇದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ​ ಹರಿದಾಡುತ್ತಿದೆ. ಅದನ್ನು ಕಂಡು ಎಲ್ಲರೂ ಅಚ್ಚರಿಪಡುತ್ತಿದ್ದಾರೆ.

ದೇವಸ್ಥಾನದ ಉತ್ಸವಗಳಲ್ಲಿ ಅನೇಕ ಬಗೆಯ ವಾದ್ಯಗಳನ್ನು ನುಡಿಸುವುದು ವಾಡಿಕೆ. ಕೇರಳದ ಒಂದು ದೇವಸ್ಥಾನದಲ್ಲಿ ವಾರ್ಷಿಕ ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು ‘ಸಾಮಿ ಸಾಮಿ..’ ಹಾಡಿನ ಟ್ಯೂನ್​ ನುಡಿಸಿದ್ದಾರೆ. ಆ ವಿಡಿಯೋವನ್ನು ಅನೇಕರು ಸೋಶಿಯಲ್​ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ‘ನಿರೀಕ್ಷೆಗೂ ಮೀರಿ ಸಾಮಿ ಸಾಮಿ ಹಾಡು ಹಿಟ್​ ಆಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ’ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

‘ಪುಷ್ಪ’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿವೆ. ಈ ಹಿಂದೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ..’ ಹಾಡಿನ ಬಗ್ಗೆ ಮಾತನಾಡುವಾಗ ದೇವಿಶ್ರೀ ಪ್ರಸಾದ್​ ಒಂದು ಹೇಳಿಕೆ ನೀಡಿದ್ದರು. ‘ಕೇಳುವವರಿಗೆ ಇದು ಐಟಂ ಸಾಂಗ್​ ಆಗಿರಬಹುದು. ಆದರೆ ನನ್ನ ಪಾಲಿಗೆ ಈ ಹಾಡುಗಳೆಲ್ಲವೂ ಭಕ್ತಿಗೀತೆಗೆ ಸಮ’ ಎಂದು ಅವರು ಹೇಳಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆದರೆ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ‘ಸಾಮಿ ಸಾಮಿ..’ ಹಾಡು ಈಗ ದೇವಸ್ಥಾನದಲ್ಲಿ ಮೊಳಗುತ್ತಿರುವುದು ಕಂಡು ಎಲ್ಲರೂ ಅಚ್ಚರಿಪಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ ನಟನೆಯ ಪುಷ್ಪ’ ಸಿನಿಮಾ ವಿಶ್ವಾದ್ಯಂತ ‘300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡಿದ್ದಾರೆ. ಈಗ ಅಮೇಜಾನ್​ ಪ್ರೈಮ್​ ಮೂಲಕ ಸಿನಿಮಾ ಲಭ್ಯವಾಗಿದೆ. ಮೊದಲ ಪಾರ್ಟ್​ ಸೂಪರ್​ ಹಿಟ್​ ಆಗಿರುವುದರಿಂದ ಎರಡನೇ ಪಾರ್ಟ್​ಗಾಗಿ ಅಭಿಮಾನಿಗಳು ಕಾಯುವಂತಾಗಿದೆ.

ಇದನ್ನೂ ಓದಿ:

‘ಪುಷ್ಪ’ ಗೆದ್ದ ಬಳಿಕ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ; ಮುಂದಿನ ಚಿತ್ರಕ್ಕೆ ಈ ನಟಿ ಪಡೆಯುವ ಸಂಬಳ ಎಷ್ಟು?

‘ಹು ಅಂತೀಯಾ ಮಾವ’ ಹಾಡಿನ ಮೇಲೆ ಕಾಪಿ ಆರೋಪ; ವೈರಲ್​ ಆಗುತ್ತಿದೆ ಹೋಲಿಕೆಯ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada