ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

ನಾಗ ಚೈತನ್ಯ ಮತ್ತು ನಾಗಾರ್ಜುನ ಅವರನ್ನು ಕಂಡರೆ ಲಹರಿ ಶರಿ ಅವರಿಗೆ ಸಖತ್​ ಅಭಿಮಾನ. ಈ ಸೆಲೆಬ್ರಿಟಿಗಳ ಜೊತೆ ದಿನ ಕಳೆಯಬೇಕು ಎಂಬುದು ಅವರ ಕನಸಾಗಿತ್ತು.

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?
ನಾಗ ಚೈತನ್ಯ, ಲಹರಿ ಶರಿ, ನಾಗಾರ್ಜುನ
Follow us
TV9 Web
| Updated By: ಮದನ್​ ಕುಮಾರ್​

Updated on: Jan 09, 2022 | 8:58 AM

ಟಾಲಿವುಡ್​ ನಟ ನಾಗ ಚೈತನ್ಯ (Naga Chaitanya) ಅವರ ಬದುಕಿನಲ್ಲಿ ಈ ರೀತಿ ಆಗುತ್ತದೆ ಎಂದು ಅವರ ಫ್ಯಾನ್ಸ್​ ಊಹಿಸಿರಲಿಲ್ಲ. ಪ್ರೀತಿಸಿ ಮದುವೆಯಾದ ಸಮಂತಾ (Samantha) ಅವರು ವಿಚ್ಛೇದನ ಪಡೆದು ದೂರಾದರು. ಡಿವೋರ್ಸ್​ ಆದ ಬಳಿಕ ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಅನೇಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆದರೆ ನಾಗ ಚೈತನ್ಯ ಸ್ವಲ್ಪ ಸೈಲೆಂಟ್​ ಆಗಿದ್ದಾರೆ. ಅವರು ಯಾರನ್ನು ಕೈ ಹಿಡಿಯಬಹುದು ಎಂಬ ದೊಡ್ಡ ಪ್ರಶ್ನೆ ಎಲ್ಲರ ಮುಂದಿದೆ. ಈ ಸಂದರ್ಭದಲ್ಲಿ ನಾಗ ಚೈತನ್ಯ ಯಾವುದೇ ಹುಡುಗಿಯ ಜೊತೆ ಕಾಣಿಸಿಕೊಂಡರೂ ಜನರು ಕಣ್ಣರಳಿಸಿ ನೋಡುತ್ತಾರೆ. ಈಗ ನಟಿ, ನಿರೂಪಕಿ ಲಹರಿ ಶರಿ (Lahari Shari) ಅವರು ನಾಗ ಚೈತನ್ಯ ಅವರ ಖಾಸಗಿ ವಿಮಾನದಲ್ಲಿ (Naga Chaitanya Private Flight) ಸುತ್ತಾಟ ನಡೆಸಿದ ಫೋಟೋ ವೈರಲ್​ ಆಗಿದೆ..

ತೆಲುಗು ಚಿತ್ರರಂಗದಲ್ಲಿ ಲಹರಿ ಶರಿ ಫೇಮಸ್​ ಆಗಿದ್ದಾರೆ. ನಟಿಯಾಗಿ, ನಿರೂಪಕಿಯಾಗಿ, ಬಿಗ್​ ಬಾಸ್​ ಸ್ಪರ್ಧಿಯಾಗಿ ಅವರು ಗಮನ ಸೆಳೆದಿದ್ದಾರೆ. ಈಗ ಲಹರಿ ಶರಿಗೆ ನಾಗ ಚೈತನ್ಯ ಅವರ ಖಾಸಗಿ ವಿಮಾನದಲ್ಲಿ ಹಾರಾಡುವ ಅವಕಾಶ ಸಿಕ್ಕಿದೆ. ಈ ವೇಳೆ ಅಕ್ಕಿನೇನಿ ನಾಗಾರ್ಜುನ ಕೂಡ ಜೊತೆಗಿದ್ದರು. ಆ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಏನಿದು ಸಮಾಚಾರ ಎಂದು ಕೆದಕಿ ನೋಡಿದರೆ ಅಸಲಿ ವಿಚಾರ ತಿಳಿಯುತ್ತದೆ.

ನಾಗ ಚೈತನ್ಯ ಮತ್ತು ನಾಗಾರ್ಜುನ ಅವರನ್ನು ಕಂಡರೆ ಲಹರಿ ಶರಿ ಅವರಿಗೆ ಸಖತ್​ ಅಭಿಮಾನ. ಈ ಸೆಲೆಬ್ರಿಟಿಗಳ ಜೊತೆ ದಿನ ಕಳೆಯಬೇಕು ಎಂಬುದು ಅವರ ಕನಸಾಗಿತ್ತು. ಅದೀಗ ಈಡೇರಿದೆ. ‘ಬಂಗಾರ‍್ರಾಜು’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಾಗ ಚೈತನ್ಯ ಮತ್ತು ನಾಗಾರ್ಜುನ ಭಾಗವಹಿಸುತ್ತಿದ್ದಾರೆ. ಅದರಲ್ಲಿ ಲಹರಿ ಶರಿ ಕೂಡ ಪಾಲ್ಗೊಂಡಿದ್ದಾರೆ. ಪ್ರಚಾರದ ಸಲುವಾಗಿ ಊರೂರು ಸುತ್ತುತ್ತಿರುವ ತಂದೆ-ಮಗನ ಜೊತೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಲಹರಿ ಶರಿ ಅವರಿಗೂ ಸಿಕ್ಕಿದೆ. ಆ ಫೋಟೋಗಳು ಈಗ ವೈರಲ್​ ಆಗಿವೆ.

‘ಕನಸು ನನಸಾಯಿತು. ಇಡೀ ದಿನ ನಿಮ್ಮ ಜೊತೆ ಕಳೆಯುವ ಅವಕಾಶ ನೀಡಿದ್ದಕ್ಕಾಗಿ ನಾಗಾರ್ಜುನ ಸರ್​ ಮತ್ತು ನಾಗ ಚೈತನ್ಯ ಸರ್​ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ದಿನವನ್ನು ಸ್ಮರಣೀಯವಾಗಿಸಿದ್ದೀರಿ. ಲವ್​ ಅಕ್ಕಿನೇನೀಸ್​’ ಎಂದು ಲಹರಿ ಶರಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:

‘ಹು ಅಂತೀಯಾ ಮಾವ’ ಹಾಡಿನ ಮೇಲೆ ಕಾಪಿ ಆರೋಪ; ವೈರಲ್​ ಆಗುತ್ತಿದೆ ಹೋಲಿಕೆಯ ವಿಡಿಯೋ

‘ಕುಟುಂಬಕ್ಕೆ ಮುಜುಗರ ತರುವ ಪಾತ್ರ ಮಾಡಲ್ಲ’; ಸಮಂತಾ ವಿಚ್ಛೇದನಕ್ಕೆ ಪರೋಕ್ಷವಾಗಿ ಕಾರಣ ನೀಡಿದ ನಾಗ ಚೈತನ್ಯ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ