AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಕ್ರಾಂತ್​ ರೋಣ’ ರಿಲೀಸ್​ ಮುಂದಕ್ಕೆ ಹೋಗಿಲ್ಲ; ಆದ್ರೂ ಜನರಿಗೆ ಡೌಟ್​ ಬರಲು ಕಾರಣ ಏನು?

Kichcha Sudeep | Vikrant Rona: ಹೊಸ ವರ್ಷದ ಪ್ರಯುಕ್ತ ‘ವಿಕ್ರಾಂತ್​ ರೋಣ’ ಚಿತ್ರತಂಡದವರು ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದರಲ್ಲಿ ರಿಲೀಸ್​ ದಿನಾಂಕ ಕಾಣಿಸುತ್ತಿಲ್ಲ!

‘ವಿಕ್ರಾಂತ್​ ರೋಣ’ ರಿಲೀಸ್​ ಮುಂದಕ್ಕೆ ಹೋಗಿಲ್ಲ; ಆದ್ರೂ ಜನರಿಗೆ ಡೌಟ್​ ಬರಲು ಕಾರಣ ಏನು?
ಅನೂಪ್​ ಭಂಡಾರಿ, ಕಿಚ್ಚ ಸುದೀಪ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 01, 2022 | 3:17 PM

Share

ದಿನದಿಂದ ದಿನಕ್ಕೆ ಒಮಿಕ್ರಾನ್​ ಪ್ರಕರಣಗಳ (Omicron Cases in India) ಸಂಖ್ಯೆ ಹೆಚ್ಚುತ್ತಿದೆ. ಮತ್ತೆ ಎಲ್ಲರಲ್ಲೂ ಆತಂಕ ಮೂಡುತ್ತಿದೆ. ಈಗಾಗಲೇ ಎರಡು ಲಾಕ್​ಡೌನ್​ ಕಾರಣದಿಂದ ಹೈರಾಣಾಗಿದ್ದ ಜನರಲ್ಲಿ ಮೂರನೇ ಲಾಕ್​ಡೌನ್​ ಬಗ್ಗೆ ಚಿಂತೆ ಶುರುವಾಗಿದೆ. ಈ ನಡುವೆ ಅನೇಕ ಸಿನಿಮಾಗಳು ರಿಲೀಸ್​ ದಿನಾಂಕ ಮುಂದೂಡಿಕೊಳ್ಳುತ್ತಿವೆ. ಬಿಗ್​ ಬಜೆಟ್​ನಲ್ಲಿ ತಯಾರಾದ ಒಂದು ಚಿತ್ರದ ರಿಲೀಸ್​ ಡೇಟ್​ ಬದಲಾವಣೆ ಆದರೆ ಇನ್ನಿತರ ಸಿನಿಮಾಗಳ ಮೇಲೂ ಅದು ಪರಿಣಾಮ ಬೀರುತ್ತದೆ. ಈಗ ‘ವಿಕ್ರಾಂತ್​ ರೋಣ’ (Vikrant Rona) ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕೆಲವರಿಗೆ ಅನುಮಾನ ಮೂಡಿದೆ. ಕಿಚ್ಚ ಸುದೀಪ್​ (Kichcha Sudeep) ನಟನೆಯ ಈ ಸಿನಿಮಾ ಫೆ.24ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ ರಿಲೀಸ್​ ಡೇಟ್​ (Vikrant Rona Release Date) ಮುಂಡೂಡಿಕೆ ಆಗಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಅದಕ್ಕೆ ಕಾರಣ ಒಂದೇ ಒಂದು ಪೋಸ್ಟರ್​! ಆ ಕುರಿತು ನಿರ್ದೇಶಕ ಅನೂಪ್​ ಭಂಡಾರಿ (Anup Bhandari) ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ.

ಹೊಸ ವರ್ಷದ ಪ್ರಯುಕ್ತ ‘ವಿಕ್ರಾಂತ್​ ರೋಣ’ ಚಿತ್ರತಂಡದವರು ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಹ್ಯಾಪಿ ನ್ಯೂ ಇಯರ್​ 2022’ ಎಂದು ಬರೆಯಲಾಗಿದೆ. ಆದರೆ ರಿಲೀಸ್​ ದಿನಾಂಕ ಕಾಣಿಸುತ್ತಿಲ್ಲ. ಹಾಗಾಗಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಟಿವಿ9 ಕನ್ನಡ ಡಿಜಿಟಲ್​’ ಜತೆ ಮಾತನಾಡಿರುವ ನಿರ್ದೇಶಕ ಅನೂಪ್​ ಭಂಡಾರಿ ಅವರು, ಈ ರೀತಿ ಆಗಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

‘ರಿಲೀಸ್​ ಡೇಟ್​ ಮುಂದೂಡಿಕೆ ಆಗಿಲ್ಲ. ಒಂದು ಅನೌನ್ಸ್​ಮೆಂಟ್​ ಮಾಡಬೇಕು ಎಂಬ ಪ್ಲ್ಯಾನ್​ ಇತ್ತು. ಆಮೇಲೆ ಅದು ಚೇಂಜ್​ ಆಯ್ತು. ಕೊನೇ ಕ್ಷಣದಲ್ಲಿ ಈ ಪೋಸ್ಟರ್​ ನಾನೇ ರೆಡಿ ಮಾಡಿದ್ದು. ರಿಲೀಸ್​ ಡೇಟ್​ ಹಾಕುವುದನ್ನು ಮರೆತುಬಿಟ್ಟೆ. ಮುಂದೇನಾಗುತ್ತೋ ಗೊತ್ತಿಲ್ಲ. ಕೆಲವು ರಾಜ್ಯಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ದೆಹಲಿಯಲ್ಲಿ ಚಿತ್ರಮಂದಿರ ಕ್ಲೋಸ್​ ಆಗಿದೆ. ಹಾಗಾಗಿ ಮುಂದಿನದ್ದನ್ನು ಊಹಿಸಲು ಆಗಲ್ಲ. ಆ ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಸದ್ಯಕ್ಕಂತೂ ನಮ್ಮ ಸಿನಿಮಾದ ರಿಲೀಸ್​ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅನೂಪ್​ ಭಂಡಾರಿ ಹೇಳಿದ್ದಾರೆ.

‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಈಗ ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ವಿಎಫ್​ಎಕ್ಸ್​ ಮತ್ತು 3ಡಿ ಕೆಲಸಗಳು ಭರದಿಂದ ಸಾಗಿವೆ. ಶಾಲಿನಿ ಜಾಕ್​ ಮಂಜು ಮತ್ತು ಅಲಂಕಾರ್​ ಪಾಂಡಿಯನ್​ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ವಿಕ್ರಾಂತ್​ ರೋಣ’ ನಟಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ; ದೇಶ ಬಿಟ್ಟು ಹೋಗುವಂತಿಲ್ಲ ಜಾಕ್ವೆಲಿನ್​ ಫರ್ನಾಂಡಿಸ್​

ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು