‘ಕನ್ನಡಿಗರು ಇಷ್ಟಪಡುವ, ನಂಬಿಕೆಗೆ ಅರ್ಹವಾದ ವಾಹಿನಿ ಟಿವಿ9’; ಸಚಿವ ಮುರುಗೇಶ್ ನಿರಾಣಿ
ಕೃಷಿ, ಸಂಗೀತ, ಸಿನಿಮಾ ಸೇರಿ 9 ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವ ಮುರುಗೇಶ್ ನಿರಾಣಿ ಕೂಡ ಆಗಮಿಸಿದ್ದರು. ಅವರು ಟಿವಿ9 ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದರು.
ಟಿವಿ9 ಕನ್ನಡದ ಬಗ್ಗೆ ಕರ್ನಾಟಕದವರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಟಿವಿ9 ಯಶಸ್ವಿಯಾಗಿದೆ. 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾಹಿನಿ, 9 ಕ್ಷೇತ್ರದವರಿಗೆ ಪ್ರಶಸ್ತಿ ನೀಡಿದೆ. ಹಲವು ಕ್ಷೇತ್ರಗಳಲ್ಲಿ ಹಲವರು ಸಾಧನೆ ಮಾಡಿರುತ್ತಾರೆ. ಆದರೆ, ಅವರನ್ನು ಗುರುತಿಸುವ ಕಾರ್ಯ ಆಗಿರುವುದಿಲ್ಲ. ಈ ಕಾರಣಕ್ಕೆ ಅವರು ಮಾಡಿದ ಸಾಧನೆ ಹೊರಜಗತ್ತಿಗೆ ಹೆಚ್ಚು ಗೊತ್ತಾಗುವುದೇ ಇಲ್ಲ. ಈಗ ಇವರನ್ನು ಹೆಚ್ಚು ಬೆಳಕಿಗೆ ತರುವ ಪ್ರಯತ್ನ ಟಿವಿ9 ಕನ್ನಡದ ಕಡೆಯಿಂದ ಆಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯ ಆಗಿದೆ. ಕೃಷಿ, ಸಂಗೀತ, ಸಿನಿಮಾ ಸೇರಿ 9 ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವ ಮುರುಗೇಶ್ ನಿರಾಣಿ ಕೂಡ ಆಗಮಿಸಿದ್ದರು. ಅವರು ಟಿವಿ9 ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದರು.
ಇದನ್ನೂ ಓದಿ: ‘ಕನ್ನಡಿಗರ ಹೆಮ್ಮೆಯ ಚಾನೆಲ್ ಟಿವಿ9’: ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಸಂತೋಷ್ ಹೆಗ್ಡೆ ಮೆಚ್ಚುಗೆ
Latest Videos