‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು

ನಟಿ ರಶ್ಮಿಕಾ ಮಂದಣ್ಣ ಕೂಡ ಪತ್ರಿಕೋದ್ಯಮವನ್ನು ಓದಿದ್ದಾರೆ. ಆ ಕುರಿತು ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ತಿಳಿಸಿದರು.

TV9kannada Web Team

| Edited By: Madan Kumar

Jan 05, 2022 | 9:13 AM

ನಟಿ ರಶ್ಮಿಕಾ ಮಂದಣ್ಣ ಅವರು ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ‘ಟಿವಿ9 ಕನ್ನಡ’ ಸುದ್ದಿ ವಾಹಿನಿಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ 9 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ರಶ್ಮಿಕಾ ಮಂದಣ್ಣ ಕೂಡ ಪ್ರಶಸ್ತಿ ಸ್ವೀಕರಿಸಿದರು. ಅದಕ್ಕೂ ಮುನ್ನ ಮಾತನಾಡಿದ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು. ರಶ್ಮಿಕಾ ಕೂಡ ಪತ್ರಿಕೋದ್ಯಮವನ್ನು ಓದಿದ್ದಾರೆ. ಆ ಕುರಿತು ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ತಿಳಿಸಿದರು. ಪುನೀತ್​ ರಾಜ್​ಕುಮಾರ್​, ಸಂಜಿತ್​ ಹೆಗಡೆ ಸೇರಿದಂತೆ ವಿವಿಧ ಕ್ಷೇತ್ರದ 9 ಜನರಿಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ನೀಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ರವಿಚಂದ್ರನ್​, ಶಿವರಾಜ್​ಕುಮಾರ್​, ಸಂಗೀತ ನಿರ್ದೇಶಕ ರಘು ದೀಕ್ಷಿತ್​, ಚರಣ್​ ರಾಜ್​ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದರು.

ಇದನ್ನೂ ಓದಿ:

Rashmika Mandanna: ಕೊಡಗಿನ ಕುವರಿ ರಶ್ಮಿಕಾ ಹೊಸ ವರ್ಷವನ್ನು ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಚಿತ್ರಗಳು

ಪುನೀತ್​ ರಾಜ್​ಕುಮಾರ್​ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ

Follow us on

Click on your DTH Provider to Add TV9 Kannada