ಸಹ ನಟನಿಗೆ ದೀಪಿಕಾ ಪಡುಕೋಣೆ ಕಿಸ್​; ವೈರಲ್​ ಆಗುತ್ತಿದೆ ಹೊಸ ಸಿನಿಮಾದ ಟೀಸರ್​

ಸಹ ನಟನಿಗೆ ದೀಪಿಕಾ ಪಡುಕೋಣೆ ಕಿಸ್​; ವೈರಲ್​ ಆಗುತ್ತಿದೆ ಹೊಸ ಸಿನಿಮಾದ ಟೀಸರ್​
ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ

Gehraiyaan Teaser: ‘ಗೆಹರಾಯಿಯಾ’ ಚಿತ್ರವನ್ನು ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಿದೆ. ನೇರವಾಗಿ ಒಟಿಟಿ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ.

TV9kannada Web Team

| Edited By: Madan Kumar

Dec 20, 2021 | 1:23 PM

ಮದುವೆ ಆದ ಬಳಿಕ ಕೆಲವು ನಟಿಯರು ಪಾತ್ರಗಳ ಆಯ್ಕೆಯಲ್ಲಿ ಹುಷಾರಾಗಿ ಬಿಡುತ್ತಾರೆ. ಬೋಲ್ಡ್​ ದೃಶ್ಯಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ಕಿಸ್ಸಿಂಗ್​ ಮುಂತಾದ ಸೀನ್​ಗಳಿಗೆ ನೋ ಎನ್ನುತ್ತಾರೆ. ಆದರೆ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಭಿನ್ನ ನಿಲುವು ತಾಳಿದ್ದಾರೆ. ಅವರ ಹೊಸ ಸಿನಿಮಾ ‘ಗೆಹರಾಯಿಯಾ’ ಟೀಸರ್​ (Gehraiyaan Teaser) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ‘ಗಲ್ಲಿ ಬಾಯ್​’ ಖ್ಯಾತಿಯ ಸಿದ್ಧಾಂತ್ ಚತುರ್ವೇದಿ (Siddhant Chaturvedi), ಅನನ್ಯಾ ಪಾಂಡೆ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದ ಟೀಸರ್​ನಲ್ಲಿ ಸಿದ್ಧಾಂತ್​ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ನಡುವಿನ ಕಿಸ್ಸಿಂಗ್​ (Siddhant Chaturvedi Deepika Padukone Kiss) ದೃಶ್ಯ ಹೈಲೈಟ್​ ಆಗಿದೆ. ಆ ಕಾರಣದಿಂದ ಈ ಟೀಸರ್​ ಸಖತ್​ ವೈರಲ್​ ಆಗುತ್ತಿದೆ.

‘ಗೆಹರಾಯಿಯಾ’ ಸಿನಿಮಾ ತುಂಬ ರೊಮ್ಯಾಂಟಿಕ್​ ಆದಂತಹ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಈ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ಸಿನಿಮಾವನ್ನು ಶಕುನ್​ ಭಾತ್ರ ನಿರ್ದೇಶನ ಮಾಡಿದ್ದಾರೆ. ಈ ಪ್ರಾಜೆಕ್ಟ್​ ಬಗ್ಗೆ ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪ್ರೀತಿ ಇದೆ. ಆ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ತುಂಬ ಕಾದು ಪಡೆದುಕೊಳ್ಳುವಂಥದ್ದನ್ನು ನೀವು ಹೆಚ್ಚು ಇಷ್ಟಪಡುತ್ತೀರಿ. ಈ ಸಿನಿಮಾ ವಿಚಾರದಲ್ಲಿ ಹಾಗೆಯೇ ಆಗಿದೆ. ನಿಜಕ್ಕೂ ಮ್ಯಾಜಿಕಲ್​ ಆದಂತಹ ಒಂದು ಕಲಾಕೃತಿಯ ಭಾಗವಾಗಲು ನನಗೆ ಅವಕಾಶ ಸಿಕ್ಕಿತು’ ಎಂದು ಬರೆದುಕೊಂಡಿರುವ ಅವರು, ಸಿನಿಮಾದ ಟೀಸರ್​ ಹಂಚಿಕೊಂಡಿದ್ದಾರೆ. ಶೂಟಿಂಗ್​ ಸಂದರ್ಭದ ಕೆಲವು ಫೋಟೋಗಳನ್ನು ಕೂಡ ಶೇರ್​ ಮಾಡಿಕೊಂಡಿದ್ದಾರೆ.

ಅಂದಹಾಗೆ, ಈ ಚಿತ್ರವನ್ನು ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಿದೆ. ನೇರವಾಗಿ ಒಟಿಟಿ ಮೂಲಕ ‘ಗೆಹರಾಯಿಯಾ’ ಬಿಡುಗಡೆ ಆಗಲಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ 2022ರ ಜ.25ರಂದು ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಟೀಸರ್​ನಲ್ಲಿ ಇರುವ ಶೀರ್ಷಿಕೆ ಗೀತೆ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. 2020ರಲ್ಲಿ ಈ ಚಿತ್ರದ ಶೂಟಿಂಗ್​ ಆರಂಭ ಆಗಿತ್ತು. ಗೋವಾ, ಮುಂಬೈ, ಅಲಿಬಾಗ್​ ಮುಂತಾದ ಕಡೆಗಳಲ್ಲಿ ಇದರ ಚಿತ್ರೀಕಣ ನಡೆದಿದೆ.

ದೀಪಿಕಾ ಪಡುಕೋಣೆ ಅವರು ಬಹುನಿರೀಕ್ಷಿತ ‘83’ ಸಿನಿಮಾದಲ್ಲೂ ನಟಿಸಿದ್ದಾರೆ. 1983ರ ಕ್ರಿಕೆಟ್​ ವಿಶ್ವಕಪ್​ ಕುರಿತು ಈ ಸಿನಿಮಾ ತಯಾರಾಗಿದೆ. ಕಪಿಲ್​ ದೇವ್​ ಪಾತ್ರವನ್ನು ರಣವೀರ್​ ಸಿಂಗ್​ ನಿಭಾಯಿಸಿದ್ದರೆ, ಕಪಿಲ್​ ದೇವ್ ಪತ್ನಿಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ. ಡಿ.24ರಂದು ‘83’ ಸಿನಿಮಾ ವಿಶ್ವಾದ್ಯಂತ ತೆರೆಕಾಣುತ್ತಿದೆ. ಕನ್ನಡಕ್ಕೂ ಡಬ್​ ಆಗಿರುವ ಈ ಚಿತ್ರವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್​ ಪ್ರಸ್ತುತ ಪಡಿಸುತ್ತಿದ್ದಾರೆ.

ಇದನ್ನೂ ಓದಿ:

ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ

ಮದುವೆಗೂ ಮುನ್ನ ಬುರ್ಕಾ ಧರಿಸುತ್ತಿದ್ದ ದೀಪಿಕಾ; ಯಾರಿಗೂ ತಿಳಿದಿರದ ರಹಸ್ಯ ಈಗ ಬಯಲಾಯ್ತು

Follow us on

Related Stories

Most Read Stories

Click on your DTH Provider to Add TV9 Kannada