ಅಪ್ಪು ಇಲ್ಲದೇ 2 ತಿಂಗಳು: ಪುನೀತ್​​ ನಿಧನದ ಬಳಿಕ ನಡೆದ 10 ಪ್ರಮುಖ ಘಟನೆಗಳೇನು?

Puneeth Rajkumar: ಪುನೀತ್​ ರಾಜ್​ಕುಮಾರ್​ ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಹಾಗಾಗಿ ಅಪ್ಪು ನಿಧನವು ಸಮಾಜದ ಮೇಲೆ ಅನೇಕ ಪರಿಣಾಮಗಳನ್ನು ಬೀರಿತು.

ಅಪ್ಪು ಇಲ್ಲದೇ 2 ತಿಂಗಳು: ಪುನೀತ್​​ ನಿಧನದ ಬಳಿಕ ನಡೆದ 10 ಪ್ರಮುಖ ಘಟನೆಗಳೇನು?
ಪುನೀತ್​ ರಾಜ್​ಕುಮಾರ್
Follow us
| Updated By: ಮದನ್​ ಕುಮಾರ್​

Updated on: Dec 29, 2021 | 2:02 PM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರನ್ನು ಅ.29ರಂದು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ಆ ನೋವು ಎಂದಿಗೂ ಮಾಸುವಂಥದ್ದಲ್ಲ. ಅವರ ನೆನಪು ಸದಾ ಹಸಿರಾಗಿ ಇರುತ್ತದೆ. ಪುನೀತ್​ ರಾಜ್​ಕುಮಾರ್​ ನಿಧನರಾಗಿ ಇಂದಿಗೆ (ಡಿ.29) ಎರಡು ತಿಂಗಳು ಕಳೆದಿದೆ. ಅವರ ಸ್ಮರಣಾರ್ಥ ಅನೇಕ ಕೆಲಸಗಳು ನಡೆಯುತ್ತಿವೆ. ಅಪ್ಪು ಕೇವಲ ನಟನಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಯಾರಿಗೂ ತಿಳಿಯದ ಹಾಗೆ ಅವರು ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ಅವರ ನಿಧನದಿಂದ (Puneeth Rajkumar Death) ಇಡೀ ಸಮಾಜಕ್ಕೆ ಸಿಡಿಲು ಬಡಿದಂತೆ ಆಯಿತು. ಅಪ್ಪು ವಿಧಿವಶರಾದ ಬಳಿಕ ಅನೇಕ ಘಟನೆಗಳು ನಡೆದವು. ಅವುಗಳಲ್ಲಿ ಪ್ರಮುಖ 10 ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.. 

ಒಂದು: ಹೃದಯದ ಬಗ್ಗೆ ಹೆಚ್ಚಿತು ಕಾಳಜಿ

ಪುನೀತ್​ ರಾಜ್​ಕುಮಾರ್​ ಅವರು ಫಿಟ್ನೆಸ್​ಗೆ ಹೆಚ್ಚು ಗಮನ ನೀಡುತ್ತಿದ್ದರು. ಆದರೆ ಅಂಥ ವ್ಯಕ್ತಿಗೆ ಹೃದಯಾಘಾತ ಆಯಿತು ಎಂಬ ಸುದ್ದಿ ತಿಳಿದು ಎಲ್ಲರಿಗೂ ಶಾಕ್​ ಆಯಿತು. ಹಾಗಾಗಿ ಎಲ್ಲರಲ್ಲೂ ಹೃದಯದ ಬಗ್ಗೆ ಕಾಳಜಿ ಹೆಚ್ಚಿತು. ಪ್ರಮುಖವಾಗಿ ಯುವಕರು ಹೃದಯದ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಧಾವಿಸಿದರು.

ಎರಡು: ನೇತ್ರದಾನ ಮಾಡುವವರ ಸಂಖ್ಯೆ ಏರಿಕೆ

ಕಣ್ಣುಗಳನ್ನು ದಾನ ಮಾಡುವ ಮೂಲಕ ಪುನೀತ್​ ರಾಜ್​ಕುಮಾರ್​ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರಿಂದ ಪ್ರೇರಣೆ ಪಡೆದು ಈಗ ಅನೇಕರು ನೇತ್ರದಾನ ಮಾಡುತ್ತಿದ್ದಾರೆ. ಅಪ್ಪು ನಿಧನದ ಬಳಿಕ ನೇತ್ರದಾನ ನೋಂದಣಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಮೂರು: ಫ್ಯಾನ್ಸ್​ ವಾರ್​ ಕೈಬಿಡಲು ನಿರ್ಧಾರ

ಚಿತ್ರರಂಗದಲ್ಲಿ ಸ್ಟಾರ್​ ನಟರ ಅಭಿಮಾನಿಗಳ ನಡುವೆ ಕಚ್ಚಾಟ ಇದ್ದೇ ಇರುತ್ತದೆ. ಆದರೆ ಪುನೀತ್​ ನಿಧನದ ಬಳಿಕ ಎಲ್ಲರಲ್ಲೂ ಮನಪರಿವರ್ತನೆ ಆದಂತೆ ಅನಿಸಿತು. ಜೀವನ ನಶ್ವರ ಎಂಬ ಭಾವ ಅಭಿಮಾನಿಗಳನ್ನು ಆವರಿಸಿತು. ಇನ್ಮುಂದೆ ಸ್ಟಾರ್​ ವಾರ್​ ಬೇಡ ಎಂದು ಫ್ಯಾನ್ಸ್​ ಪೇಜ್​ಗಳಲ್ಲಿ ಪೋಸ್ಟ್​ ಮಾಡಲಾಯಿತು. ಇದು ಚಿತ್ರರಂಗದ ಪಾಲಿಗೆ ಒಳ್ಳೆಯ ಬೆಳವಣಿಗೆ.

ನಾಲ್ಕು: ಅಪ್ಪುಗೆ ಕರ್ನಾಟಕ ರತ್ನ ಘೋಷಣೆ

ಪುನೀತ್​ ರಾಜ್​ಕುಮಾರ್​ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಐದು: ಜನಪರ ಕಾರ್ಯಗಳ ಬಗ್ಗೆ ಜನರ ಆಸಕ್ತಿ

ಪುನೀತ್​ ಅವರು ಮಾಡುತ್ತಿದ್ದ ಜನಪರ ಕಾರ್ಯಗಳು ಬೆಳಕಿಗೆ ಬಂದ ಬಳಿಕ ಅಭಿಮಾನಿಗಳ ಮೇಲೆ ಪ್ರಭಾವ ಬೀರಿವೆ. ಬಡಮಕ್ಕಳಿಗೆ ನೋಟ್​ಬುಕ್​ ವಿತರಿಸುವುದು, ಶಿಕ್ಷಣಕ್ಕೆ ಸಹಾಯ ಮಾಡುವುದು ಮುಂತಾದ ಜನಪರ ಕಾರ್ಯಗಳನ್ನು ಮಾಡಲು ಅಭಿಮಾನಿಗಳು ಮುಂದೆಬರುತ್ತಿದ್ದಾರೆ.

ಆರು:  ರಸ್ತೆ, ವೃತ್ತಗಳಿಗೆ ಅಪ್ಪು ಹೆಸರು

ಅನೇಕ ಊರುಗಳ ರಸ್ತೆಗಳಿಗೆ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಇಡಲಾಗಿದೆ. ಆ ಮೂಲಕ ಅವರ ಹೆಸರನ್ನು ಅಜರಾಮರ ಆಗಿಸುವ ಪ್ರಯತ್ನ ನಡೆದಿದೆ. ಇಂಥ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಏಳು: ಸಮಾಧಿಗೆ ಹರಿದುಬಂದ ಜನಸಾಗರ

ಯಾವುದೇ ಸೆಲೆಬ್ರಿಟಿಯ ಅಂತಿಮ ದರ್ಶನಕ್ಕೆ ಜನಸಾಗರ ಹರಿದುಬರುವುದು ಸಹಜ. ಪುನೀತ್​ ವಿಚಾರದಲ್ಲಿ ಅಭಿಮಾನಿಗಳ ಪ್ರೀತಿ ಇನ್ನಷ್ಟು ವಿಶೇಷ. ಅಪ್ಪು ಅಂತ್ಯ ಸಂಸ್ಕಾರದ ಬಳಿಕ ಅವರ ಸಮಾಧಿ ನೋಡಲು ಲಕ್ಷಾಂತರ ಜನರು ಬಂದಿದ್ದಾರೆ. ಇಂದಿಗೂ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ. ಅದೊಂದು ಬಗೆಯ ಜಾಗ್ರತ ಜಾಗವಾಗಿ ಮಾರ್ಪಟ್ಟಿದೆ.

ಎಂಟು: ಪುನೀತ್​ ನಿವಾಸಕ್ಕೆ ಪರಭಾಷೆ ಸ್ಟಾರ್​ಗಳ ಭೇಟಿ

ಎಲ್ಲ ಚಿತ್ರರಂಗದ ಜೊತೆಗೆ ಪುನೀತ್​ ರಾಜ್​ಕುಮಾರ್ ಅವರು ಸ್ನೇಹ ಹೊಂದಿದ್ದರು. ಅಪ್ಪು ನಿಧನದ ಸುದ್ದಿ ತಿಳಿದು ಎಲ್ಲರಿಗೂ ಶಾಕ್​ ಆಗಿತ್ತು. ತೆಲುಗು, ತಮಿಳು ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರು ಪುನೀತ್​ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು.

ಒಂಭತ್ತು: ಜಿಮ್​ ಬಗ್ಗೆ ಭಯ

ಪುನೀತ್​ ಅವರ ಹೃದಯಾಘಾತಕ್ಕೂ ಜಿಮ್​ನಲ್ಲಿ ವರ್ಕೌಟ್​ ಮಾಡಿದ್ದಕ್ಕೂ ಸಂಬಂಧ ಇದೆ ಎಂದು ಕೆಲವರು ನಂಬಿದ್ದಾರೆ. ಹಾಗಾಗಿ ತಮ್ಮ ಮಕ್ಕಳನ್ನು ಜಿಮ್​ಗೆ ಕಳಿಸಲು ಪೋಷಕರು ಭಯಪಡುತ್ತಿದ್ದಾರೆ. ಆ ಕಾರಣದಿಂದ ಯುವಕರು ಜಿಮ್​ನತ್ತ ತೆರಳುವುದು ಕಮ್ಮಿ ಆಗಿದೆ.

ಹತ್ತು: ಗಂಧದ ಗುಡಿ ಬಗ್ಗೆ ಮೂಡಿದೆ ಬೆಟ್ಟದಷ್ಟು ನಿರೀಕ್ಷೆ

ಪುನೀತ್​ ಅವರು ನಿಧನರಾಗುವುದಕ್ಕೂ ಮುನ್ನ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಅವರ ನಿಧನದ ಬಳಿಕ ಇದರ ಟೀಸರ್​ ಬಿಡುಗಡೆ ಆಗಿದೆ. ಅದನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಅವರಂಥ ದಿಗ್ಗಜ ನಿರ್ದೇಶಕರು ಕೂಡ ‘ಗಂಧದ ಗುಡಿ’ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ:

‘ಶಿವಣ್ಣ, ನಾನು ದೇಹದಾನ ಮಾಡಿದ್ದೇವೆ’: ಅಪ್ಪು ನೆನಪಲ್ಲಿ ರಾಘಣ್ಣ ಹೇಳಿದ ಮಹತ್ವದ ವಿಚಾರಗಳು ಇಲ್ಲಿವೆ

ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್​ ನಿಧನರಾಗಿ ಇಂದಿಗೆ 2 ತಿಂಗಳು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ