ವಿಜಯ್​ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ

ವಿಜಯ್​ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ
ರಶ್ಮಿಕಾ-ವಿಜಯ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ‘ಗೀತ ಗೋವಿಂದಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಇದಾದ ಬಳಿಕ ತೆರೆಗೆ ಬಂದ ‘ಡಿಯರ್​ ಕಾಮ್ರೇಡ್​’ ಸಿನಿಮಾದಲ್ಲಿ ಇಬ್ಬರೂ ಮತ್ತೊಮ್ಮೆ ಜತೆಯಾಗಿ ಕಾಣಿಸಿಕೊಂಡರು.

TV9kannada Web Team

| Edited By: Rajesh Duggumane

Jan 05, 2022 | 3:36 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್​ ದೇವರಕೊಂಡ (Vijay Devarakonda) ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ‘ಗೀತ ಗೋವಿಂದಂ’ ಸಿನಿಮಾ ತೆರೆಕಂಡ ನಂತರದಲ್ಲಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇವರಿಬ್ಬರ ಇಂಟಿಮೇಟ್​ ದೃಶ್ಯಗಳು ಸಖತ್​ ಸೌಂಡ್​ ಮಾಡಿತ್ತು. ಸಾಕಷ್ಟು ಬಾರಿ ರಶ್ಮಿಕಾ ಹಾಗೂ ವಿಜಯ್​ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಈಗ ರಶ್ಮಿಕಾ ಮತ್ತು ವಿಜಯ್​ ಹೊಸ ವರ್ಷನ್ನು ಒಟ್ಟಾಗಿ ಆಚರಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಫೋಟೋ ಸಾಕ್ಷ್ಯ ಕೂಡ ಸಿಕ್ಕಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ‘ಗೀತ ಗೋವಿಂದಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಇದಾದ ಬಳಿಕ ತೆರೆಗೆ ಬಂದ ‘ಡಿಯರ್​ ಕಾಮ್ರೇಡ್​’ ಸಿನಿಮಾದಲ್ಲಿ ಇಬ್ಬರೂ ಮತ್ತೊಮ್ಮೆ ಜತೆಯಾಗಿ ಕಾಣಿಸಿಕೊಂಡರು. ಈ ಚಿತ್ರ ರಿಲೀಸ್​ ಆದ ನಂತರ ಈ ಜೋಡಿ ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದೆ.

ರಶ್ಮಿಕಾ ಬಾಲಿವುಡ್​​ನಲ್ಲಿ ಬ್ಯುಸಿ ಆಗಿದ್ದಾರೆ. ವಿಜಯ್​ ದೇವರಕೊಂಡ ಕೂಡ ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಅನೇಕ ಬಾರಿ ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಹೋಟೆಲ್​ನಲ್ಲಿ ಜತೆಯಾಗಿ ಊಟ ಮಾಡಿ, ಮರುದಿನ ಬೆಳಗ್ಗೆ ಒಟ್ಟಾಗಿ ವರ್ಕೌಟ್​ ಕೂಡ ಮಾಡಿದ್ದಿದೆ. ಈಗ ಇವರು ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎನ್ನಲಾಗಿದೆ.

ವಿಜಯ್​ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಫೋಟೋ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಈ ಫೋಟೋದಲ್ಲಿ ಹಿಂಭಾಗದಲ್ಲಿ ತೆಂಗಿನ ಮರ, ಆಗಸ ಇದೆ. ಇದೇ ಜಾಗದಲ್ಲಿ ನಿಂತು ರಶ್ಮಿಕಾ ಮಂದಣ್ಣ ಕೂಡ ಫೋಟೋ ಹಾಕಿದ್ದಾರೆ. ವಿಜಯ್​ ದೇವರಕೊಂಡ ಕೂಡ ಇಲ್ಲಿಯೇ ಇದ್ದರು ಎನ್ನಲಾಗುತ್ತಿದೆ. ಇನ್ನು, ವಿಜಯ್​ ಹಾಗೂ ರಶ್ಮಿಕಾ ಕ್ಯಾಪ್ಶನ್​ ಒಂದೇ ತೆರನಾಗಿದೆ. ಈ ಫೋಟೋ ನೋಡಿದ ಅನೇಕರು ಇಬ್ಬರ ಮಧ್ಯೆ ನಡೆಯುತ್ತಿರುವುದೇನು? ಇಬ್ಬರೂ ಲವರ್ಸ್​ ಎಂದು ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಸಿನಿ ಬದುಕಿಗೆ ಐದು ವರ್ಷ; ತಾವು ಕಲಿತ ಪಾಠದ ಬಗ್ಗೆ ಹೇಳಿಕೊಂಡ ನಟಿ

ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ

Follow us on

Related Stories

Most Read Stories

Click on your DTH Provider to Add TV9 Kannada