‘ಈಗ’ ನಟಿಗೆ ಸ್ತನ ಕ್ಯಾನ್ಸರ್​; ಹೊಸ ಫೋಟೋ ನೋಡಿ ಶಾಕ್​ ಆದ ಅಭಿಮಾನಿಗಳು

Hamsa Nandini: ಹಂಸ ನಂದಿನಿ ಇತ್ತೀಚೆಗೆ ಸೋಶಿಯಲ್​ ಮೀಡಿಯಾದಿಂದ ದೂರವೇ ಉಳಿದಿದ್ದರು. ಅವರು ಯಾವುದೇ ಪೋಸ್ಟ್​ಗಳನ್ನು ಹಾಕಿರಲಿಲ್ಲ. ಇದನ್ನು ಕಂಡು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು.

‘ಈಗ’ ನಟಿಗೆ ಸ್ತನ ಕ್ಯಾನ್ಸರ್​; ಹೊಸ ಫೋಟೋ ನೋಡಿ ಶಾಕ್​ ಆದ ಅಭಿಮಾನಿಗಳು
ಹಂಸ ನಂದಿನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 20, 2021 | 1:50 PM

ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ ಹಂಸ ನಂದಿನಿ (Hamsa Nandini) ಅವರಿಗೆ ಕ್ಯಾನ್ಸರ್​ ಪತ್ತೆ ಆಗಿದೆ. ಅವರನ್ನು ನೋಡಿ ಅಭಿಮಾನಿಗಳು ನಿಜಕ್ಕೂ ಶಾಕ್​ ಆಗಿದ್ದಾರೆ. ಕೂದಲು ಇಲ್ಲದ ತಲೆಯ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಲ್ಲಿ ನಿಜಕ್ಕೂ ಆತಂಕ ಮೂಡಿಸಿದೆ. ಅವರು ಈ ಹೋರಾಟದಲ್ಲಿ ಗೆದ್ದು ಬರಲಿದೆ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕ್ಯಾನ್ಸರ್​ ಪತ್ತೆ ಆದ ಮಧ್ಯೆಯೂ ಅವರ ಪಾಸಿಟಿವಿಟಿ ನೋಡಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಂಸ ನಂದಿನಿ ಇತ್ತೀಚೆಗೆ ಸೋಶಿಯಲ್​ ಮೀಡಿಯಾದಿಂದ ದೂರವೇ ಉಳಿದಿದ್ದರು. ಅವರು ಯಾವುದೇ ಪೋಸ್ಟ್​ಗಳನ್ನು ಹಾಕಿರಲಿಲ್ಲ. ಇದನ್ನು ಕಂಡು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೂಡ ಇಟ್ಟಿದ್ದರು. ಇದೆಲ್ಲದಕ್ಕೂ ಅವರು ಒಂದೇ ಪೋಸ್ಟ್​ ಮೂಲಕ ಉತ್ತರ ನೀಡಿದ್ದಾರೆ. ತಲೆಯ ಕೂದಲನ್ನು ಸಂಪೂರ್ಣವಾಗಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ಕ್ಯಾನ್ಸರ್​ ಇದೆ ಎಂದು ಬರೆದುಕೊಂಡಿದ್ದಾರೆ.

‘ಜೀವನದಲ್ಲಿ ನಡೆಯುವ ಈ ಘಟನೆ ನನಗೆ ಅನ್ಯಾಯವೆಂದು ತೋರುತ್ತದೆಯಾದರೂ, ನಾನು ಬಲಿಪಶು ಆಗೋಕೆ ನಿರಾಕರಿಸುತ್ತೇನೆ. ನನಗೆ ನಾಲ್ಕು ತಿಂಗಳ ಹಿಂದೆ ಸ್ತನ ಕ್ಯಾನ್ಸರ್​ ಪತ್ತೆ ಆಯಿತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಾನು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಗುತ್ತದೆ. ಎಲ್ಲಾ ಅಪಾಯಗಳನ್ನು ತೊಡೆದುಹಾಕುವುದು ಅಸಾಧ್ಯ. ಈ ಕ್ಯಾನ್ಸರ್ ಎಂಬ ಅಪಾಯವು ನಾನು ಬದುಕಿರುವವರೆಗೂ ಇರುತ್ತದೆ. ನಾನು ಈಗಾಗಲೇ 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಈ ಥೆರಪಿಗೆ ಒಳಗಾಗಬೇಕು’ ಎಂದು ಅವರು ಬರೆದುಕೊಂಡಿದ್ದಾರೆ. ಈಗ ಅವರ ಒಂದು ಸ್ತನಕ್ಕೆ ಮಾತ್ರ ಕ್ಯಾನ್ಸರ್​ ಇದ್ದು, ಮತ್ತೊಂದು ಸ್ತನಕ್ಕೂ ಈ ಕ್ಯಾನ್ಸರ್​ ಹಬ್ಬುವ ಸಾಧ್ಯತೆ ಶೇ. 70 ಇದೆಯಂತೆ.

2004ರಲ್ಲಿ ಹಂಸ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2006ರಲ್ಲಿ ತೆರೆಗೆ ಬಂದ ಕನ್ನಡದ ‘ಮೋಹಿನಿ 9886788888’ ಸಿನಿಮಾ ಮೂಲಕ ಅವರು ಸ್ಯಾಂಡಲ್​ವುಡ್​ಗೂ ಕಾಲಿಟ್ಟರು. ಪ್ರಭಾಸ್​ ನಟನೆಯ ‘ಮಿರ್ಚಿ’ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರೆ, ಸುದೀಪ್​ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. 2018ರಲ್ಲಿ ಬಂದ ‘ಪಂತಂ’ ಸಿನಿಮಾ ಕೊನೆ. ಅದಾದ ನಂತರ ಅವರು ಯಾವುದೇ ಚಿತ್ರಗಳಲ್ಲೂ ನಟಿಸಿಲ್ಲ.

ಇದನ್ನೂ ಓದಿ:ನಟಿ ಐಶ್ವರ್ಯಾ ರೈ ಬಚ್ಚನ್​ಗೆ ಇಡಿ ಸಮನ್ಸ್​; ಪನಾಮಾ ಪೇಪರ್ಸ್​ ಲೀಕ್​ ಪ್ರಕರಣದಲ್ಲಿ ಮತ್ತೆ ಸಂಕಷ್ಟ 

ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್