ಸರ್ವ ರೋಗಕ್ಕೂ ಸಿರಿಧಾನ್ಯ ಮದ್ದು; ಡಾ. ಖಾದರ್ ವಲಿಯವರ ಸಾಧನೆ ನೋಡಿ
ಕಾರ್ಯಕ್ರಮದಲ್ಲಿ ಸಾಧಕ ಡಾಕ್ಟರ್ ಖಾದರ್ ವಲಿ ಅವರಿಗೆ ಸನ್ಮಾನಿಸಲಾಯಿತು. ಕಳೆದ ಎರಡೂವರೆ ದಶಕಗಳಿಂದ ಮೈಸೂರಿನಲ್ಲಿ ಕ್ಲಿನಿಕ್ ನಡೆಸುತ್ತಿರುವ ಖಾದರ್, ಸರ್ವ ರೋಗಕ್ಕೂ ಸಿರಿಧಾನ್ಯ ಮದ್ದು ಅಂತ ಡಾ. ಖಾದರ್ ವಲಿ ಹೇಳುತ್ತಾರೆ.
ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್, ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕ ಡಾಕ್ಟರ್ ಖಾದರ್ ವಲಿ ಅವರಿಗೆ ಸನ್ಮಾನಿಸಲಾಯಿತು. ಕಳೆದ ಎರಡೂವರೆ ದಶಕಗಳಿಂದ ಮೈಸೂರಿನಲ್ಲಿ ಕ್ಲಿನಿಕ್ ನಡೆಸುತ್ತಿರುವ ಖಾದರ್, ಸರ್ವ ರೋಗಕ್ಕೂ ಸಿರಿಧಾನ್ಯ ಮದ್ದು ಅಂತಾರೆ. ಆಹಾರವೇ ಔಷಧಿಯಾಗಬೇಕು ಅಂತಾ ಸಾರುತ್ತಿದ್ದಾರೆ. ನವಣೆ, ಅರ್ಕ, ಸಾಮೆ, ಊದಲು ಮತ್ತು ಕೊರ್ಲೆ. ಈ 5 ಧಾನ್ಯಗಳಲ್ಲಿ ದೊಡ್ಡ ದೊಡ್ಡ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ ಅಂತಾ ಡಾಕ್ಟರ್ ವಲಿ ಸಾಬೀತು ಮಾಡ್ತಿದ್ದಾರೆ. ಇವುಗಳಿಗೆ ಸಕಾರಾತ್ಮಕ ಸಿರಿಧಾನ್ಯ ಎನ್ನುವ ವಲಿ, ಮಧುಮೇಹ, ಬಿಪಿ, ಬೊಜ್ಜು, ಮಲಬದ್ಧತೆ, ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಿರಿಧಾನ್ಯಗಳೇ ಔಷಧಿ ಅಂತಾ ಪ್ರತಿಪಾದಿಸ್ತಾರೆ.
ಇದನ್ನೂ ಓದಿ
ಟಿವಿ9 ಕನ್ನಡ ನವ ನಕ್ಷತ್ರ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳಿಗೆ ಸನ್ಮಾನ
ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಅನೇಕ ಕೊಡುಗೆ ನೀಡಿದ ಹೆಗ್ಗಳಿಕೆ ಟಿವಿ9ಗೆ ಇದೆ; ಸಿದ್ದಗಂಗಾ ಶ್ರೀಗಳು