ರೈತ ಸಾಧಕನಿಗೆ ‘ನವನಕ್ಷತ್ರ ಸನ್ಮಾನ​ 2021’ ಪ್ರಶಸ್ತಿ ನೀಡಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

ರೈತ ಸಾಧಕನಿಗೆ ‘ನವನಕ್ಷತ್ರ ಸನ್ಮಾನ​ 2021’ ಪ್ರಶಸ್ತಿ ನೀಡಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 05, 2022 | 9:09 AM

ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ​ 2021’ ವಿಶೇಷ ಕಾರ್ಯಕ್ರಮಕ್ಕೆ ಎಚ್​.ಡಿ. ದೇವೇಗೌಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂಡ್ಯದ ರೈತ ಬೋರೇಗೌಡ ಅವರಿಗೆ ಸನ್ಮಾನ ಮಾಡಿದರು.

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರು ರೈತರ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಈಗಲೂ ಕೂಡ ಅವರು ರೈತರ ಪರವಾಗಿ ಧ್ವನಿ ಎತ್ತುತ್ತಾರೆ. ಸಾಕಷ್ಟು ರೈತ ಸಾಧಕರನ್ನು ಬೆನ್ನು ತಟ್ಟುವ ಕೆಲಸವನ್ನು ಅವರು ಮಾಡಿದ್ದಾರೆ. ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ​ 2021’ ವಿಶೇಷ ಕಾರ್ಯಕ್ರಮಕ್ಕೆ ಎಚ್​.ಡಿ. ದೇವೇಗೌಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂಡ್ಯದ ರೈತ ಬೋರೇಗೌಡ ಅವರಿಗೆ ಸನ್ಮಾನ ಮಾಡಿದರು. ಈ ಮೂಲಕ ಬೋರೇಗೌಡ ಅವರ ಸಾಧನೆ ಲಕ್ಷಾಂತರ ಜನರಿಗೆ ತಲುಪಿಸುವ ಕೆಲಸ ನಡೆದಿದೆ. ಟಿವಿ9 ಕನ್ನಡ ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ವ್ಯಕ್ತಿಗಳಿಗೆ ಸನ್ಮಾನ ಮಾಡುವ ಕಾರ್ಯ ನಡೆದಿದೆ. ರಶ್ಮಿಕಾ ಮಂದಣ್ಣ ಮೊದಲಾದವರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ರವಿಚಂದ್ರನ್​ ಮೊದಲಾದವರು ಆಗಮಿಸಿದ್ದರು. ಈ ವೇಳೆ ಅವರು ಟಿವಿ9 ಕನ್ನಡದ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಇದನ್ನೂ ಓದಿ: ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಎಚ್​.ಡಿ. ದೇವೇಗೌಡ