AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಪನಾ ಮತ್ತು ಮಂಜುಳಾಗೆ ಇಂಥ ಸಾವು ಬೇಕಿತ್ತಾ?’; ಮಿಂಚಿ ಮರೆಯಾದ ನಟಿಯರ ಬಗ್ಗೆ ರಾಜೇಶ್​ ವಿಷಾದದ ಮಾತು

‘ಕಲ್ಪನಾ ಮತ್ತು ಮಂಜುಳಾಗೆ ಇಂಥ ಸಾವು ಬೇಕಿತ್ತಾ?’; ಮಿಂಚಿ ಮರೆಯಾದ ನಟಿಯರ ಬಗ್ಗೆ ರಾಜೇಶ್​ ವಿಷಾದದ ಮಾತು

TV9 Web
| Updated By: ಮದನ್​ ಕುಮಾರ್​

Updated on: Jan 01, 2022 | 9:14 PM

‘ಚಿತ್ರರಂಗದಲ್ಲಿ ಕಲ್ಪನಾ ರೀತಿ ಬೇರೆ ಯಾವ ಕಲಾವಿದೆಯೂ ಹೆಸರು ಮಾಡಿಲ್ಲ. ಆದರೆ ಬದುಕಿನಲ್ಲಿ ದುರಂತವನ್ನು ಅವರೇ ತಂದುಕೊಂಡರು’ ಎಂದಿದ್ದಾರೆ ರಾಜೇಶ್​.

ಕನ್ನಡ ಚಿತ್ರರಂಗದಲ್ಲಿ ನಟಿಯರಾದ ಕಲ್ಪನಾ ಮತ್ತು ಮಂಜುಳಾ ಅವರು ಸ್ಟಾರ್​ ಕಲಾವಿದೆಯರಾಗಿ ಮಿಂಚಿದ್ದರು. ಅವರ ಸಿನಿಮಾಗಳನ್ನು ಜನರು ಈಗಲೂ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಆ ನಟಿಯರ ಅಭಿನಯವನ್ನು ಅಭಿಮಾನಿಗಳು ಕೊಂಡಾಡುತ್ತಾರೆ. ಎಷ್ಟೇ ಜನಪ್ರಿಯತೆ ಗಳಿಸಿದರೂ ಕೂಡ ಕಲ್ಪನಾ ಮತ್ತು ಮಂಜುಳಾ ಅವರು ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಕಾಣಲಿಲ್ಲ. ಇಬ್ಬರದ್ದು ಕೂಡ ದುರಂತ ಅಂತ್ಯ. ಆ ಬಗ್ಗೆ ಹಿರಿಯ ನಟ ರಾಜೇಶ್​ ಅವರು ವಿಷಾದ ವ್ಯಕ್ತಪಡಿಸುತ್ತಾರೆ. ‘ಕಲ್ಪನಾ ಮತ್ತು ಮಂಜುಳಾ ಅವರದ್ದು ದುರಂತದ ಸಾವು. ಅಂಥ ಸಾವು ಬೇಕಾಗಿತ್ತಾ? ನಾವಾಗಿಯೇ ಸಾವು ತಂದುಕೊಳ್ಳಬಾರದು. ಹುಟ್ಟು-ಸಾವು ಬ್ರಹ್ಮ ಬರೆದಿರುವುದು’ ಎಂದು ರಾಜೇಶ್​ ಹೇಳಿದ್ದಾರೆ. ಟಿವಿ9 ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ತೆರೆದಿದ್ದಾರೆ. ‘ಚಿತ್ರರಂಗದಲ್ಲಿ ಕಲ್ಪನಾ ರೀತಿ ಬೇರೆ ಯಾವ ಕಲಾವಿದೆಯೂ ಹೆಸರು ಮಾಡಿಲ್ಲ. ಶರಪಂಜರ, ಗೆಜ್ಜೆ ಪೂಜೆ ಸಿನಿಮಾದ ಪಾತ್ರಗಳನ್ನು ಕಲ್ಪನಾ ಹೊರತುಪಡಿಸಿ ಬೇರೆ ಯಾರೂ ಮಾಡಲೂ ಸಾಧ್ಯವಿಲ್ಲ. ಆದರೆ ಬದುಕಿನಲ್ಲಿ ದುರಂತವನ್ನು ಅವರೇ ತಂದುಕೊಂಡರು’ ಎಂದಿದ್ದಾರೆ ರಾಜೇಶ್​.

ಇದನ್ನೂ ಓದಿ:

ಮಂಜುಳಾ ಮದುವೆ ಹಿಂದಿದೆ ದುರಂತ​ ಕಥೆ; ಸಾವಿನ ಕಾರಣ ವಿವರಿಸಿದ ಹಿರಿಯ ನಟ ರಾಜೇಶ್​

ಅಪ್ಪು ಇಲ್ಲದೇ 2 ತಿಂಗಳು: ಪುನೀತ್​​ ನಿಧನದ ಬಳಿಕ ನಡೆದ 10 ಪ್ರಮುಖ ಘಟನೆಗಳೇನು?