ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ

Puneeth Rajkumar | Appu fans: ನಟ ಪುನೀತ್ ರಾಜ್​ಕುಮಾರ್ ಅವರ ಮೇಲಿನ ಪ್ರೀತಿಗೆ ಕೊನೆಯಿಲ್ಲ. ವಿವಿಧ ರೂಪದ ಮೂಲಕ ಅಭಿಮಾನಿಗಳು ಅದನ್ನು ತೋರ್ಪಡಿಸುತ್ತಲೇ ಇದ್ದಾರೆ. ಹೊಸ ವರ್ಷದಂದು ಮೈಸೂರಿನಲ್ಲಿ ಅಪ್ಪು ಭಾವಚಿತ್ರದೊಂದಿಗೆ ಅಭಿಮಾನಿಗಳು ಚಾಮುಂಡಿ ದೇವರ ದರ್ಶನ ಪಡೆದಿದ್ದಾರೆ.

TV9kannada Web Team

| Edited By: shivaprasad.hs

Jan 01, 2022 | 1:06 PM

ಮೈಸೂರು: ‘ಅಭಿಮಾನಿಗಳೇ ನಮ್ ಮನೆ ದೇವ್ರು’ ಎಂದಿದ್ದ ಪುನೀತ್ ರಾಜ್​ಕುಮಾರ್ ಅಂತೆಯೇ ಬಾಳಿದರು. ಪುನೀತ್ ಬದುಕಿನ ರೀತಿ ಈಗ ನಾಡಿಗೆ ಆದರ್ಶವಾಗಿದೆ. ಅಭಿಮಾನಿಗಳಿಗೆ ಅಪ್ಪು ಎಂದರೆ ಅಪಾರ ಪ್ರೀತಿ. ಅದನ್ನು ಹಲವು ವಿಧಾನದಿಂದ ತೋರ್ಪಡಿಸುತ್ತಿದ್ದಾರೆ ಕೂಡ. ಇತ್ತೀಚೆಗೆ ಪುನೀತ್ ಫೋಟೋವನ್ನು ಹೊತ್ತು ಶಬರಿಮಲೆ ಮೆಟ್ಟಿಲು ಹತ್ತಿದ್ದ ಅಭಿಮಾನಿಗಳ ವಿಡಿಯೋ ಸಖತ್ ಸುದ್ದಿಯಾಗಿತ್ತು. ಅದೇ ಮಾದರಿಯಲ್ಲಿ ಅಪ್ಪು ಮತ್ತೆ ಅಭಿಮಾನಿಗಳ ಹೆಗಲೇರಿ ತೀರ್ಥಯಾತ್ರೆ ಹೊರಟಿದ್ದಾರೆ. ಹೌದು. ಹೊಸ ವರ್ಷದಂದು ಅಪ್ಪು ಭಾವಚಿತ್ರದೊಂದಿಗೆ ಶಿವಮೊಗ್ಗದ ಹೊಳೆಹೊನ್ನೂರಿನ ಭಕ್ತರು ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಿದ್ದಾರೆ.

ಶಬರಿಮಲೆ ಯಾತ್ರೆಯನ್ನು ಭಕ್ತರು ಕೈಗೊಂಡಿದ್ದು, ಮಾರ್ಗದಲ್ಲಿ ಸಿಗುವ ಎಲ್ಲಾ ಧಾರ್ಮಿಕ ಸ್ಥಳಗಳನ್ನು ದರ್ಶಿಸಲಿದ್ದಾರೆ. ಅಪ್ಪು ಭಾವಚಿತ್ರಕ್ಕೂ ದರ್ಶನ ಪೂಜೆಯನ್ನು ಸಲ್ಲಿಸಲಾಗಿದೆ. ಇನ್ನು ಮುಂದೆ ಪ್ರತಿ ವರ್ಷ ಅಪ್ಪು ಭಾವಚಿತ್ರದೊಂದಿಗೆ ಶಬರಿಮಲೆ ಯಾತ್ರೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಕುರಿತು ಭಕ್ತರು ಟಿವಿ9ನೊಂದಿಗೆ ಮಾತನಾಡಿದ್ದು, ಸಂದರ್ಶನ ಇಲ್ಲಿದೆ.

ಇದನ್ನೂ ಓದಿ:

ಮಗುವಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ

ನ್ಯೂ ಇಯರ್​ ಸಂಭ್ರಮಕ್ಕೆ ಪುನೀತ್​​ ರಾಜ್​ಕುಮಾರ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಪೋಸ್ಟರ್​ ರಿಲೀಸ್​

Follow us on

Click on your DTH Provider to Add TV9 Kannada