ಜಾತ್ರೆಯಲ್ಲೂ ಅಪ್ಪು ಅಭಿಮಾನದ ಹೊಳೆ; ‘ಮತ್ತೆ ಹುಟ್ಟಿ ಬನ್ನಿ’ ಎಂದು ವಿಶೇಷವಾಗಿ ಪ್ರಾರ್ಥಿಸಿದ ಫ್ಯಾನ್ಸ್​

ಪ್ರತಿ ವಿಶೇಷ ಸಂದರ್ಭದಲ್ಲೂ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.

TV9kannada Web Team

| Edited By: Madan Kumar

Dec 20, 2021 | 3:33 PM

ಕನ್ನಡ ಸಿನಿಪ್ರಿಯರು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅಪ್ಪು ಅವರನ್ನು ಕಳೆದುಕೊಂಡು ಸ್ಯಾಂಡಲ್​ವುಡ್​ ಬಡವಾಗಿದೆ. ಅಭಿಮಾನಿಗಳು ಕೂಡ ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಪುನೀತ್​ ನಿಧನರಾಗಿ ಅನೇಕ ದಿನಗಳು ಕಳೆದಿವೆ. ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲೂ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು (Lingasugur) ತಾಲೂಕಿನ ಕಸಬಾ ಲಿಂಗಸಗೂರು ಜಾತ್ರೆಯ ರಥೋತ್ಸವ ನಡೆದಿದೆ. ಈ ವೇಳೆ ಅಭಿಮಾನಿಗಳು ಬಾಳೆ ಹಣ್ಣಿನ ಮೇಲೆ ‘ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ಮತ್ತೆ ಹುಟ್ಟಿ ಬನ್ನಿ’ ಎಂದು ಬೆರೆದಿದ್ದಾರೆ. ಆ ಬಾಳೆ ಹಣ್ಣುಗಳನ್ನು ದೇವರಿಗೆ ಅರ್ಪಿಸುವ ಮೂಲಕ ಅಪ್ಪುಗಾಗಿ ಪ್ರಾರ್ಥಿಸಲಾಗಿದೆ. ಈ ವಿಡಿಯೋ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ಗಾಗಿ ಫ್ಯಾನ್ಸ್​ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ

ಪುನೀತ್​ ರಾಜ್​ಕುಮಾರ್ ಸಾಧನೆಗಳನ್ನು ಸದನದಲ್ಲಿ ಸಾರಿ ಸಾರಿ ಹೇಳಿದ ಸ್ಪೀಕರ್​ ಕಾಗೇರಿ

Follow us on

Click on your DTH Provider to Add TV9 Kannada