ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ರಾಮನಗರದ ರೆಸಾರ್ಟೊಂದು ಒದಗಿಸಿದ ಟೆಂಟ್ಗಳಲ್ಲಿ ಪಾರ್ಟಿ ಮಾಡಲು ಬಂದರು ವಿದ್ಯಾವಂತ ಅವಿವೇಕಿಗಳು!
ಅನೇಕ ಜೋಡಿಗಳು ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಲಾರಂಭಿಸಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡವೊಂದು ರೆಸಾರ್ಟ್ಗೆ ಆಗಮಿಸಿದೆ.
ನೀವೇನೇ ಹೇಳಿ ಮಾರಾಯ್ರೇ ನಮ್ಮ ಜನಕ್ಕೆ ಬುದ್ಧಿ ಬರಲಾರದು. ಈ ವಿಡಿಯೋ ನೋಡಿದರೆ ನಾವು ಯಾಕೆ ಹೀಗೆ ಹೇಳ್ತಿತಿದ್ದೀವಿ ಅಂತ ನಿಮಗೆ ಗೊತ್ತಾಗುತ್ತದೆ. ಒಮೈಕ್ರಾನ್ ರೂಪಾಂತರಿ ಮತ್ತು ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ರಾತ್ರಿ ಕರ್ಫ್ಯೂ ಹೇರಲಾಗಿದೆ. ಹಾಗೆಯೇ, ಹೊಸ ವರ್ಚಾಚರಣೆ ಅಂಗವಾಗಿ ಯಾರೂ ಪಬ್, ಬಾರ್, ರೆಸ್ಟುರಾ ಮತ್ತು ನಗರಗಳ ಹೊರವಲಯದ ರೆಸಾರ್ಟ್ ಮತ್ತು ಧಾಬಾಗಳಲ್ಲಿ ಗುಂಪು ಸೇರಬಾರದು, ಪಾರ್ಟಿ ಮಾಡಬಾರದು ಅಂತ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಆದರೆ, ಜನಕ್ಕೆ ಮನೆಯಿಂದ ಹೊರಬಂದು ಕುಡಿದು, ತಿಂದು ಕುಪ್ಪಳಿಸಿದಾಗಲೇ ಹೊಸ ವರ್ಷ ಆಚರಿಸಿದಂತೆ! ರಾಮನಗರದ ಹೊರವಲಯದಲ್ಲಿರುವ ಟ್ರಿಕೆಂಟಾ ರೆಸಾರ್ಟ್ ಜನಕ್ಕೆ ಟೆಂಟ್ಗಳಲ್ಲಿ ಪಾರ್ಟಿ ಮಾಡುವ ಏರ್ಪಾಟು ಮಾಡಿಕೊಟ್ಟಿದೆ. ಅಸಲಿಗೆ ಮೊದಲು ರೆಸಾರ್ಟ್ ಮಾಲೀಕನ ಮೇಲೆ ನಾನ್ ಬೇಲೇಬಲ್ ಕೇಸ್ ಜಡಿಯಬೇಕು. ಒಮ್ಮೆ ಜೈಲೂಟ ತಿಂದರೆ ಮತ್ತೊಮ್ಮೆ ಇಂಥ ಪ್ರಯತ್ನಕ್ಕಿಳಿಯಲಾರ.
ಅನೇಕ ಜೋಡಿಗಳು ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಲಾರಂಭಿಸಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡವೊಂದು ರೆಸಾರ್ಟ್ಗೆ ಆಗಮಿಸಿದೆ. ಹಾಗೆ ನೋಡಿದರೆ, ಟೆಂಟ್ಗಳಲ್ಲಿ ಮೋಜು ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಬಹುದಿತ್ತು.
ಆದರೆ, ಅವರು ಹಾಗೆ ಮಾಡದೆ, ಲೌಡ್ ಸ್ಪೀಕರ್ ಮೂಲಕ ಅಲ್ಲಿದ್ದವರಿಗೆ ಜಾಗ ಖಾಲಿ ಮಾಡಿ ಮನೆಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಅವರಿಗೆ ವಾಪಸ್ಸು ಹೋಗಲು ಒಂದು ಗಡುವನ್ನು ಅಧಿಕಾರಿ ನಿಗದಿಪಡಿಸಿದ್ದಾರೆ.
ಒಂದು ಪಕ್ಷ ಪಾರ್ಟಿ ಮಾಡುತ್ತಿದ್ದವರು ನಿಗದಿತ ಗಡುವಿನೊಳಗೆ ಅಲ್ಲಿಂದ ಹೊರಡದಿದ್ದರೆ, ಅವರ ವಿರುದ್ಧ ವಿಕೋಪ ನಿರ್ವಹಣೆ ಮತ್ತು ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗುವುದು ಅಂತ ಸೀನಿಯರ್ ಕಾಪ್ ಎಚ್ಚರಿಸಿದ್ದಾರೆ.
ಜೋಡಿಗಳು ಒಂದೊಂದಾಗಿ ಹೊರಬಂದು ಮನೆಗಳಿಗೆ ವಾಪಸ್ಸು ಹೋಗುತ್ತಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ: ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ