ನನ್ನ ಯಶಸ್ಸು ನನ್ನೊಬ್ಬನದ್ದೇ ಅಲ್ಲ; ಬ್ರಿಡ್ಜ್ಮ್ಯಾನ್ ಗಿರೀಶ್ ಭಾರದ್ವಾಜ್ ಮಾತು ಕೇಳಿ
ನವ ನಕ್ಷತ್ರ ಕಾರ್ಯಕ್ರಮದಲ್ಲಿ ಸಾಧಕ ಬ್ರಿಡ್ಜ್ಮ್ಯಾನ್ ಅಂತಲೇ ಚಿರಪರಿಚಿತರಾಗಿರುವ ಗಿರೀಶ್ ಭಾರದ್ವಾಜ್ಗೆ ಸನ್ಮಾನಿಸಲಾಯಿತು. ಕಡಿಮೆ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಲಾರಂಭಿಸಿದರು. ಇವರು ಸರ್ವೆ, ವಿನ್ಯಾಸ, ತಾಂತ್ರಿಕ ಸಲಹೆಗೆ ಹಣ ಪಡೆಯದೆ ಕೆಲಸ ಮಾಡಿದ್ದಾರೆ.
ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್, ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕ ಬ್ರಿಡ್ಜ್ಮ್ಯಾನ್ ಅಂತಲೇ ಚಿರಪರಿಚಿತರಾಗಿರುವ ಗಿರೀಶ್ ಭಾರದ್ವಾಜ್ಗೆ ಸನ್ಮಾನಿಸಲಾಯಿತು. ಕಡಿಮೆ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಲಾರಂಭಿಸಿದರು. ಇವರು ಸರ್ವೆ, ವಿನ್ಯಾಸ, ತಾಂತ್ರಿಕ ಸಲಹೆಗೆ ಹಣ ಪಡೆಯದೆ ಕೆಲಸ ಮಾಡಿದ್ದಾರೆ. ಸ್ವಂತ ಹಣದಲ್ಲಿಯೂ ಸೇತುವೆ ನಿರ್ಮಿಸಿದ ಉದಾಹರಣೆಯೂ ಇದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಗಿರೀಶ್, ನನ್ನ ಕೆಲಸ ಗುರುತಿಸಿ ಸನ್ಮಾನಿಸುತ್ತಿರುವ ಟಿವಿ9ಗೆ ಚಿರಋಣಿ. ಇದು ನನ್ನ ಒಬ್ಬನ ಯಶಸ್ಸು ಅಲ್ಲ ಎಂದರು.
ಇದನ್ನೂ ಓದಿ
‘ಕನ್ನಡಿಗರ ಹೆಮ್ಮೆಯ ಚಾನೆಲ್ ಟಿವಿ9’: ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಸಂತೋಷ್ ಹೆಗ್ಡೆ ಮೆಚ್ಚುಗೆ
‘ಕನ್ನಡಿಗರು ಇಷ್ಟಪಡುವ, ನಂಬಿಕೆಗೆ ಅರ್ಹವಾದ ವಾಹಿನಿ ಟಿವಿ9’; ಸಚಿವ ಮುರುಗೇಶ್ ನಿರಾಣಿ