ಸಿದ್ದರಾಮಯ್ಯನವರ ಸರ್ಕಾರೀ ಬಂಗ್ಲೆ ಆವರಣದಲ್ಲಿ ಕೆರೆಹಾವು ಕಾಣಿಸಿಕೊಂಡಿತಾದರೂ ಬಿಬಿಎಮ್​ಪಿ ಸಿಬ್ಬಂದಿಗೆ ಸಿಗಲಿಲ್ಲ!

ಸಿದ್ದರಾಮಯ್ಯನವರ ಸರ್ಕಾರೀ ಬಂಗ್ಲೆ ಆವರಣದಲ್ಲಿ ಕೆರೆಹಾವು ಕಾಣಿಸಿಕೊಂಡಿತಾದರೂ ಬಿಬಿಎಮ್​ಪಿ ಸಿಬ್ಬಂದಿಗೆ ಸಿಗಲಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 01, 2022 | 6:40 PM

ಹಾವು ಹಿಡಿಯುವುದು ಗೊತ್ತಿರುವ ಪಾಲಿಕೆ ಸಿಬ್ಬಂದಿ ಆವರಣವೆಲ್ಲ ತಡಕಾಡಿದರೂ ಹಾವು ಮಾತ್ರ ಸಿಕ್ಕಿಲ್ಲ. ಅವರು ಹಾವನ್ನು ಹುಡುಕುವ ಪ್ರಯತ್ನ ಮಾಡುವಾಗ ಸಿದ್ದರಾಮಯ್ಯನವರು ಹೊರಗೆ ಬರುವ ಸಾಹಸವೇನೂ ಮಾಡಲಿಲ್ಲ. ಅಸಲಿಗೆ ಅವರು ಮನೆಯಲ್ಲಿದ್ದರೋ ಹೊರಹೋಗಿದ್ದರೋ ಅಂತಲೂ ಗೊತ್ತಾಗಿಲ್ಲ

ಸದನದ ಒಳಗೆ ಮತ್ತು ಹೊರಗೆ ಆಡಳಿತ ಪಕ್ಷದ ವಿರುದ್ಧ ಸದಾ ಭುಸುಗುಡುವ ವಿರೋಧಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಗಳೂರಿನ ಸರ್ಕಾರಿ ಬಂಗಲೆಯ ಆವರಣದಲ್ಲಿ ಶನಿವಾರ ಬೆಳಗ್ಗೆ ಒಂದು ಕೆರೆಹಾವು ಭುಸುಗುಡುತ್ತಾ ಪ್ರವೇಶಿಸಿದೆ. ಹಿರಿಯ ಕಾಂಗ್ರೆಸ್ ನಾಯಕರ ಭದ್ರತಾ ಸಿಬ್ಬಂದಿ ಅದನ್ನು ಗಮನಿಸಿ ತಮ್ಮ ಧಣಿಗೆ ಸುದ್ದಿ ಮುಟ್ಟಿಸಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಹಾವು ತಮ್ಮ ಬಂಗ್ಲೆಯ ಆವರಣ ಹೊಕ್ಕಿದ್ದು ಕೇಳಿ ಸಿದ್ದರಾಮಯ್ಯನವರು ಹೇಗೆ ಪ್ರತಿಕ್ರಿಯಿಸಿದರೆಂದು ನಮಗೆ ಗೊತ್ತಾಗಿಲ್ಲ ಮಾರಾಯ್ರೇ. ಅವರಿಗೆ ವಿಷಯ ತಿಳಿಸಿದ ನಂತರ ಭದ್ರತಾ ಸಿಬ್ಬಂದಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿ ಬಿ ಎಮ್ ಪಿ) ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ಕೂಡಲೇ ಬಿ ಬಿ ಎಮ್ ಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ವಿರೋದ ಪಕ್ಷದ ನಾಯಕನ ಭದ್ರತಾ ಸಿಬ್ಬಂದಿಯಿಂದ ಕರೆ ಬಂದರೆ ಹೋಗದಿರಲು ಸಾಧ್ಯವೇ? ಬೇರೆ ಯಾರಾದರೂ ಫೋನ್ ಮಾಡಿದ್ದರೆ, ಪಾಲಿಕೆ ಸಿಬ್ಬಂದಿ ಏನಾದರೂ ನೆಪ ಹೇಳುವ ಇಲ್ಲವೇ ಕರೆದ ಸ್ಥಳಕ್ಕೆ ತಡವಾಗಿ ತಲುಪುವ ಸಾಧ್ಯತೆ ಖಂಡಿತ ಇರುತ್ತಿತ್ತು.

ಬಿಡಿ ಅದು ಬೇರೆ ವಿಷಯ. ಹಾವು ಹಿಡಿಯುವುದು ಗೊತ್ತಿರುವ ಪಾಲಿಕೆ ಸಿಬ್ಬಂದಿ ಆವರಣವೆಲ್ಲ ತಡಕಾಡಿದರೂ ಹಾವು ಮಾತ್ರ ಸಿಕ್ಕಿಲ್ಲ. ಅವರು ಹಾವನ್ನು ಹುಡುಕುವ ಪ್ರಯತ್ನ ಮಾಡುವಾಗ ಸಿದ್ದರಾಮಯ್ಯನವರು ಹೊರಗೆ ಬರುವ ಸಾಹಸವೇನೂ ಮಾಡಲಿಲ್ಲ. ಅಸಲಿಗೆ ಅವರು ಮನೆಯಲ್ಲಿದ್ದರೋ ಹೊರಹೋಗಿದ್ದರೋ ಅಂತಲೂ ಗೊತ್ತಾಗಿಲ್ಲ ಮಾರಾಯ್ರೇ.

ಹಾವನ್ನು ಹುಡುಕಿ ಹುಡುಕಿ ಸುಸ್ತಾದ ಪಾಲಿಕೆಯವರು ಕೊನೆಗೆ ಬರಿಗೈನಲ್ಲಿ ವಾಪಸ್ಸು ಹೋಗಿದ್ದಾರೆ. ಹಾವಿನ ಪ್ರಹಸನವನ್ನು ಬಿಜೆಪಿಯವರು ‘ಎಲ್ಲೋ ಬಟ್ಟೆ ಹಾವು ಇರಬೇಕು’ ಅಂತ ನಾಳೆ ಗೇಲಿ ಮಾಡದಿದ್ದರೆ ಸಾಕು ಮಾರಾಯ್ರೇ!

ಇದನ್ನೂ ಓದಿ:  Viral Video: ಕ್ರಿಸ್​ಮಸ್​ ಆಚರಿಸಿದ್ದೇಕೆಂದು ಗಲಾಟೆ ಮಾಡಿದ ಬಜರಂಗದಳದವರಿಗೆ ಬಿಸಿ ಮುಟ್ಟಿಸಿದ ಮಹಿಳೆ; ವಿಡಿಯೋ ವೈರಲ್

Published on: Jan 01, 2022 06:40 PM