ದೀಪಿಕಾ ಪಡುಕೋಣೆ ವಿಡಿಯೋ ಕಾಲ್ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಯಾರ ಜತೆಗೆ?
ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಕಿರಣ್ ಅವರಿಗೆ ದೀಪಿಕಾ ಎಂದರೆ ವಿಶೇಷ ಅಭಿಮಾನ. ಅದೇ ರೀತಿ ಅವರು ತಮ್ಮ ಕೈ ಮೇಲೆ ಅನೇಕ ಹೆಸರುಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್ ಸಿಂಗ್ ಅಚ್ಚರಿಪಟ್ಟರು.
ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅವರ ಪತಿ ರಣವೀರ್ ಸಿಂಗ್ ಕೂಡ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬೆಂಗಳೂರಿನಲ್ಲಿ ಅವರನ್ನು ಇಷ್ಟಪಡುವ ಅಪಾರ ಸಂಖ್ಯೆಯ ಜನರಿದ್ದಾರೆ. ದೀಪಿಕಾ ಮತ್ತು ರಣವೀರ್ ಸಿಂಗ್ (Ranveer Singh) ಜತೆಯಾಗಿ ‘83’ ಸಿನಿಮಾದಲ್ಲಿ ನಟಿಸಿದ್ದಾರೆ. ಡಿ.24ರಂದು ಈ ಚಿತ್ರ ((83 Movie) ಬಿಡುಗಡೆ ಆಗಲಿದೆ. ಅದರ ಪ್ರಚಾರ ಕಾರ್ಯದ ಸಲುವಾಗಿ ಇತ್ತೀಚೆಗೆ ರಣವೀರ್ ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದರು. ಆ ವೇಳೆ ಅವರು ದೀಪಿಕಾಗೆ ವಿಡಿಯೋ ಕಾಲ್ ಮಾಡಿ, ಕಿಚ್ಚ ಸುದೀಪ್ (Kichcha Sudeep) ಅವರ ಪರ್ಸನಲ್ ಬಾಡಿಗಾರ್ಡ್ ಜೊತೆ ಮಾತನಾಡಿಸಿದ್ದಾರೆ! ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಕಿರಣ್ ಅವರಿಗೆ ದೀಪಿಕಾ ಎಂದರೆ ವಿಶೇಷ ಅಭಿಮಾನ. ಅದೇ ರೀತಿ ಅವರು ತಮ್ಮ ಕೈ ಮೇಲೆ ಅನೇಕ ಹೆಸರುಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್ ಸಿಂಗ್ ಅಚ್ಚರಿಪಟ್ಟರು. ಅಲ್ಲದೇ ದೀಪಿಕಾಗೆ ವಿಡಿಯೋ ಕಾಲ್ ಮಾಡಿ ತೋರಿಸಿದರು. ಈ ವೇಳೆ ಸುದೀಪ್ ಕೂಡ ಜತೆಗಿದ್ದರು.
ಇದನ್ನೂ ಓದಿ: ಸಹ ನಟನಿಗೆ ದೀಪಿಕಾ ಪಡುಕೋಣೆ ಕಿಸ್; ವೈರಲ್ ಆಗುತ್ತಿದೆ ಹೊಸ ಸಿನಿಮಾದ ಟೀಸರ್