ಸಲ್ಮಾನ್​ ಖಾನ್​ ಹೊಸ ಗರ್ಲ್​ಫ್ರೆಂಡ್​ ಸಮಂತಾ; ಆದ್ರೆ ಇದು ನೀವಂದುಕೊಂಡ ಸಮಂತಾ ಅಲ್ಲ

ಸಲ್ಮಾನ್​ ಖಾನ್​ ಹೊಸ ಗರ್ಲ್​ಫ್ರೆಂಡ್​ ಸಮಂತಾ; ಆದ್ರೆ ಇದು ನೀವಂದುಕೊಂಡ ಸಮಂತಾ ಅಲ್ಲ
ಸಮಂತಾ ಲಾಕ್​ವುಡ್​, ಸಲ್ಮಾನ್​ ಖಾನ್​

ಸಮಂತಾ ಲಾಕ್​ವುಡ್​ ಫೋಟೋ ವೈರಲ್​ ಆಗುತ್ತಿದೆ. ‘ಹೊಸ ಅತ್ತಿಗೆ ಸಿಕ್ಕರು’ ಎಂದು ಸಲ್ಮಾನ್​ ಖಾನ್​ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಬಗೆಬಗೆಯ ಪೋಸ್ಟ್​ ಮಾಡುತ್ತಿದ್ದಾರೆ.

TV9kannada Web Team

| Edited By: Madan Kumar

Jan 10, 2022 | 9:07 AM

ಸಲ್ಮಾನ್​ ಖಾನ್​ (Salman Khan) ಯಾವಾಗ ಮದುವೆ ಆಗ್ತಾರೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ ಇದೆ. ಅವರು ಯಾವುದೇ ಹೊಸ ಹುಡುಗಿಯ ಜೊತೆ ಕಾಣಿಸಿಕೊಂಡರೂ ಜನರು ಬಣ್ಣಬಣ್ಣದ ಕಥೆ ಕಟ್ಟುತ್ತಾರೆ. ಈಗ ನಟಿ ಸಮಂತಾ (Samantha) ವಿಚಾರದಲ್ಲೂ ಹಾಗೆಯೇ ಆಗಿದೆ. ಸಮಂತಾ ಮತ್ತು ಸಲ್ಮಾನ್​ ಖಾನ್​ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಾಗಂತ ಈ ಸಮಂತಾ ನೀವಂದುಕೊಂಡಂತೆ ನಾಗ ಚೈತನ್ಯ ಅವರ ಮಾಜಿ ಪತ್ನಿ ಅಲ್ಲವೇ ಅಲ್ಲ. ಸಲ್ಲು ಜೊತೆ ಸುತ್ತಾಡುತ್ತಿರುವುದು ಹಾಲಿವುಡ್​ ಬೆಡಗಿ ಸಮಂತಾ ಲಾಕ್​ವುಡ್​ (Samantha Lockwood) ಎಂಬುದು ಲೇಟೆಸ್ಟ್​ ವಿಚಾರ. ಸಲ್ಲು ಮತ್ತು ಸಮಂತಾ ಲಾಕ್​ವುಡ್​ ಜೊತೆಯಾಗಿ ಕಾಣಿಸಿಕೊಂಡ ಕೆಲವು ಫೋಟೋಗಳು ಕೂಡ ವೈರಲ್​ ಆಗಿದೆ.

ಇತ್ತೀಚೆಗೆ ಸಲ್ಮಾನ್​ ಖಾನ್​ ಅವರು ಬರ್ತ್​ಡೇ (ಡಿ.27) ಆಚರಿಸಿಕೊಂಡರು. ಆ ಪಾರ್ಟಿಗೆ ಸಮಂತಾ ಲಾಕ್​ವುಡ್​ ಕೂಡ ಆಗಮಿಸಿದ್ದರು. ಅದಕ್ಕೂ ಮುನ್ನ ಮದುವೆ ಕಾರ್ಯಕ್ರಮವೊಂದರಲ್ಲಿಯೂ ಸಲ್ಲು ಮತ್ತು ಸಮಂತಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ‘ಹೊಸ ಅತ್ತಿಗೆ ಸಿಕ್ಕರು’ ಎಂದು ಸಲ್ಲು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಬಗೆಬಗೆಯ ಪೋಸ್ಟ್​ ಮಾಡುತ್ತಿದ್ದಾರೆ.

ಅಮೆರಿಕಾ ಮೂಲದ ನಟಿ ಮತ್ತು ಮಾಡೆಲ್ ಆಗಿರುವ ಸಮಂತಾ ಲಾಕ್​ವುಡ್​ ಅವರಿಗೆ ಸಲ್ಲು ಜೊತೆ ಸ್ನೇಹ ಚಿಗುರಿರುವುದು ನಿಜ. ಆದರೆ ಅವರು ಅದನ್ನು ಪ್ರೀತಿ ಎಂದು ಕರೆದಿಲ್ಲ. ಆದರೂ ಅವರಿಗೆ ‘ಸಲ್ಮಾನ್​ ಖಾನ್​ ಹೊಸ ಗರ್ಲ್​ಫ್ರೆಂಡ್​’ ಎಂಬ ಹಣೆಪಟ್ಟೆ ಕಟ್ಟಲಾಗಿದೆ. ಈ ಬಗ್ಗೆ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ. ‘ಜನರು ಏನು ಬೇಕಾದರೂ ಮಾತಾಡ್ತಾರೆ. ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿಯಾದೆ. ಅವರು ತುಂಬ ಒಳ್ಳೆಯ ವ್ಯಕ್ತಿ. ಅದೇ ರೀತಿ ನಾನು ಹೃತಿಕ್​ ರೋಷನ್​ ಅವರನ್ನೂ ಭೇಟಿ ಮಾಡಿದ್ದೇನೆ. ಆದರೆ ನನ್ನ ಮತ್ತು ಹೃತಿಕ್​ ಬಗ್ಗೆ ಯಾರೂ ಮಾತಾಡುತ್ತಿಲ್ಲ ಯಾಕೆ? ಇಂಥ ಸುದ್ದಿಗಳೆಲ್ಲ ಎಲ್ಲಿಂದ ಶುರುವಾಗುತ್ತವೋ ನನಗಂತೂ ಗೊತ್ತಿಲ್ಲ’ ಎಂದು ಸಮಂತಾ ಲಾಕ್​ವುಡ್​ ಹೇಳಿದ್ದಾರೆ.

‘ಸಲ್ಮಾನ್​ ಖಾನ್​ ಅವರ ಬರ್ತ್​ಡೇ ಪಾರ್ಟಿಗೆ ನಾನು ಹೋಗಿದ್ದೆ. ಅವರನ್ನು ನಾನು ಈ ಮೊದಲು ಒಂದೆರೆಡು ಬಾರಿ ಭೇಟಿ ಆಗಿದ್ದೆ. ಅವರೊಬ್ಬರೇ ನನಗೆ ಪರಿಚಯ ಇದ್ದಿದ್ದು. ನಂತರ ಪಾರ್ಟಿಯಲ್ಲಿ ಒಬ್ಬೊಬ್ಬರ ಬಗ್ಗೆ ತಿಳಿಯುತ್ತಾ ಹೋಯಿತು. ಎಲ್ಲರೂ ಒಳ್ಳೆಯ ವ್ಯಕ್ತಿಗಳಾಗಿದ್ದರು. ಪಾರ್ಟಿ ತುಂಬ ಚೆನ್ನಾಗಿತ್ತು’ ಎಂದು ಸಮಂತಾ ಲಾಕ್​ವುಡ್​ ಹೇಳಿದ್ದಾರೆ. ಅವರ ಬಗ್ಗೆ ಸಲ್ಮಾನ್​ ಖಾನ್​ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

ಸಲ್ಮಾನ್​ ಖಾನ್​ಗೆ ಸಿಕ್ಸ್​ ಪ್ಯಾಕ್​ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ

Follow us on

Related Stories

Most Read Stories

Click on your DTH Provider to Add TV9 Kannada