ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ

Kiccha Kiran: ಸುದೀಪ್​ ಬಾಡಿಗಾರ್ಡ್​ ಕಿರಣ್​ ಅವರನ್ನು ಎಲ್ಲರೂ ಕಿಚ್ಚ ಕಿರಣ್​ ಎಂದು ಕರೆಯುತ್ತಾರೆ. ಅವರ ಜತೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಮಾತನಾಡಿದರು.

ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ
ಕಿಚ್ಚ ಕಿರಣ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ
Follow us
TV9 Web
| Updated By: ಮದನ್​ ಕುಮಾರ್​

Updated on: Dec 20, 2021 | 9:37 AM

ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಅವರ ಪತಿ ರಣವೀರ್​ ಸಿಂಗ್​ ಕೂಡ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬೆಂಗಳೂರಿನಲ್ಲಿ ಅವರನ್ನು ಇಷ್ಟಪಡುವ ಅಪಾರ ಸಂಖ್ಯೆಯ ಜನರಿದ್ದಾರೆ. ದೀಪಿಕಾ ಮತ್ತು ರಣವೀರ್​ ಸಿಂಗ್​ (Ranveer Singh) ಜತೆಯಾಗಿ ‘83’ ಸಿನಿಮಾದಲ್ಲಿ ನಟಿಸಿದ್ದಾರೆ. ಡಿ.24ರಂದು ಈ ಚಿತ್ರ ((83 Movie) ಬಿಡುಗಡೆ ಆಗಲಿದೆ. ಅದರ ಪ್ರಚಾರ ಕಾರ್ಯದ ಸಲುವಾಗಿ ಇತ್ತೀಚೆಗೆ ರಣವೀರ್​ ಸಿಂಗ್​ ಅವರು ಬೆಂಗಳೂರಿಗೆ ಬಂದಿದ್ದರು. ಆ ವೇಳೆ ಅವರು ದೀಪಿಕಾಗೆ ವಿಡಿಯೋ ಕಾಲ್​ ಮಾಡಿ, ಕಿಚ್ಚ ಸುದೀಪ್​ (Kichcha Sudeep) ಅವರ ಪರ್ಸನಲ್​ ಬಾಡಿಗಾರ್ಡ್​ ಜೊತೆ ಮಾತನಾಡಿಸಿದ್ದಾರೆ!

ಕಿಚ್ಚ ಸುದೀಪ್​ ಅವರ ಬಾಡಿ ಗಾರ್ಡ್ ಕಿರಣ್​ ಅವರಿಗೆ ದೀಪಿಕಾ ಎಂದರೆ ವಿಶೇಷ ಅಭಿಮಾನ. ಅದೇ ರೀತಿ ಅವರು ತಮ್ಮ ಕೈ ಮೇಲೆ ಅನೇಕ ಹೆಸರುಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್​ ಸಿಂಗ್​ ಅಚ್ಚರಿಪಟ್ಟರು. ಅಲ್ಲದೇ ದೀಪಿಕಾಗೆ ವಿಡಿಯೋ ಕಾಲ್​ ಮಾಡಿ ತೋರಿಸಿದರು. ಈ ವೇಳೆ ಸುದೀಪ್​ ಕೂಡ ಜತೆಗಿದ್ದರು.

ಕಿರಣ್​ ಅವರನ್ನು ಎಲ್ಲರೂ ಕಿಚ್ಚ ಕಿರಣ್​ ಎಂದು ಕರೆಯುತ್ತಾರೆ. ಅವರ ಜತೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಮಾತನಾಡಿದರು. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ತಮ್ಮ ನೆಚ್ಚಿನ ನಟಿಯ ಜತೆ ಮಾತನಾಡಿ ಕಿಚ್ಚ ಕಿರಣ್​ ಫುಲ್​ ಖುಷ್​ ಆಗಿದ್ದಾರೆ. ಹಲವು ವರ್ಷಗಳಿಂದ ಅವರು ಸುದೀಪ್​ಗೆ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್​ ಅವರಿಗೆ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅಭಿಮಾನಿಗಳಿದ್ದಾರೆ. ಈಗ ಅವರು ‘83’ ಸಿನಿಮಾವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. 1983ರ ಕ್ರಿಕೆಟ್​ ವಿಶ್ವಕಪ್​ನಲ್ಲಿ ಭಾರತ ತಂಡ ಜಯಶಾಲಿಯಾದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕನ್ನಡಕ್ಕೂ ಡಬ್​ ಆಗಿ ಈ ಚಿತ್ರ ತೆರೆಕಾಣಲಿದೆ. 3ಡಿ ಅವತರಣಿಕೆಯಲ್ಲೂ ಬಿಡುಗಡೆ ಆಗುತ್ತಿದೆ. ಡಿ.18ರಂದು ಬೆಂಗಳೂರಿನಲ್ಲಿ ನಡೆದ ‘83’ ಸುದ್ದಿಗೋಷ್ಠಿಯಲ್ಲಿ ರಣವೀರ್​ ಸಿಂಗ್​ ಮತ್ತು ಕಿಚ್ಚ ಸುದೀಪ್​ ಪಾಲ್ಗೊಂಡಿದ್ದರು. ಈ ವೇಳೆ ರಣವೀರ್​ ಸಿಂಗ್​ ಅವರಿಗೆ ಸುದೀಪ್​ ಕೆಲವು ಕನ್ನಡ ಡೈಲಾಗ್​ ಹೇಳಿಕೊಟ್ಟರು. ಅದನ್ನು ಅಚ್ಚುಕಟ್ಟಾಗಿ ಹೇಳಿದ ರಣವೀರ್​ಗೆ ಎಲ್ಲರಿಂದ ಚಪ್ಪಾಳೆ ಸಿಕ್ಕಿತು. ಈ ಸಿನಿಮಾವನ್ನು ಕಬೀರ್​ ಖಾನ್​ ನಿರ್ದೇಶನ ಮಾಡಿದ್ದಾರೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ.

ಇದನ್ನೂ ಓದಿ:

ಈ ಫೋಟೋಗಾಗಿ 36 ವರ್ಷಗಳಿಂದ ಕಾದಿದ್ದ ಸುದೀಪ್​; ಕಿಚ್ಚನ ಬಾಲ್ಯದ ಕನಸು ಈಗ ನನಸಾಯ್ತು

ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ