ಹೊಸ ವರ್ಷದ ದಿನ ಸಿದ್ದರಾಮಯ್ಯ ಮನೆಗೆ ಹೊಸ ಅತಿಥಿ ಎಂಟ್ರಿ; ಯಾರಿರಬಹುದು?
ಬಿಬಿಎಂಪಿ ಸಿಬ್ಬಂದಿ ಹಾವು ಹಿಡಿಯಲು ಕೆಲ ಕಾಲ ಕಸರತ್ತು ನಡೆಸಿ, ಕೊನೆಗೆ ಹಾವು ಸಿಗದೇ ಬರಿಗೈಲಿ ವಾಪಸ್ ಹೋಗಿದ್ದಾರೆ. ಸಾಮಾನ್ಯವಾಗಿ ಕೆರೆ ಹಾವು ಆಹಾರ ಅರೆಸುತ್ತಾ ಮನೆ ಬಳಿ ಬರುತ್ತವೆ.
ಹೊಸ ವರ್ಷದ ಮೊದಲ ದಿನವಾದ ಇಂದು (ಜ.1) ವಿಪಕ್ಷ ನಾಯಕ ಸಿದ್ದರಾಮಯ್ಯ ಮನೆಗೆ ಹೊಸ ಅತಿಥಿ ಎಂಟ್ರಿಕೊಟ್ಟಿದೆ. ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಕೆರೆಹಾವು ಕಾಣಿಸಿಕೊಂಡಿದೆ. ಕೆರೆಹಾವು ಸಿದ್ದರಾಮಯ್ಯ ನಿವಾಸದ ಆವರಣದಲ್ಲಿದ್ದ ಪೊದೆಯೊಳಗೆ ಕಾಣಿಸಿಕೊಂಡಿದೆ. ಹೀಗಾಗಿ ಹಾವು ಹಿಡಿಯಲು ಸಿದ್ದರಾಮಯ್ಯ ಭದ್ರತಾ ಸಿಬ್ಬಂದಿ ಬಿಬಿಎಂಪಿ ಸಿಬ್ಬಂದಿಯನ್ನ ಕರೆಸಿದ್ದಾರೆ. ಯಾರ ಕೈಗೂ ಸಿಗದೇ ಹಾವು ನಾಪತ್ತೆಯಾಗಿದೆ. ಬಿಬಿಎಂಪಿ ಸಿಬ್ಬಂದಿ ಹಾವು ಹಿಡಿಯಲು ಕೆಲ ಕಾಲ ಕಸರತ್ತು ನಡೆಸಿ, ಕೊನೆಗೆ ಹಾವು ಸಿಗದೇ ಬರಿಗೈಲಿ ವಾಪಸ್ ಹೋಗಿದ್ದಾರೆ. ಸಾಮಾನ್ಯವಾಗಿ ಕೆರೆ ಹಾವು ಆಹಾರ ಅರೆಸುತ್ತಾ ಮನೆ ಬಳಿ ಬರುತ್ತವೆ. ಇಲಿಗಳು ಕಣ್ಣಿಗೆ ಬಿದ್ದಾಗ ಹಿಡಿಯಲು ಅದನ್ನ ಹಿಂಬಾಲಿಸುತ್ತಾ ಬರುತ್ತವೆ. ಬೇರೆ ಹಾವುಗಳಂತೆ ಕೆರೆಹಾವು ವಿಷಕಾರಿಯಲ್ಲ.
ಇದನ್ನೂ ಓದಿ
ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ತನಿಖೆ ಪೂರ್ಣ; ಅಪಘಾತಕ್ಕೆ ಸಿಎಫ್ಐಟಿ ಕಾರಣ ಎಂದ ತನಿಖಾ ತಂಡ
ಶಿವಕಾಶಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ; 4 ಮಂದಿ ಸಾವು, ಹಲವರಿಗೆ ಗಾಯ
Published on: Jan 01, 2022 01:04 PM
Latest Videos