ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಅನೇಕ ಕೊಡುಗೆ ನೀಡಿದ ಹೆಗ್ಗಳಿಕೆ ಟಿವಿ9ಗೆ ಇದೆ; ಸಿದ್ದಗಂಗಾ ಶ್ರೀಗಳು
ನವ ನಕ್ಷತ್ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತುಮಕೂರಿನ ಸಿದ್ದಗಂಗಾ ಶ್ರೀಗಳು ಸಾಧಕರಿಗೆ ಮತ್ತು ಟಿವಿ9ಗೆ ಶುಭಕೋರಿದರು. ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಟಿವಿ9 ಉತ್ತಮ ಕೆಲಸ ಮಾಡಿಕೊಂಡು ಬಂದಿದೆ ಎಂದರು.
ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತುಮಕೂರಿನ ಸಿದ್ದಗಂಗಾ ಶ್ರೀಗಳು ಸಾಧಕರಿಗೆ ಮತ್ತು ಟಿವಿ9ಗೆ ಶುಭಕೋರಿದರು. ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಟಿವಿ9 ಉತ್ತಮ ಕೆಲಸ ಮಾಡಿಕೊಂಡು ಬಂದಿದೆ. ಪ್ರಾರಂಭದಿಂದಲೂ ಇಲ್ಲಿವರೆಗೂ ಅನೇಕ ಜಾಗೃತ ಕಾರ್ಯಕ್ರಮಗಳನ್ನ ಟಿವಿ9 ಮಾಡಿಕೊಂಡು ಬಂದಿದೆ ಅಂತ ಸಿದ್ದಗಂಗಾ ಶ್ರೀಗಳು ಹೇಳಿದರು.
ಇದನ್ನೂ ಓದಿ
ಹೇಗಿತ್ತು ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ಪ್ರದಾನ ಸಮಾರಂಭ? ಇಲ್ಲಿದೆ ವಿಡಿಯೋ ಝಲಕ್
‘ಸಾಧಕರಿಗೆ ಸನ್ಮಾನ ಮಾಡಿದ್ದು ಎಲ್ಲರಿಗೂ ಮಾದರಿ’; ಸಂಗೀತ ನಿರ್ದೇಶಕ ಚರಣ್ ರಾಜ್
Latest Videos