ಟಿವಿ9 ‘ನವನಕ್ಷತ್ರ ಸನ್ಮಾನ’ ಪ್ರಶಸ್ತಿ ಪಡೆದ ಇಸ್ರೋ ವಿಜ್ಞಾನಿ ರೂಪಾ ಸಾಧನೆಗಳೇನು? ಇಲ್ಲಿದೆ ವಿವರ

ಟಿವಿ9 ‘ನವನಕ್ಷತ್ರ ಸನ್ಮಾನ’ ಪ್ರಶಸ್ತಿ ಪಡೆದ ಇಸ್ರೋ ವಿಜ್ಞಾನಿ ರೂಪಾ ಸಾಧನೆಗಳೇನು? ಇಲ್ಲಿದೆ ವಿವರ

TV9 Web
| Updated By: ಮದನ್​ ಕುಮಾರ್​

Updated on:Jan 05, 2022 | 10:00 AM

ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ರವಾನಿಸಿದ ಜಗತ್ತಿನ ಏಕೈಕ ರಾಷ್ಟ್ರ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿತ್ತು. ಈ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳಲ್ಲಿ ಕರುನಾಡಿನ ಹೆಮ್ಮೆಯ ಮಗಳು ರೂಪಾ ಎಂ.ವಿ. ಸಹ ಒಬ್ಬರು.

ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಜನರನ್ನು ಟಿವಿ9 ಕನ್ನಡ ವಾಹಿನಿ ಸನ್ಮಾನಿಸಿದೆ. ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗಳನ್ನು ಇತ್ತೀಚೆಗೆ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರಲ್ಲಿ ಇಸ್ರೋ ವಿಜ್ಞಾನಿ ರೂಪಾ ಎಂ.ವಿ. ಕೂಡ ಪ್ರಮುಖರು. ಈ ಕುರಿತು ಅವರು ಮಾತನಾಡಿದ್ದಾರೆ. ‘ಇಸ್ರೋದಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ. ತುಂಬ ಚೆನ್ನಾಗಿ ಟೀಮ್​ ವರ್ಕ್​ ಮಾಡ್ತಾ ಇದ್ದೇವೆ’ ಎಂದು ಹೇಳಿದ ರೂಪಾ ಅವರು ಇಸ್ರೋದಲ್ಲಿ ತಮ್ಮ ಕಾರ್ಯವೈಖರಿ ಹೇಗಿದೆ ಎಂಬುದನ್ನು ವಿವರಿಸಿದರು. ‘ಟಿವಿ9 ಕನ್ನಡ’ ಸುದ್ದಿ ವಾಹಿನಿಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗಳನ್ನು ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಸಚಿವ ಸುಧಾಕರ್​, ರವಿಚಂದ್ರನ್​, ಶಿವರಾಜ್​ಕುಮಾರ್​, ಸಂಗೀತ ನಿರ್ದೇಶಕ ರಘು ದೀಕ್ಷಿತ್​, ಚರಣ್​ ರಾಜ್​, ಮಾಜಿ ಲೋಕಾಯುಕ್ತಾ ಸಂತೋಷ್​ ಹೆಗ್ಡೆ ಸೇರಿದಂತೆ ಅನೇಕರು ಸಾಕ್ಷಿಯಾದರು.

ಇದನ್ನೂ ಓದಿ:

‘ಕನ್ನಡಿಗರ ಹೆಮ್ಮೆಯ ಚಾನೆಲ್​ ಟಿವಿ9’: ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಸಂತೋಷ್​ ಹೆಗ್ಡೆ ಮೆಚ್ಚುಗೆ

‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು

Published on: Jan 05, 2022 09:58 AM