AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ’ ಗೆದ್ದ ಬಳಿಕ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ; ಮುಂದಿನ ಚಿತ್ರಕ್ಕೆ ಈ ನಟಿ ಪಡೆಯುವ ಸಂಬಳ ಎಷ್ಟು?

Rashmika Mandanna Remuneration: ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ.

‘ಪುಷ್ಪ’ ಗೆದ್ದ ಬಳಿಕ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ; ಮುಂದಿನ ಚಿತ್ರಕ್ಕೆ ಈ ನಟಿ ಪಡೆಯುವ ಸಂಬಳ ಎಷ್ಟು?
ರಶ್ಮಿಕಾ ಮಂದಣ್ಣ
TV9 Web
| Edited By: |

Updated on: Jan 09, 2022 | 4:27 PM

Share

ಸದ್ಯಕ್ಕಂತೂ ನಟಿ ರಶ್ಮಿಕಾ ಮಂದಣ್ಣ (Rashmika Mandanna ) ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ದಕ್ಷಿಣ ಭಾರತದ ಸ್ಟಾರ್​ ನಟರ ಸಿನಿಮಾಗಳಿಗೆ ಅವರೇ ನಾಯಕಿ ಆಗಬೇಕು ಎಂದು ನಿರ್ದೇಶಕರು ಪಟ್ಟು ಹಿಡಿಯುತ್ತಿದ್ದಾರೆ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದು ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಈಗ ‘ಪುಷ್ಪ’ (Pushpa Movie) ಸಿನಿಮಾದಿಂದ ರಶ್ಮಿಕಾ ಮಂದಣ್ಣ ದೊಡ್ಡ ಗೆಲುವು ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಅವರು ಸಂಭಾವನೆ (Rashmika Mandanna Remuneration) ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದೇ ರೀತಿ ನಟ ಅಲ್ಲು ಅರ್ಜುನ್​ (Allu Arjun) ಅವರ ಸಂಭಾವನೆಯಲ್ಲೂ ಏರಿಕೆ ಆಗಿದೆ ಎನ್ನಲಾಗಿದೆ.

ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯಿಸಲಿದ್ದಾರೆ. ಮೊದಲ ಪಾರ್ಟ್​ ಗೆದ್ದ ಬಳಿಕ ಎರಡನೇ ಪಾರ್ಟ್​ಗೆ ರಶ್ಮಿಕಾ ಹೆಚ್ಚು ಸಂಬಳ ಕೇಳುತ್ತಿದ್ದಾರಂತೆ. ಮೊದಲ ಪಾರ್ಟ್​ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಈಗ 3 ಕೋಟಿ ರೂ. ಡಿಮ್ಯಾಂಡ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ, ಅವರು ಶೇ.50ರಷ್ಟು ಸಂಭಾವನೆಯನ್ನು ಹಚ್ಚಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಬುಲಾವ್​ ಬಂದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಆ ಸಿನಿಮಾಗಳು ತೆರೆಕಂಡ ಬಳಿಕ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಇನ್ನಷ್ಟು ಹೆಚ್ಚಲಿದೆ.

ತಪ್ಪಾಗಿದೆ ರಶ್ಮಿಕಾ ಮಂದಣ್ಣ ಹೆಸರು:

‘ಪುಷ್ಪ’ ಸಿನಿಮಾ ಪೂರ್ಣಗೊಂಡ ನಂತರದಲ್ಲಿ ಕೊನೆಯಲ್ಲಿ ಎಲ್ಲಾ ಕಲಾವಿದರ ಫೋಟೋವನ್ನು ಹಾಕಿ ಹೆಸರು ತೋರಿಸಲಾಗಿದೆ. ಅಲ್ಲು ಅರ್ಜುನ್​, ಫಹಾದ್​ ಫಾಸಿಲ್​ ಆದ ಬಳಿಕ ರಶ್ಮಿಕಾ ಅವರ ಹೆಸರು ಬಂದಿದೆ. ಎಲ್ಲಾ ಹೆಸರುಗಳು ಇಂಗ್ಲಿಷ್​ನಲ್ಲಿವೆ. ರಶ್ಮಿಕಾ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ರಶ್ಮಿಕಾ ಮಂದಣ್ಣ ಬದಲು, ರಸ್ಮಿಕಾ ಮಡೋನಾ ಎಂದು ಬರೆಯಲಾಗಿದೆ. ಚಿತ್ರತಂಡ ಮಾಡಿದ ಈ ಅಚಾತುರ್ಯಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ನಟನೆಗಿಲ್ಲ ಮಹೇಶ್​ ಬಾಬು ಮೆಚ್ಚುಗೆ; ಪ್ರಿನ್ಸ್​ಗೆ ಧನ್ಯವಾದ ಹೇಳಿದ ಅಭಿಮಾನಿಗಳು

ವಿಜಯ್​ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!