ಟಿವಿ9 ಕನ್ನಡ ಕರ್ನಾಟಕ ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟಿದೆ; ಸಿಎಂ ಬಸವರಾಜ ಬೊಮ್ಮಾಯಿ
ಜನರ ಬದುಕಿಗೆ ಹತ್ತಿರವಾಗಿರುವ ಟಿವಿ9 ಕರ್ನಾಟಕ ಮನೆಮನೆಗೆ ಪರಿಚಿತವಾಗಿದೆ. ಟಿವಿ9ನಲ್ಲಿರುವ ಪ್ರಾರಂಭದ ಸಂಗೀತ ನಮ್ಮೆಲ್ಲರನ್ನ ಬೆಳಿಗ್ಗೆ ಎಬ್ಬಿಸುವ ಕೆಲಸ ಮಾಡುತ್ತದೆ.
ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್, ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಸಿಎಂ ಬೊಮ್ಮಾಯಿ, ಏನಾದ್ರು ನಡೆಯಬೇಕಾದರೆ ಅದನ್ನ ಟಿವಿ9 ಪ್ರತಿಬಿಂಬಿಸಿದಾಗ ನಡೆಯುತ್ತದೆ. ಜನರ ಬದುಕಿಗೆ ಹತ್ತಿರವಾಗಿರುವ ಟಿವಿ9 ಕರ್ನಾಟಕ ಮನೆಮನೆಗೆ ಪರಿಚಿತವಾಗಿದೆ. ಟಿವಿ9ನಲ್ಲಿರುವ ಪ್ರಾರಂಭದ ಸಂಗೀತ ನಮ್ಮೆಲ್ಲರನ್ನ ಬೆಳಿಗ್ಗೆ ಎಬ್ಬಿಸುವ ಕೆಲಸ ಮಾಡುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಟಿವಿ9 ಸಾಧಕರನ್ನ ಗುರುತಿಸಿ ಕನ್ನಡ ಜನರಿಗೆ ಪರಿಚಯ ಮಾಡಿಕೊಟ್ಟಿದೆ.
ಇದನ್ನೂ ಓದಿ
‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು
ರೈತ ಸಾಧಕನಿಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ