AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಕನ್ನಡ ಕಾರ್ಯವೈಖರಿ ಬಗ್ಗೆ ಸಚಿವ ಡಾ.ಸುಧಾಕರ್​ ಮೆಚ್ಚುಗೆ

ಟಿವಿ9 ಕನ್ನಡ ಕಾರ್ಯವೈಖರಿ ಬಗ್ಗೆ ಸಚಿವ ಡಾ.ಸುಧಾಕರ್​ ಮೆಚ್ಚುಗೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 05, 2022 | 10:02 AM

ಸುದ್ದಿ ಎಂದರೆ ಟಿವಿ9, ಟಿವಿ9 ಎಂದರೆ ನೈಜ ಸುದ್ದಿ ಎನ್ನುವ ಭಾವನೆ ಕರ್ನಾಟಕದ ಎಲ್ಲರಲ್ಲೂ ಇದೆ. 15 ವರ್ಷ ಇದನ್ನು ಕಾಪಾಡಿಕೊಂಡು ಹೋಗುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್​ ಎಂದರು ಸುಧಾಕರ್​. ‘

ಟಿವಿ9 ಕನ್ನಡ ವಾಹಿನಿ ಆರಂಭಗೊಂಡು 15 ವರ್ಷ ಕಳೆದಿದೆ. ಈ ಸುದೀರ್ಘ ಪಯಣದಲ್ಲಿ ನಂಬರ್​ 1 ಸ್ಥಾನವನ್ನು ವಾಹಿನಿ ಉಳಿಸಿಕೊಂಡು ಬಂದಿದೆ. ಗುಣಮಟ್ಟದ ಸುದ್ದಿಯನ್ನು ನೀಡುವುದರಲ್ಲಿ ಟಿವಿ9 ಕನ್ನಡ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಕಾರಣಕ್ಕೆ ವಾಹಿನಿ ಬಗ್ಗೆ ವೀಕ್ಷಕರಲ್ಲಿ ವಿಶ್ವಾಸ ಮೂಡಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್​ ಅವರು ಮಾತನಾಡಿದ್ದಾರೆ. ‘ಟಿವಿ9ಗೆ 15 ವರ್ಷ ತುಂಬಿದೆ. ಸಂಸ್ಥೆಯ ಸ್ಥಾಪಕರಿಗೆ. ಈಗಿನ ಸುದ್ದಿ ಸಂಪಾದಕರಿಗೆ, ಸಿಬ್ಬಂದಿ ವರ್ಗಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಸುದ್ದಿ ಎಂದರೆ ಟಿವಿ9, ಟಿವಿ9 ಎಂದರೆ ನೈಜ ಸುದ್ದಿ ಎನ್ನುವ ಭಾವನೆ ಕರ್ನಾಟಕದ ಎಲ್ಲರಲ್ಲೂ ಇದೆ. 15 ವರ್ಷ ಇದನ್ನು ಕಾಪಾಡಿಕೊಂಡು ಹೋಗುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್​’ ಎಂದರು ಸುಧಾಕರ್​. ‘ನನ್ನ ಬದುಕಿನಲ್ಲಿ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದೇನೆ. ಈಗ ಆರೋಗ್ಯ ಸಚಿವನಾಗಿ, ಕೊವಿಡ್​ ಸಂಕಷ್ಟವನ್ನು ಎದುರಿಸಿದ್ದೇನೆ. ನಮ್ಮ ಸರ್ಕಾರ ಅದನ್ನು ಯಶಸ್ವಿಯಾಗಿ ನಿರ್ವಹಿಸಿದೆ’ ಎಂದರು.

ಇದನ್ನೂ ಓದಿ: ಟಿವಿ9 ‘ನವನಕ್ಷತ್ರ ಸನ್ಮಾನ’ ಪ್ರಶಸ್ತಿ ಪಡೆದ ಇಸ್ರೋ ವಿಜ್ಞಾನಿ ರೂಪಾ ಸಾಧನೆಗಳೇನು? ಇಲ್ಲಿದೆ ವಿವರ