ವಿವಿಧ ಕ್ಷೇತ್ರಗಳ 9 ಸಾಧಕರಿಗೆ ನವನಕ್ಷತ್ರ ಸನ್ಮಾನ

ವಿವಿಧ ಕ್ಷೇತ್ರಗಳ 9 ಸಾಧಕರಿಗೆ ನವನಕ್ಷತ್ರ ಸನ್ಮಾನ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 05, 2022 | 9:24 AM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರವಿಚಂದ್ರನ್​, ಎಚ್​.ಡಿ ದೇವೇಗೌಡ ಮೊದಲಾದವರು ಅತಿಥಿಯಾಗಿ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ, ಸಂಜಿತ್​ ಹೆಗಡೆ ಮೊದಲಾದವರಿಗೆ ಸನ್ಮಾನ ಮಾಡಲಾಗಿದೆ.

ಹಲವು ಕ್ಷೇತ್ರಗಳಲ್ಲಿ ಹಲವರು ಸಾಧನೆ ಮಾಡಿರುತ್ತಾರೆ. ಆದರೆ, ಅವರನ್ನು ಗುರುತಿಸುವ ಕಾರ್ಯ ಆಗಿರುವುದಿಲ್ಲ. ಈ ಕಾರಣಕ್ಕೆ ಅವರು ಮಾಡಿದ ಸಾಧನೆ ಹೊರಜಗತ್ತಿಗೆ ಹೆಚ್ಚು ಗೊತ್ತಾಗುವುದೇ ಇಲ್ಲ. ಈಗ ಇವರನ್ನು ಹೆಚ್ಚು ಬೆಳಕಿಗೆ ತರುವ ಪ್ರಯತ್ನ ಟಿವಿ9 ಕನ್ನಡದ ಕಡೆಯಿಂದ ಆಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯ ಆಗಿದೆ. ಕೃಷಿ, ಸಂಗೀತ, ಸಿನಿಮಾ ಸೇರಿ 9 ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ‘ನವನಕ್ಷತ್ರ ಸನ್ಮಾನ​ 2021’ ಕಾರ್ಯಕ್ರಮದ ಮೂಲಕ 9 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರವಿಚಂದ್ರನ್​, ಎಚ್​.ಡಿ ದೇವೇಗೌಡ ಮೊದಲಾದವರು ಅತಿಥಿಯಾಗಿ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ, ಸಂಜಿತ್​ ಹೆಗಡೆ ಮೊದಲಾದವರಿಗೆ ಸನ್ಮಾನ ಮಾಡಲಾಗಿದೆ.

ಇದನ್ನೂ ಓದಿ: ‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು