AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikram Vedha: ‘ವಿಕ್ರಮ್ ವೇದ’ ಚಿತ್ರದ ಹೃತಿಕ್​ ರೋಷನ್​ ಲುಕ್​ ರಿವೀಲ್​; ಫ್ಯಾನ್ಸ್​ ಫಿದಾ

Hrithik Roshan ಹೃತಿಕ್​ ಅವರು ಈ ಸಿನಿಮಾದಲ್ಲಿ ವೇದ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್​ ಅಲಿ ಖಾನ್​ ವಿಕ್ರಮ್​ ಆಗಿ ನಟಿಸಲಿದ್ದಾರೆ. ಹೃತಿಕ್​ ಅವರು ಗಡ್ಡ ಬಿಟ್ಟಿದ್ದಾರೆ. ಕಣ್ಣಿಗೆ ಗಾಗಲ್​​ ಹಾಕಿ ಮಿಂಚಿದ್ದಾರೆ.

Vikram Vedha: ‘ವಿಕ್ರಮ್ ವೇದ’ ಚಿತ್ರದ ಹೃತಿಕ್​ ರೋಷನ್​ ಲುಕ್​ ರಿವೀಲ್​; ಫ್ಯಾನ್ಸ್​ ಫಿದಾ
ಹೃತಿಕ್​
TV9 Web
| Edited By: |

Updated on: Jan 10, 2022 | 1:51 PM

Share

ತಮಿಳಲ್ಲಿ ತೆರೆಗೆ ಬಂದ ‘ವಿಕ್ರಮ್​ ವೇದ’ (Vikram Vedha) ಸಿನಿಮಾ ಸೂಪರ್ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ವಿಕ್ರಮ್​ ಆಗಿ ಮಾಧವನ್ (Madhavan) ಕಾಣಿಸಿಕೊಂಡರೆ, ವೇದ ಆಗಿ ವಿಜಯ್​ ಸೇತುಪತಿ (Vijay Sethupathi) ಮಿಂಚಿದ್ದರು. ಇವರ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ಸೂಪರ್ ಹಿಟ್​ ಆದ ಬೆನ್ನಲ್ಲೇ ಅದನ್ನು ರಿಮೇಕ್​ ಮಾಡಲು ಬಾಲಿವುಡ್ (Bollywood)​ ಮಂದಿ ಮುಂದೆ ಬಂದಿದ್ದಾರೆ. ಹೃತಿಕ್​ ರೋಷನ್​ (Hrithik Roshan) ಈ ಸಿನಿಮಾದಲ್ಲಿ ವೇದ ಎಂಬ ಗ್ಯಾಂಗ್​​ಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​ಡೇ ಅಂಗವಾಗಿ ಇಂದು ಲುಕ್​ ರಿಲೀಸ್​ ಆಗಿದೆ. ಈ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೃತಿಕ್​ ಅವರು ಈ ಸಿನಿಮಾದಲ್ಲಿ ವೇದ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್​ ಅಲಿ ಖಾನ್​ ವಿಕ್ರಮ್​ ಆಗಿ ನಟಿಸಲಿದ್ದಾರೆ. ಹೃತಿಕ್​ ಅವರು ಗಡ್ಡ ಬಿಟ್ಟಿದ್ದಾರೆ. ಕಣ್ಣಿಗೆ ಗಾಗಲ್​​ ಹಾಕಿ ಮಿಂಚಿದ್ದಾರೆ. ಕತ್ತಿನಲ್ಲಿ ರಕ್ತವಿದೆ. ಈ ಫೋಟೋ ಪೋಸ್ಟ್ ಮಾಡಿ 3 ಗಂಟೆಯಲ್ಲಿ 18 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಹೃತಿಕ್​ ಅವರ ಫೋಟೋ ಪೋಸ್ಟ್ ಮಾಡಿದ್ದಾರೆ. ವೇದ ಅನ್ನೋದು ಗ್ಯಾಂಗ್​ಸ್ಟರ್​ ಪಾತ್ರವಾದರೆ, ವಿಕ್ರಮ್ ಅನ್ನೋದು​ ಪೊಲೀಸ್​ ಪಾತ್ರ. ರಾಧಿಕಾ ಆಪ್ಟೆ ಹಾಗೂ ರೋಹಿತ್​ ಸರಫ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್​ ಅವರ ಲುಕ್​ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇಂಟರ್​ನೆಟ್​ನಲ್ಲಿ ಹೊಸ ಸೆನ್ಸೇಷನ್​ ಸೃಷ್ಟಿ ಮಾಡಿದ್ದೀರಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಈ ಲುಕ್​ಗೆ ಫಿದಾ ಆದೆ ಎಂದು’ ಕೆಲವರು ಹೇಳಿದ್ದಾರೆ.

ಪುಷ್ಕರ್​ ಮತ್ತು ಗಾಯತ್ರಿ ತಮಿಳಿನ ‘ವಿಕ್ರಮ್​ ವೇದ’ ಸಿನಿಮಾ ನಿರ್ದೇಶನ ಮಾಡಿದ್ದರು. ಇದರ ರಿಮೇಕ್​ ಕೂಡ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ‘ಹೃತಿಕ್​ ಹಾಗೂ ಸೈಫ್​ ಜತೆ ಕೆಲಸ ಮಾಡೋಕೆ ಖುಷಿ ಇದೆ. ಮೂಲ ಸಿನಿಮಾಗೂ ಅದ್ಭುತವಾಗಿ ಈ ಚಿತ್ರವನ್ನು ಕಟ್ಟಿಕೊಡುತ್ತೇವೆ’ ಎಂದು ಅವರು ಹೇಳಿದ್ದರು.

‘ವಿಕ್ರಮ್​ ವೇದ’ ಚಿತ್ರದ ದುಬೈ ಭಾಗದ ಶೂಟಿಂಗ್​ ಹಾಗೂ ಲಖನೌ ಭಾಗದ ಶೂಟಿಂಗ್​ ಪೂರ್ಣಗೊಂಡಿದೆ. 2022ರ ಸೆಪ್ಟೆಂಬರ್​ 30ರಂದು ಸಿನಿಮಾ ರಿಲೀಸ್​ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇದೆ. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ವಿಳಂಬವಾಗುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬಂದಿದೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರಕ್ಕಾಗಿ ಈಗಲೇ ಐಟಂ ಸಾಂಗ್​ ಸಿದ್ಧಪಡಿಸಲು ಮುಂದಾದ ನಿರ್ದೇಶಕ; ಈ ಬಾರಿ ಸಮಂತಾಗಿಲ್ಲ ಚಾನ್ಸ್​

ಸಲ್ಮಾನ್​ ಖಾನ್​ ಹೊಸ ಗರ್ಲ್​ಫ್ರೆಂಡ್​ ಸಮಂತಾ; ಆದ್ರೆ ಇದು ನೀವಂದುಕೊಂಡ ಸಮಂತಾ ಅಲ್ಲ

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ