ರಶ್ಮಿಕಾ ಮಂದಣ್ಣ ನಟನೆಗಿಲ್ಲ ಮಹೇಶ್​ ಬಾಬು ಮೆಚ್ಚುಗೆ; ಪ್ರಿನ್ಸ್​ಗೆ ಧನ್ಯವಾದ ಹೇಳಿದ ಅಭಿಮಾನಿಗಳು

ರಶ್ಮಿಕಾ ಮಂದಣ್ಣ ನಟನೆಗಿಲ್ಲ ಮಹೇಶ್​ ಬಾಬು ಮೆಚ್ಚುಗೆ; ಪ್ರಿನ್ಸ್​ಗೆ ಧನ್ಯವಾದ ಹೇಳಿದ ಅಭಿಮಾನಿಗಳು

‘ಪುಷ್ಪ’ ಸಿನಿಮಾ ರಿಲೀಸ್​ ಆಗಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈಗ ಅಮೇಜಾನ್​ ಪ್ರೈಮ್ ವಿಡಿಯೋದಲ್ಲೂ ಸಿನಿಮಾ ರಿಲೀಸ್​ ಆಗಿದೆ. ಐದು ಭಾಷೆಯಲ್ಲಿ ಜನರು ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮಹೇಶ್​ ಬಾಬು ಅವರು ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

TV9kannada Web Team

| Edited By: Rajesh Duggumane

Jan 08, 2022 | 1:45 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಮಹೇಶ್​ ಬಾಬು (Mahesh Babu) ‘ಸರಿಲೇರು ನೀಕೆವ್ವರು’ (Sarileru Neekevvaru) ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ರಿಲೀಸ್​ ಆಗಿ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ಈ ಸಿನಿಮಾದಿಂದ ರಶ್ಮಿಕಾ ಬೇಡಿಕೆ ಹೆಚ್ಚಿತ್ತು. ಅಷ್ಟೇ ಅಲ್ಲ, ಮಹೇಶ್​ ಬಾಬು ಹಾಗೂ ರಶ್ಮಿಕಾ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಬೆಳೆದಿತ್ತು. ಆದರೆ, ಈಗ ಅವರನ್ನು ಮಹೇಶ್​ ಬಾಬು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

‘ಪುಷ್ಪ’ ಸಿನಿಮಾ ರಿಲೀಸ್​ ಆಗಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈಗ ಅಮೇಜಾನ್​ ಪ್ರೈಮ್ ವಿಡಿಯೋದಲ್ಲೂ ಸಿನಿಮಾ ರಿಲೀಸ್​ ಆಗಿದೆ. ಐದು ಭಾಷೆಯಲ್ಲಿ ಜನರು ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮಹೇಶ್​ ಬಾಬು ಅವರು ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಟ ಅಲ್ಲು ಅರ್ಜುನ್​ ಹಾಗೂ ನಿರ್ದೇಶಕ ಸುಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆದರೆ, ಎಲ್ಲಿಯೂ ಅವರು ರಶ್ಮಿಕಾ ನಟನೆ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಿಲ್ಲ.

‘ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರ ಅಚ್ಚರಿ ಮೂಡಿಸುತ್ತದೆ, ಒರಿಜಿನಲ್​ ಮತ್ತು ಸೆನ್ಸೇಷನಲ್​ ಆಗಿದೆ. ನಟನೆ ಅದ್ಭುತವಾಗಿದೆ. ಸುಕುಮಾರ್​ ನಿರ್ದೇಶನದ ಸಿನಿಮಾಗಳು ಪ್ರಾಮಾಣಿಕವಾಗಿ ಮತ್ತು ರಾ ಆಗಿರುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೇರೆ ಎಲ್ಲ ಸಿನಿಮಾಗಳಿಗಿಂತ ಇದು ಭಿನ್ನವಾಗಿದೆ’ ಎಂದು ಮಹೇಶ್​ ಬಾಬು ಟ್ವೀಟ್​ ಮಾಡಿದ್ದಾರೆ. ಇದರ ಜತೆಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಅವರ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ರಶ್ಮಿಕಾ ಬಗ್ಗೆ ಅವರು ಮೆಚ್ಚುಗೆ ಸೂಚಿಸಿಲ್ಲ.

‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ನಟನೆ ಬಗ್ಗೆ ಪಾಸಿಟಿವ್​ ರೆಸ್ಪಾನ್ಸ್​ ಬಂದಿದೆ. ಆದರೆ, ಕೆಲವರು ಅವರ ಪಾತ್ರದ ಬಗ್ಗೆ ಅಷ್ಟಾಗಿ ಮೆಚ್ಚುಗೆ ಸೂಚಿಸಿಲ್ಲ. ಈಗ ಮಹೇಶ್​ ಬಾಬು ಕೂಡ ಈ ಬಗ್ಗೆ ಮಾತನಾಡದೆ ಇರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಅವರಿಗೆ ಪಾತ್ರ ಇಷ್ಟವಾಗಿಲ್ಲವೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಕೆಲವರು ಮಹೇಶ್​ ಬಾಬುಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?

Follow us on

Related Stories

Most Read Stories

Click on your DTH Provider to Add TV9 Kannada