‘ವಿಕ್ರಾಂತ್ ರೋಣ’ ಬಗ್ಗೆ ಹೊಸ ಅಪ್​ಡೇಟ್​; ಇದು ಸುದೀಪ್​ ಅಭಿಮಾನಿಗಳು ಖುಷಿಪಡೋ ವಿಚಾರ

ಬೃಹತ್​ ಸೆಟ್​ಗಳನ್ನು ನಿರ್ಮಿಸಿ ‘ವಿಕ್ರಾಂತ್​ ರೋಣ’ ಚಿತ್ರೀಕರಣ ಮಾಡಲಾಗಿದೆ. ಸುದೀಪ್​ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್​ಗಳು ಗಮನ ಸೆಳೆದಿವೆ.

‘ವಿಕ್ರಾಂತ್ ರೋಣ’ ಬಗ್ಗೆ ಹೊಸ ಅಪ್​ಡೇಟ್​; ಇದು ಸುದೀಪ್​ ಅಭಿಮಾನಿಗಳು ಖುಷಿಪಡೋ ವಿಚಾರ
ಸುದೀಪ್​

ಕೊವಿಡ್​ ಪ್ರಕರಣ ಹೆಚ್ಚುತ್ತಿದೆ. ಇದರ ನೇರ ಪರಿಣಾಮ ಚಿತ್ರರಂಗದ ಮೇಲಾಗಿದೆ. ಯಾರೂ ಊಹಿಸದ ರೀತಿಯಲ್ಲಿ ಕೊರೊನಾ (CoronVirus) ಹೆಚ್ಚುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ನಿಯಮ ಜಾರಿಗೆ ತಂದು ಹಲವು ರಾಜ್ಯಗಳ ಸರ್ಕಾರಗಳು ಆದೇಶಿಸಿವೆ. ಇನ್ನೂ ಕೆಲವು ತಿಂಗಳು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳೋದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗ ಒಟಿಟಿ ಪ್ಲಾಟ್​ಫಾರ್ಮ್​ಗಳು ಸ್ಟಾರ್​ ನಟರ ಸಿನಿಮಾಗೆ ಗಾಳ ಹಾಕುವ ಪ್ರಯತ್ನ ಮಾಡುತ್ತಿವೆ. ದೊಡ್ಡ ಮೊತ್ತಕ್ಕೆ ಸ್ಟಾರ್​ ನಟರ ಸಿನಿಮಾ ಕೊಂಡುಕೊಳ್ಳೋಕೆ ಕೆಲವು ಒಟಿಟಿ ಕಂಪೆನಿಗಳು ಆಸಕ್ತಿ ತೋರುತ್ತಿವೆ. ಇತ್ತೀಚೆಗೆ ಒಟಿಟಿ ಸಂಸ್ಥೆಯೊಂದು ಕಿಚ್ಚ ಸುದೀಪ್​ (Sudeep) ನಟನೆಯ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾಗೆ 100 ಕೋಟಿ ರೂಪಾಯಿ ಆಫರ್​​ ನೀಡಿತ್ತು ಎನ್ನಲಾಗಿತ್ತು. ಈ ವಿಚಾರದಲ್ಲಿ ಈಗ ಹೊಸ ಅಪ್​ಡೇಟ್​ ಒಂದು ಬಂದಿದೆ.

‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹೂಡಿದ್ದಾರೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್​, ನೀತಾ ಅಶೋಕ್​, ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ.  ಈ ಮೊದಲಿನ ಪ್ಲ್ಯಾನ್​ ಪ್ರಕಾರವೇ ನಡೆದರೆ ಫೆ.24ರಂದು ‘ವಿಕ್ರಾಂತ್​ ರೋಣ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಆದರೆ, ಕೊರೊನಾ ಹೆಚ್ಚುತ್ತಿರುವುದರಿಂದ ಸಿನಿಮಾ ಆ ದಿನ ರಿಲೀಸ್​ ಆಗುವುದಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗಲೇ ಒಟಿಟಿ ಆಫರ್​ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾದ ಪ್ರಸಾರ ಹಕ್ಕುಗಳನ್ನು ಖರೀದಿಸಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿತ್ತು. ಆದರೆ, ಇದನ್ನು ಚಿತ್ರತಂಡ ರಿಜೆಕ್ಟ್ ಮಾಡಿದೆ ಎಂದು ವರದಿ ಆಗಿದೆ. ತಡವಾದರೂ ‘ವಿಕ್ರಾಂತ್​ ರೋಣ’ ವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಮಾಡಲು ಸಿನಿಮಾ ತಂಡ ನಿರ್ಧರಿಸಿದೆ. ಚಿತ್ರ 3ಡಿಯಲ್ಲೂ ಸಿದ್ಧಗೊಂಡಿರುವುದು ಇದಕ್ಕೆ ಮುಖ್ಯ ಕಾರಣವಂತೆ.

ಬೃಹತ್​ ಸೆಟ್​ಗಳನ್ನು ನಿರ್ಮಿಸಿ ‘ವಿಕ್ರಾಂತ್​ ರೋಣ’ ಚಿತ್ರೀಕರಣ ಮಾಡಲಾಗಿದೆ. ಸುದೀಪ್​ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್​ಗಳು ಗಮನ ಸೆಳೆದಿವೆ. ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಟೈಟಲ್​ ಲಾಂಚ್​ ಮಾಡಿದ್ದು ಈ ಸಿನಿಮಾದ ವಿಶೇಷವಾಗಿತ್ತು.

ಇದನ್ನೂ ಓದಿ: ‘ವಿಕ್ರಾಂತ್​ ರೋಣ’ ರಿಲೀಸ್​ ಮುಂದಕ್ಕೆ ಹೋಗಿಲ್ಲ; ಆದ್ರೂ ಜನರಿಗೆ ಡೌಟ್​ ಬರಲು ಕಾರಣ ಏನು?

‘ವಿಕ್ರಾಂತ್​ ರೋಣ’ ಪ್ಲ್ಯಾನ್​ನಲ್ಲಿ ದೊಡ್ಡ ಬದಲಾವಣೆ; ಒಟಿಟಿ ಆಫರ್​ ಬೆನ್ನಲ್ಲೇ ಟೀಸರ್​ ರಿಲೀಸ್​ ಮುಂದೂಡಿಕೆ?

Click on your DTH Provider to Add TV9 Kannada