‘ಕನ್ನಡಿಗರ ಹೆಮ್ಮೆಯ ಚಾನೆಲ್​ ಟಿವಿ9’: ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಸಂತೋಷ್​ ಹೆಗ್ಡೆ ಮೆಚ್ಚುಗೆ

‘ಕನ್ನಡಿಗರ ಹೆಮ್ಮೆಯ ಚಾನೆಲ್​ ಟಿವಿ9’: ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಸಂತೋಷ್​ ಹೆಗ್ಡೆ ಮೆಚ್ಚುಗೆ

TV9 Web
| Updated By: ಮದನ್​ ಕುಮಾರ್​

Updated on: Jan 05, 2022 | 9:36 AM

‘ನವನಕ್ಷತ್ರ ಎನ್ನುವ ಸುಂದರವಾದ ಕಾರ್ಯಕ್ರಮ ನಡೆದಿದೆ. 9 ಜನರಿಗೆ ಸನ್ಮಾನ ಮಾಡಲಾಗಿದೆ. ಇದು ಬಹಳ ಉತ್ತಮವಾದ ಕಾರ್ಯ’ ಎಂದು ಮಾಜಿ ಲೋಕಾಯುಕ್ತ ಸಂತೋಷ್​ ಹೆಗ್ಡೆ ಹೇಳಿದರು.

‘ಟಿವಿ9 ಕನ್ನಡ’ ಸುದ್ದಿ ವಾಹಿನಿಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗಿದೆ. ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗಳನ್ನು ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಲೋಕಾಯುಕ್ತ ಸಂತೋಷ್​ ಹೆಗ್ಡೆ ಅವರು ಅತಿಥಿಯಾಗಿ ಆಗಮಿಸಿದ್ದರು. ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮ ಮತ್ತು ಟಿವಿ9 ಕುರಿತು ಅವರು ಮಾತನಾಡಿದರು. ‘ನನಗೆ ಬಹಳ ವರ್ಷಗಳಿಂದ ಟಿವಿ9 ಜತೆ ಸಂಪರ್ಕ ಇದೆ. ನಾನು ಲೋಕಾಯುಕ್ತನಾಗಿ ಬೆಂಗಳೂರಿಗೆ ಬಂದಾಗಿನಿಂದಲೂ ಟಿವಿ9 ಜತೆ ಒಡನಾಟ ಹೊಂದಿದ್ದೇನೆ. ನವ ನಕ್ಷತ್ರ ಎನ್ನುವ ಸುಂದರವಾದ ಕಾರ್ಯಕ್ರಮ ಇಂದು ನಡೆದಿದೆ. 9 ಜನರಿಗೆ ಸನ್ಮಾನ ಮಾಡಲಾಗಿದೆ. ಇದು ಬಹಳ ಉತ್ತಮವಾದ ಕಾರ್ಯ. ಅದಕ್ಕಾಗಿ ನಾನು ಟಿವಿ9 ವಾಹಿನಿಯನ್ನು ಅಭಿನಂದಿಸುತ್ತೇನೆ’ ಎಂದು ಸಂತೋಷ್​ ಹೆಗ್ಡೆ ಹೇಳಿದರು. ಪುನೀತ್​ ರಾಜ್​ಕುಮಾರ್​ (ಮರಣೋತ್ತರ), ಸಂಜಿತ್​ ಹೆಗಡೆ, ರಶ್ಮಿಕಾ ಮಂದಣ್ಣ ಸೇರಿದಂತೆ ವಿವಿಧ ಕ್ಷೇತ್ರದ 9 ಜನರಿಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ನೀಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಸಚಿವ ಸುಧಾಕರ್​, ರವಿಚಂದ್ರನ್​, ಶಿವರಾಜ್​ಕುಮಾರ್​, ಸಂಗೀತ ನಿರ್ದೇಶಕ ರಘು ದೀಕ್ಷಿತ್​, ಚರಣ್​ ರಾಜ್​ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದರು.

ಇದನ್ನೂ ಓದಿ:

‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು

ಪುನೀತ್​ ರಾಜ್​ಕುಮಾರ್​ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ